ಮಾರಮ್ಮ ಮ್ಯಾಸರ ಶಕ್ತಿ ದೇವತೆ, ಪಶುಪಾಲಕರ ಬುಡಕಟ್ಟುಗಳ ಆರಾಧ್ಯ ದೈವ

News Desk

ನೆಲದ ಮಾತು-63
ವಿವಿಧ ಕಾಲಘಟ್ಟಗಳಲ್ಲಿ ಬದುಕಿದ್ದ
, ಪಂಚಗಣಾದೀಶ್ವರರ ಜೊತೆಯಲ್ಲಿ ತಿಪ್ಪಯ್ಯನನ್ನ ತಳುಕಾಕಿ ನೋಡಿದಾಗಲೇ, ಆ ಸಂಶೋಧಕನ ಸತ್ಯಶೋಧನೆ ಹಳ್ಳ ಹಿಡಿದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ .12ನೇ ಶತಮಾನದ ಬಸವೇಶ್ವರರ ಜೊತೆಯಾದರೂ ಕಲ್ಪಿಸಿಕೊಂಡಿದ್ದರೆ,ಈ ಮ್ಯಾಸ ಕುಲದ ಒಬ್ಬ ಶರಣ, ಆ ಕ್ರಾಂತಿಕಾರಿ ಗುರುವಿನ ಜೊತೆ ಇದ್ರೂ ಅನ್ನುವ, ಸಮಾಧಾನವಾದರೂ ಈ ಸಮುದಾಯಗಳಿಗೆ ಖುಷಿ ತರುತ್ತಿತ್ತೇನೋ?

16ನೇ ಶತಮಾನದ ಹಿಂದಕ್ಕೆ, ಇತಿಹಾಸ,ಚರಿತ್ರೆಯ,ಆಳಕ್ಕೋಗಿ ಗಮನಿಸಿದಾಗ, ತಿಪ್ಪಯ್ಯ, ತಿಪ್ಪೇಸ್ವಾಮಿ, ತಿಪ್ಪೇರುದ್ರ, ಯಾರಾದರೂ ಒಬ್ಬ ದೈವ, ಶರಣ, ಸಂತ, ಈತನ ಸಂಶೋಧನೆಗೆ ಸಿಕ್ಕಿರಬಹುದೋ ಹೇಗೆ!ಈ ಅವಧೂತ ಪುರಾಣದ ಶಿವಗಣಗಳಲ್ಲೇನಾದರೂ ಇದ್ದಿರಬಹುದೇ? ಶೈವ ಪುರಾಣಗಳಲ್ಲಿ ಎಲ್ಲಾದರೂ, ಈ ಹೆಸರಿನ ಗಣಾಧೀಶರು ಸಿಕ್ಕಿರಬಹುದೇ?( ತಿಪ್ಪಯ್ಯನ ಚರಿತ್ರೆ ಹೊರತುಪಡಿಸಿ)ಈ ತಳಮೂಲದ ಸಂತನನ್ನ ಪೂಜಿಸಿ, ಪ್ರೀತಿಸಿ, ಗೌರವಿಸಿದ ಮೇಲ್ವರ್ಗದ ಸಮುದಾಯಗಳು,

ಅಸ್ಪೃಶ್ಯರ ಪೂಜೆಯನ್ನ ಅಷ್ಟಾಗಿ ಒಪ್ಪಿಕೊಳ್ಳದೆ, ಹೊರಮಠ ನಿರ್ಮಾಣವಾಗಿ, 100 ವರ್ಷಗಳ ನಂತರದಲ್ಲಿ, ಪರ್ಯಾಯವಾಗಿ ಒಳಗುಡಿ, ಗೋಪುರದ ಕಟ್ಟಡಗಳು, ಬಸೆಟಪ್ಪ ಎಂಬ ಭಕ್ತನಿಂದ ಕಟ್ಟಲ್ಪಟ್ಟಿದೆಯೆಂದು ಜನಪದದ ದಾಖಲೆಗಳಲ್ಲಿ ಉಲ್ಲೇಖವಿದೆ. ವಾಸ್ತವದಲ್ಲಿ ತಿಪ್ಪಯ್ಯನಿಗೆ ಒಳಗುಡಿಯ ಪರಿಚಯವೇ ಇಲ್ಲವೆಂಬುದು ಇಲ್ಲಿ ಸ್ಪಷ್ಟವಾಗಿ ಕಾಣಲ್ಪಡುತ್ತದೆ.

