ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಗೂಂಡಾ ಆಳ್ವಿಕೆ ಶುರುವಾಗಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
“ನನ್ನ ಹತ್ಯೆಗೆ ಸುಪಾರಿ ಕೊಡಲಾಗಿದೆ” ಎಂದು ಆರೋಪಿಸಿ ವಿಧಾನ ಪರಿಷತ್‌ಸದಸ್ಯ ರಾಜೇಂದ್ರ, ಪೊಲೀಸ್‌ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಸ್ವಪಕ್ಷಿಯರಿಂದಲೇ ಸಚಿವ ಕೆ.ಎನ್.ರಾಜಣ್ಣಗೆ ಹನಿ ಟ್ರಾಪ್ ಮಾಡಲಾಗಿದೆ. ಜೊತೆಗೆ ರಾಜಣ್ಣರ ಸುಪುತ್ರ ರಾಜೇಂದ್ರ ಕೊಲೆಗೂ ಯತ್ನ ನಡೆದಿದೆ ಎಂದು ಜೆಡಿಎಸ್ ಟೀಕಿಸಿದೆ.
1) ಹನಿ ಟ್ರಾಪ್, 2) ಫೋನ್‌ಟ್ಯಾಪಿಂಗ್, 3) ಕೊಲೆಗೆ ಸುಪಾರಿ ! ಕುರ್ಚಿಗಾಗಿ ಬಣ ರಾಜಕೀಯದಲ್ಲಿ ತೊಡಗಿರುವ ಕಾಂಗ್ರೆಸ್ಸಿಗರೇ, ಕಾಂಗ್ರೆಸ್ಸಿಗರ ವಿರುದ್ಧ ಷಡ್ಯಂತ್ರ ಹೆಣೆಯುತ್ತಿದ್ದಾರೆ. ಈ ದುಷ್ಕೃತ್ಯಗಳ ಹಿಂದಿರುವ ಕಾಣದ “ಕೈ” ಯಾವುದು ?
ಕೊಲೆಗೆ ಸುಪಾಯಿ ಕೊಟ್ಟಿರುವ ಆ ಮಹಾನಾಯಕ ಯಾರು ? ಎಂಬ ಸತ್ಯವನ್ನು ರಾಜ್ಯದ ಜನರಿಗೆ ತಿಳಿಸುವಿರಾ ? ಮಿಸ್ಟರ್‌ಸಿದ್ದರಾಮಯ್ಯ ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಕಾಂಗ್ರೆಸ್‌ಆಡಳಿತದಲ್ಲಿ ಸಚಿವರು, ಶಾಸಕರಿಗೇ ರಕ್ಷಣೆ ಇಲ್ಲವಾಗಿದೆ. ಇನ್ನು ಜನಸಾಮಾನ್ಯರ ಪಾಡೇನು ? ಎಂದು ಜೆಡಿಎಸ್ ಪ್ರಶ್ನಿಸಿದೆ.