ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲೂಕಿನ,ಎಳ್ಳುಪುರ ನಿವಾಸಿ ಚಂದ್ರಶೇಖರ್ ಹಾಗೂ ರಮಾದೇವಿಯವರು ಮಗಳು ಮೋನಿಷಾ.ಸಿ,ದಾರವಾಡ ವಿಶ್ವವಿದ್ಯಾನಿಲಯದಲ್ಲಿ ಎಂ ಎಸ್ ಸಿ ಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಇವರ ಸಾಧನೆಯನ್ನು ಮೆಚ್ಚಿ ಲಯನ್ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 317F ರವರು ಯಲಹಂಕದ ಜಕ್ಕೂರು ಏರೋಡ್ರಂ ಬಳಿಯಿರುವ ಆಟಿಟ್ಯೂಡ್ ಬೋಟಿಕ್ ಹೋಟೆಲ್ ನಲ್ಲಿ ಸನ್ಮಾನಿಸಿದ್ದಾರೆ.
ಇವರ ಅತ್ಯುತ್ತಮ ಸಾಧನೆಗೆ ಎಳ್ಳು ಪರ ಗ್ರಾಮಸ್ಥರು ಸೇರಿದಂತೆ ಎಳ್ಳುಪುರದ ಮುಖಂಡ ಲಯನ್ಸ್ ಎಸ್.ರಾಮಾಂಜಿನಪ್ಪನವರು ತಮ್ಮ ಗ್ರಾಮಕ್ಕೆ ಕೀರ್ತಿ ತಂದು ಹೆಣ್ಣುಮಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.