ಒಳಗುಡಿಯ ಸ್ಥಳ,ಆ ಸಂತ ಧ್ಯಾನಾಸಕ್ತನಾಗಲು ಬಳಸಿಕೊಳ್ಳುತ್ತಿದ್ದ, ವಡ್ನಳ್ಳಿ ಮಾರಮ್ಮನ ಗುಡಿಯೇ ಆಗಿದ್ದಿರಬೇಕು, ಮಾಂಸದ ಎಡೆ ನೈವೇದ್ಯ ಪೂಜೆಯ, ಮೂಲಗುಡಿಯಾಗಿರುವ ಹೊರ ಮಠಕ್ಕೆ, ಮೇಲ್ವರ್ಗದವರು ಬರಲು ಮನಸ್ಸಾಗದೆ, ಮಡಿವಂತಿಕೆಯ ಒಳಗುಡಿ ಹುಟ್ಟಿಕೊಂಡಿರಬಹುದನೋ? ಇದು ವರ್ತಮಾನದಲ್ಲಿ ಕಣ್ಣಿಗೆ ಕಾಣುತ್ತಿರುವ ವಾಸ್ತವ.

 ಬ್ಯಾಡರ ಸಂಗಾಕೆ
ಹೋದಾನೆ ತಿಪ್ಪಯ್ಯ
ಮದ್ದು ಮಾಂಸಗಳ ಮಾಡೆಂದ
ಹೊರಮಠಕ್ಕೆ ಎಡೆಯೇ
ತಿಪ್ಪಯ್ಯಾಗೆ ಇರಲೆಂದ

ಇಂತಹ ಬಹುತೇಕ ಜನಪದದ ಗೀತೆಗಳು, ಚಿತ್ರದುರ್ಗ ಜಿಲ್ಲೆಯ ಹಳ್ಳಿ ಗಾಡುಗಳಲ್ಲಿ ಹರಿದಾಡುತ್ತಿವೆ. ಇತಿಹಾಸದ ಕಹಿ ಸತ್ಯಗಳನ್ನು ಬಿಚ್ಚಿಡುವ ಈ ಸಾಲುಗಳನ್ನ, ಡಾ.ಮೀರಾಸಾಬಿಹಳ್ಳಿ ಶಿವಣ್ಣನವರು ತುಂಬಾ ಅಚ್ಚುಕಟ್ಟಾಗಿ ಶೇಖರಿಸಿಟ್ಟಿದ್ದಾರೆ. ಅವರ “ನಾಯಕನಹಟ್ಟಿ ಪಾಳೇಗಾರರು” ಕೃತಿಯಲ್ಲಿ ಉಲ್ಲೇಖವಿದೆ ಮಾರಮ್ಮ ಮ್ಯಾಸರ ಶಕ್ತಿ ದೇವತೆ, ಪಶುಪಾಲಕರ ಬುಡಕಟ್ಟುಗಳ ಆರಾಧ್ಯ ದೈವ.

 ವಡ್ಣಳ್ಳಿ ಮಾರಮ್ಮನ ಭಕ್ತರಿಗೆ,ಭಯ ಭಕ್ತಿಗಳಿಂದ ಪೂಜಿಸಲು ಬಿಟ್ಟು,ಜೋಳಿಗೆ, ಬೆತ್ತ ತೋರಿಸಿ,ಮಾರಮ್ಮನನ್ನ ಓಡಿಸಲಾಗಿದೆ ಎಂದು ಬಿಂಬಿಸಿ,ಸಮುದಾಯದ ದೈವಗಳನ್ನು ಅಪನಂಬಿಕೆಯಲ್ಲಿಡಲಾಗಿದೆ. ಮ್ಯಾಸರ ಕುಲ ದೈವ, ತಿಪ್ಪಯ್ಯ,ಮಾರಮ್ಮನಿಗೆ ಕಲ್ಪಿತ ಕಥೆ ಕಟ್ಟಿ, ತಳಮೂಲದ ಪ್ರಭಾವಶಾಲಿ ಅವದೂತನನ್ನ,ಮೇಲ್ವರ್ಗದವರಿಗೆ ಬೇಕಾದಂತ ರೀತಿಯಲ್ಲಿ ಉನ್ನತೀಕರಿಸಿ,ನೋಡಲಾಗಿದೆ.

