ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಿರಂತರ ಹೋರಾಟದ ಫಲವಾಗಿ ಚಿತ್ರದುರ್ಗ ಜಿಲ್ಲೆಯ ಪೌರ ಕಾರ್ಮಿಕರು ಮತ್ತು ಸಿಬ್ಬಂದಿ ವರ್ಗ ದವರಿಗೆ ಮುಂಬಡ್ತಿ ದೊರಕಿರುವುದು ಸಂತಸ ತಂದಿದೆ ಎಂದು ಕರ್ನಾಟಕ ರಾಜ್ಯ ನಿವೃತ್ತ ಪೌರಸೇವಾ ನೌಕರರ ಸಂಘ, ಹಿರಿಯೂರು ರಾಜ್ಯಾಧ್ಯಕ್ಷ ಎಲ್. ನಾರಾಯಣಾಚಾರ್ ತಿಳಿಸಿದ್ದಾರೆ.
ನನ್ನ ಸತತ ಹೋರಾಟದ ಫಲ ಮತ್ತು ಸರ್ಕಾರಕ್ಕೆ ಹಾಕುತ್ತಿದ್ದ ಒತ್ತಡ ಹಾಗೂ ಕೋರಿಕೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ ಪೌರಾಡಳಿತ ನಿರ್ದೇಶಕ ಕವಳಿಕಟ್ಟಿ ಪ್ರಭುಲಿಂಗ, ಅನುಷ್ಠಾನ ಗೊಳಿಸುವಲ್ಲಿ ಶ್ರಮಿಸಿದ ಜಿಲ್ಲಾ ಯೋಜನಾ ನಿರ್ದೇಶಕ ಎಂ.ಮಹೇಂದ್ರಕುಮಾರ್ ಅವರುಗಳಿಗೆ ನಾರಾಯಣಾಚಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಕಿವಿಮಾತು: ಕಾರ್ಮಿಕರು, ಸಿಬ್ಬಂದಿಗಳ ಹಕ್ಕನ್ನು ಪಡೆಯಲು ಏಕೆ ಹಿಂಜರಿಕೆ ಎಂಬುದು ಪ್ರಶ್ನೆಯಾಗಿದ್ದು ಸಂಘಟಿತರಾಗಿ, ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಪಡೆಯಬೇಕು, ಸಾರ್ವಜನಿಕ ತೆರಿಗೆ ಹಣದಿಂದ ವೇತನ ಪಡೆಯುತ್ತಿದ್ದೀರಿ ಎಂಬುದನ್ನು ಮರೆಯಬಾರದು, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅನಗತ್ಯವಾಗಿ ತಿರುಗಾಡಿಸದೆ, ಸಕಾಲದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿ ಕೊಡಬೇಕು. ಆಗ ಮಾತ್ರ ಭಗವಂತ ತಮ್ಮನ್ನು ಒಪ್ಪುತ್ತಾನೆ ಎಂದು ನಾರಾಯಣಾಚಾರ್ ಕಿವಿ ಮಾತು ಹೇಳಿದ್ದಾರೆ.