ಪ್ರವಾಸಿಗರಿಗೆ ಗುಡ್ ನ್ಯೂಸ್: ಕೆಎಸ್‌ಆರ್‌ಟಿಸಿಯಿಂದ ವಾರಾಂತ್ಯದ ವಿಶೇಷ ಪ್ಯಾಕೇಜ್ ಟೂರ್‌

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ  ಬೆಂಗಳೂರು ಕೇಂದ್ರೀಯ ವಿಭಾಗವು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾರಾಂತ್ಯದ ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ) ವಿವಿಧ ಪ್ರವಾಸಿ ತಾಣಗಳಿಗೆ ವಿಶೇಷ
ಪ್ಯಾಕೇಜ್ ಟೂರ್ಬಸ್ ಸೇವೆಗಳನ್ನು ಆರಂಭಿಸಿದೆ. ಈ ಪ್ರವಾಸಗಳಿಗೆ ರಾಜಹಂಸ ಮತ್ತು ಅಶ್ವಮೇಧ ಕ್ಲಾಸಿಕ್ ಬಸ್‍ಗಳನ್ನು ಬಳಸಲಾಗುತ್ತಿದ್ದು, ಪ್ರವೇಶ ಶುಲ್ಕ, ಉಪಹಾರ ಮತ್ತು ಊಟದ ವೆಚ್ಚವನ್ನು ಹೊರತುಪಡಿಸಿ ಕೇವಲ ಪ್ರಯಾಣ ದರವನ್ನು ಮಾತ್ರ ನಿಗದಿಪಡಿಸಲಾಗಿದೆ.

ಬೆಂಗಳೂರು – ಗಗನಚುಕ್ಕಿ ಪ್ರವಾಸ (ರಾಜಹಂಸ ಬಸ್):
ಈ ಪ್ರವಾಸವು ಸೋಮನಾಥಪುರ
, ತಲಕಾಡು, ಮಧ್ಯರಂಗ, ಭರಚುಕ್ಕಿ ಮತ್ತು ಗಗನಚುಕ್ಕಿ ತಾಣಗಳನ್ನು ಒಳಗೊಂಡಿದೆ. ಒಟ್ಟು 340 ಕಿ.ಮೀ ದೂರದ ಈ ಪ್ರಯಾಣಕ್ಕೆ ರಾಜಹಂಸ ಬಸ್ಸಿನ ವ್ಯವಸ್ಥೆಯಿದ್ದು, ವಯಸ್ಕರಿಗೆ 750 ರೂ. ಹಾಗೂ ಮಕ್ಕಳಿಗೆ 600 ರೂ. ದರ ನಿಗದಿಪಡಿಸಲಾಗಿದೆ. ಈ ಸೇವೆಯು 05-07-2025 ರಿಂದ ಜಾರಿಯಲ್ಲಿದೆ.

- Advertisement - 

ಬೆಂಗಳೂರು – ಗಗನಚುಕ್ಕಿ ಪ್ರವಾಸ (ಅಶ್ವಮೇಧ ಕ್ಲಾಸಿಕ್):
ಪ್ರವಾಸಿ ತಾಣಗಳಾದ ಸೋಮನಾಥಪುರ
, ತಲಕಾಡು, ಮಧ್ಯರಂಗ ಮತ್ತು ಅವಳಿ ಜಲಪಾತಗಳ ವೀಕ್ಷಣೆಗೆ ಅಶ್ವಮೇಧ ಕ್ಲಾಸಿಕ್ ಬಸ್ಸಿನ ಆಯ್ಕೆಯೂ ಇದೆ. ಇದರ ಒಟ್ಟು ದೂರ 340 ಕಿ.ಮೀ ಆಗಿದ್ದು, ವಯಸ್ಕರಿಗೆ 600 ರೂ. ಮತ್ತು ಮಕ್ಕಳಿಗೆ 450 ರೂ. ದರವಿದೆ. ಈ ಸೇವೆಯು 20-07-2024 ರಿಂದಲೇ ಆರಂಭವಾಗಿದೆ.

ಬೆಂಗಳೂರು – ಚಿಕ್ಕತಿರುಪತಿ ಮತ್ತು ಕೋಲಾರ ಪ್ರವಾಸ:
ಧಾರ್ಮಿಕ ಆಸಕ್ತಿಯುಳ್ಳವರಿಗಾಗಿ ಈ ವಿಶೇಷ ಪ್ಯಾಕೇಜ್ ರೂಪಿಸಲಾಗಿದ್ದು
, ಇದರಲ್ಲಿ ಚಿಕ್ಕತಿರುಪತಿ, ಕೋಟೆಲಿಂಗೇಶ್ವರ, ಬಂಗಾರು ತಿರುಪತಿ, ಆವಣಿ, ಮುಳಬಾಗಿಲು, ಕುರುಡುಮಲೆ ಮತ್ತು ಕೋಲಾರ ಕ್ಷೇತ್ರಗಳ ದರ್ಶನ ಪಡೆಯಬಹುದು. 270 ಕಿ.ಮೀ ದೂರದ ಈ ಪ್ರವಾಸಕ್ಕೆ ಅಶ್ವಮೇಧ ಕ್ಲಾಸಿಕ್ ಬಸ್ ಲಭ್ಯವಿದ್ದು, ವಯಸ್ಕರಿಗೆ 600 ರೂ. ಹಾಗೂ ಮಕ್ಕಳಿಗೆ 450 ರೂ. ದರ ನಿಗದಿ ಮಾಡಲಾಗಿದೆ. ಇದು 28-06-2025 ರಿಂದ ಲಭ್ಯವಿದೆ.

- Advertisement - 

ಬೆಂಗಳೂರು – ಮೇಲುಕೋಟೆ ಪ್ರವಾಸ:
ಐತಿಹಾಸಿಕ ತಾಣಗಳಾದ ಶ್ರೀರಂಗಪಟ್ಟಣ
, ಕಲ್ಪಳ್ಳಿ ಮತ್ತು ಮೇಲುಕೋಟೆ ವೀಕ್ಷಣೆಗೆ ಈ ಪ್ಯಾಕೇಜ್ ಪೂರಕವಾಗಿದೆ. 350 ಕಿ.ಮೀ ದೂರದ ಈ ಪ್ರಯಾಣಕ್ಕೆ ಅಶ್ವಮೇಧ ಕ್ಲಾಸಿಕ್ ಬಸ್ ಬಳಸಲಾಗುತ್ತಿದ್ದು, ವಯಸ್ಕರಿಗೆ 670 ರೂ. ಮತ್ತು ಮಕ್ಕಳಿಗೆ 500 ರೂ. ಪ್ರಯಾಣ ದರವಿದೆ. ಈ ಸೇವೆಯು 31-05-2025 ರಿಂದ ಜಾರಿಗೆ ಬಂದಿದೆ.

ಪ್ರಮುಖ ಸೂಚನೆ: ಈ ಮೇಲಿನ ಎಲ್ಲಾ ಪ್ಯಾಕೇಜ್‍ಗಳಲ್ಲಿ ಪ್ರವೇಶ ಶುಲ್ಕ, ಉಪಹಾರ ಮತ್ತು ಮಧ್ಯಾಹ್ನ ಅಥವಾ ರಾತ್ರಿಯ ಊಟದ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ.

ಈ ಪ್ಯಾಕೇಜ್ ಟೂರ್‌ಗಳ ಪ್ರಯೋಜನ ಪಡೆಯಲು ಇಚ್ಛಿಸುವ ಸಾರ್ವಜನಿಕರು  ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‍ಸೈಟ್‍ಗಳಾದ www.ksrtc.in ಅಥವಾ www.ksrtc.karnataka.gov.in  ಮೂಲಕ ಟಿಕೆಟ್ ಕಾಯ್ದಿರಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ದೂರವಾಣಿ ಸಂಖ್ಯೆ 080-26252625, ಮೊಬೈಲ್ ಸಂಖ್ಯೆ7760990100 / 7760990560 / 7760990287 ಗಳನ್ನು ಸಂಪರ್ಕಿಸಬಹುದು.

ವಾರಾಂತ್ಯದ ರಜೆಯನ್ನು ಸುಂದರ ಪ್ರವಾಸಿ ತಾಣಗಳ ವೀಕ್ಷಣೆಯೊಂದಿಗೆ ಕಳೆಯಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";