ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹತ್ತನೇ ತರಗತಿಯ ಸಿಬಿಎಸ್ಸಿ ಫಲಿತಾಂಶದಲ್ಲಿ ಹಿರಿಯೂರು ತಾಲ್ಲೂಕಿನ ಗೊಲ್ಲಹಳ್ಳಿಯ ಸಿಬಿಎಸ್‌ಸಿ ಶಾಲೆ ಅಮೋಘ ಸಾಧನೆ ಮಾಡಿದೆ. ಹಳ್ಳಿ ಮಕ್ಕಳು ಇರುವ ಈ ಶಾಲೆಯಲ್ಲಿ ನೂರರಷ್ಟು ಫಲಿತಾಂಶ ಬಂದಿದೆ.
ವದ್ದಿಕೆರೆಯ ಎಸ್. ಸಿದ್ದೇಶ್ ಶೇಕಡ 93 ರಷ್ಟು ಅಂಕ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾನೆ. ಮಲ್ಲಪ್ಪನಹಳ್ಳಿಯ ಎಂ.ಸ್ಫೂರ್ತಿ ಶೇಕಡಾ 91.4, ಯರಬಳ್ಳಿಯ ದಿಶಾ ಆರ್ ಗಿರೀಶ್ 91.2, ವದ್ದಿಕೆರೆಯ ಮೈತ್ರಿ.ವಿ.ಹೆಚ್. ಶೇಕಡ 91 ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
20 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದರೆ, ಉಳಿದವರೆಲ್ಲ ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿರುವುದು ಸಂತಸ ತಂದಿದೆ.
ಸಾಧನೆ ಮಾಡಿದ ಎಲ್ಲಾ ಹಳ್ಳಿ ಮಕ್ಕಳಿಗೂ ಅಧ್ಯಕ್ಷ ಚಂದ್ರಶೇಖರ ಬೆಳಗೆರೆ ಮತ್ತು ಕಾರ್ಯದರ್ಶಿ ಎನ್.ಗಿರಿಜಾ ಅಭಿನಂದನೆಗಳನ್ನ ಸಲ್ಲಿಸಿದ್ದಾರೆ.