ಮಾರಿ ಜಾತ್ರೆಗಳಲ್ಲಿ ಸೇವೆಗೈಯ್ಯುವ ಬಸವಿ, ಓಕಳಿ,ಇತ್ಯಾದಿ ಆಚರಣೆಗಳು ಇಂದಿಗೂ ಸಹ ತಿಪ್ಪಯ್ಯನಿಗೆ ಸಲ್ಲುತ್ತಿವೆ.ತಲೆಮಾರುಗಳಿಂದ ಜನಪದದ ಭಕ್ತಿ ಭಾವದ ಧ್ವನಿಯಾದಂತಹ,ಹಟ್ಟಿ ಅವಧೂತನನ್ನ ಮೇಲ್ವರ್ಗದವರು ಕಬಳಿಸಿ, ರುದ್ರ,ರುದ್ರಯ್ಯ,ರುದ್ರಸ್ವಾಮಿ,ರುದ್ರಮುನಿಯೆಂದು ಕರೆದು,ಒಬ್ಬ ಕಾಡು ಕುಲದ ಸಂತನ ಚರಿತ್ರೆಗೆ ಅಪಮಾನವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕಲ್ಪಿತ ಕಥೆಗಳಾದ ಟಿಪ್ಪು, ಹೈದರಾಲಿಯನ್ನು ಹೆಸರಿಸಿ, ಹೊರಮಠವನ್ನು ಕಟ್ಟಿಸಿದ್ದು, ಅವರೆಂದು ಹೇಳಲಾಗುತ್ತಿದೆ. ಇದು ಅಪಪ್ರಚಾರದ ಮತ್ತೊಂದು ಹುನ್ನಾರ.17ನೇ ಶತಮಾನದ ಸುಮಾರಿನಲ್ಲಿ, ದುರ್ಗದ ದೊರೆ ಭರಮಣ್ಣನಾಯಕರು ಆದೇಶಿಸಿದಂತೆ,ಇವರ ಆಡಳಿತದಲ್ಲಿ ಅಧಿಕಾರಿಗಳಾಗಿ ಸೇವೆಯಲ್ಲಿದ್ದಂತಹ, ಗುಂಟನೂರು ಮಲ್ಲಪ್ಪ, ಹಾಗೂ ನರಸಯ್ಯನವರು ಸಮಾಧಿಯನ್ನು ಕಟ್ಟಿಸಿ,ಹಟ್ಟಿ ತಿಪ್ಪಯ್ಯನ ಸಮಾಧಿಯೆಂಬುದಾಗಿ ದಾಖಲೆಗಳಲ್ಲಿ ಉಲ್ಲೇಖವಿದೆ.

ಮದ್ದು, ಮಾಂಸದ ಎಡೆ ಬೇಡುವ ತಿಪ್ಪಯ್ಯ,ಇಂದಿಗೂ ಹೊರಮಠದ, ಸಮಾಧಿಸ್ತರದ ಸ್ಥಳದಲ್ಲಿಯೇ,ತನ್ನ ಕುಲದವರಿಂದಲೇ ಆರಾದಿಸಿಕೊಳ್ಳುತ್ತಿರುವುದರ ಅರ್ಥವೇನು?ತಿಪ್ಪಯ್ಯ ಯಾವ ಕುಲದವರೆಂದು ಇತಿಹಾಸ ಹೇಳುತ್ತದೆ?ದಾರ್ಶನಿಕರನ್ನ ಕುಲಗಳಲ್ಲಿ ಇಟ್ಟು ನೋಡಬಾರದೆಂಬುದನ್ನು ಮಂಡಿಸುತ್ತಲೇ, ಮಡಿವಂತಿಕೆಯ ಚೌಕಟ್ಟಿನೊಳಗಿಟ್ಟು, ನೋಡುತ್ತಿರುವವರ ಮತ್ತೊಂದು ಮಹಾ ಹುನ್ನರವಲ್ಲವೇ ಇದು? ತಲೆಮಾರುಗಳಿಂದ ತಲೆಮಾರಿಗೆ,ಅನಕ್ಷರಸ್ಥರ ಸಂಚಲನ ಧ್ವನಿ ದಾಖಲೆಗಳೆಂದರೆ ಅದು ಜನಪದ,ಈ ಬಯಲು ಸೀಮೆಯಲ್ಲಿ ಎಲ್ಲಾ ರೀತಿಯ ಇತಿಹಾಸ,ಪ್ರಾಕಾರಗಳಲ್ಲೂ, ಹುಲುಸಾಗಿ ಬೀಡುಬಿಟ್ಟಿವೆ. ಮುಂದುವರೆಯುವುದು……
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ

 

- Advertisement -  - Advertisement -  - Advertisement - 
Share This Article
error: Content is protected !!
";