ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಧವಳಗಿರಿ ಬಡಾವಣೆಯ ನಿವಾಸಿಯಾದ ಗೌರಿ(ಕೋಕಿಲಾ) ಮತ್ತು ಎನ್.ಸತ್ಯನಾರಾಯಣಚಾರ್ (ಖ್ಯಾತ ಆಭರಣ ವಿನ್ಯಾಸಗಾರರು) ಆದ ನಮ್ಮ ನಿವಾಸದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಗೊಂಬೆಗಳನ್ನಿಟ್ಟು ಪೂಜಿಸುತ್ತಿದ್ದೇವೆ.
ನಮ್ಮ ಮನೆಯಲ್ಲಿ ಚಾಮುಂಡೇಶ್ವರಿ ದೇವಿ, ವೆಂಕಟೇಶ್ವರ, ಪದ್ಮಾವತಿ, ರುಕ್ಮಿಣಿ, ಪಾಂಡುರಂಗ, ರಾಮ, ಲಕ್ಷ್ಮಣ, ಸೀತೆ, ಆಂಜನೇಯ, ಋಷಿ, ಮುನಿಗಳು, ಶಂಕರಚಾರ್ಯರು, ಸುಬ್ರಹ್ಮಣ್ಯ, ಗಣೇಶ, ಈಶ್ವರ, ಪಾರ್ವತಿ, ನಂದಿ, ನಾರದ ಮತ್ತು ಮರದಲ್ಲಿ ತಯಾರಿಸಿದ ಮೈಸೂರು ಅರಮನೆ, ಪಟ್ಟದ ಗೊಂಬೆ, ದಸರಾ ಆನೆಗಳು, ಮದುವೆ ಮಂಟಪ, ಪುರೋಹಿತರು, ವಧು-ವರರು,
ಶಾಲ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರು ಮತ್ತು ಚನ್ನಪಟ್ಟಣದ ಆಕರ್ಷಕ ಗೊಂಬೆಗಳಾದ ಅಲಂಕೃತ ಆನೆಗಳು, ಗಂಡ-ಹೆಂಡತಿ, ಅಜ್ಜ-ಅಜ್ಜಿ, ಮಕ್ಕಳು-ಮೊಮ್ಮಕ್ಕಳು ಹೀಗೆ ಹಲವು ಬಗೆಯ ಗೊಂಬೆಗಳಿಗೆ ೯ ದಿನಗಳ ಕಾಲ ಪೂಜೆ ಸಲ್ಲಿಸಿ, ದೇವಿ ಮಹಾತ್ಮ ಓದುವುದು ನಂತರ ಗೊಂಬೆಗಳಿಗೆ ನೈವೇದ್ಯ ಮತ್ತು ಆರತಿ ಮಾಡಲಾಗುವುದು. ಈ ಗೊಂಬೆಗಳನ್ನು ನೋಡಲು ಸ್ನೇಹಿತರು ಮತ್ತು ಬಂಧು ಬಳಗದವರು ಮತ್ತು ಮಕ್ಕಳು ಮನೆಗೆ ಆಗಮಿಸುತ್ತಿದ್ದಾರೆ.
“ದಸರಾ ಹಬ್ಬದ ಅಂಗವಾಗಿ ಗೊಂಬೆ ಪೂಜೆ ಮಾಡುವ ಸಂಪ್ರಾದಾಯವನ್ನು ನಮ್ಮ ಕುಟುಂಬದವರು ವಂಶಪಾರಂಪರ್ಯಾವಾಗಿ ಆಚರಿಸಿಕೊಂಡು ಬರುತ್ತಿದ್ದು, ಅದನ್ನು ನಾವು ಸಹ ಮುಂದುವರೆಸಿಕೊಂಡು ಬರುತ್ತಿದ್ದೇವೆ. ಹಿರಿಯರು ಸಂಗ್ರಹಿಸಿಟ್ಟಿದ್ದ ಗೊಂಬೆಗಳ ಜೊತೆಯಲ್ಲಿ ನಾವೂ ಕೂಡ ಬೆಂಗಳೂರು,
ತಿರುಪತಿ, ಚನ್ನಪಟ್ಟಣ ಹೀಗೆ ಮತ್ತಿತರ ಕಡೆಗಳಿಂದ ಗೊಂಬೆಗಳನ್ನು ಖರೀದಿಸಿದ್ದು, ನಮ್ಮ ಮನೆಯಲ್ಲಿ ಸುಮಾರು ೧೨೦ ಕ್ಕೂ ಹೆಚ್ಚು ಗೊಂಬೆಗಳಿವೆ.
ಪ್ರತಿ ವರ್ಷ ನವರಾತ್ರಿಯಲ್ಲಿ ೯ ದಿನಗಳ ಕಾಲ ಗೊಂಬೆಗಳನ್ನಿಟ್ಟು ಪೂಜಿಸುವುದರಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ದೊರಕುವುದು ಎಂಬ ನಂಬಿಕೆ ಇದೆ”.
ಗೌರಿ(ಕೋಕಿಲ), ಧವಳಗಿರಿ ಬಡಾವಣೆ ನಿವಾಸಿ