ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇತ್ತೀಚೆಗೆ ಗ್ರೇಟರ್ ನೋಯ್ಡ ದಲ್ಲಿ ನಡೆದ ಇಂಡಿಯಾ ಸ್ಕಿಲ್ ಒಲಂಪಿಕ್ಸ್ 25..26 ರ ಕ್ರೀಡಾ ಪಂದ್ಯಾವಳಿಯ ಸೈಬರ್ ಸೆಕ್ಯೂರಿಟಿ ವಿಭಾಗದಲ್ಲಿ ದೊಡ್ಡಬಳ್ಳಾಪುರ ನಗರದ ಕುಮಾರಿ ಚಿತ್ರ ಉದಯ್ ಕುಮಾರ್ ಬಂಗಾರದ ಪದಕ ಪಡೆದಿದ್ದಾರೆ.
ಮುಂಬರುವ ಚೀನಾದ ಶಾಂಗೈ ನಲ್ಲಿ ನಡೆಯಲಿರುವ ವರ್ಲ್ಡ್ ಸ್ಕಿಲ್ ಒಲಂಪಿಕ್ಸ್ 25..26 ರ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಚಿತ್ರ ಉದಯ್ ಕುಮಾರ್ ರವರು ದೊಡ್ಡಬಳ್ಳಾಪುರಕ್ಕೆ ಕೀರ್ತಿ ತಂದಿದ್ದಾರೆ.
ಬಂಗಾರ ಪದಕ ವಿಜೇತೆ ಚಿತ್ರ ಉದಯ್ ಕುಮಾರ್ ಸಾಧನೆಗೆ ತಾಲೂಕಿನ ಹಲವಾರು ಕ್ರೀಡಾ ಪಟುಗಳು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

