ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲಕ್ಷ್ಮೀ ಭುವನೇಶ್ವರಿ ದೇವಾಸ್ಥಾನಕ್ಕೆ ದುಷ್ಕರ್ಮಿಯೋರ್ವ ನುಗ್ಗಿ ವಿಗ್ರಹ ದೇವಸ್ಥಾನದಲ್ಲಿನ ದೇವಿಯ ವಿಗ್ರಹವನ್ನು ವಿರೂಪಗೊಳಿಸಿ ವಿಕೃತಿ ಮೆರೆದ ಘಟನೆ ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಟಿಶರ್ಟ್‌ನಿಂದ ಮುಖ ಮುಚ್ಚಿಕೊಂಡು ದೇವಸ್ಥಾನದೊಳಕ್ಕೆ ನುಗ್ಗಿದ ದುಷ್ಕರ್ಮಿ ಕಲ್ಲಿನಿಂದ ದೇವಿಯ ಮೂರ್ತಿ ವಿರೂಪಗೊಳಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಮಾಹಿತಿ ತಿಳಿದು ಸ್ಥಳೀಯರು, ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವರ ವಿಗ್ರಹ ವಿರೂಪಗೊಳಿಸಿದ ದುಷ್ಕರ್ಮಿಗಳ ಬಂಧನಕ್ಕೆ ಹಿಂದೂ ಸಂಘಟನೆಗಳು ಆಗ್ರಹಿಸಿದ್ದು, ಘಟನೆ ಸಂಬಂಧ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ.