ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಳ್ಳಾರಿ, ಮೈಸೂರು, ದಾವಣಗೆರೆ ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳ ಸ್ಥಾಪನೆ ಆಗಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಪೊಲೀಸ್ ಸಿಬ್ಬಂದಿಗಳ ವಾರ್ಷಿಕ ಅರೋಗ್ಯ ತಪಾಸಣೆ ವೆಚ್ಚವನ್ನು 1,000 ಗಳಿಂದ 1,500 ಗಳಿಗೆ ಹೆಚ್ಚಳ. ಬಂದೋಬಸ್ತ್ ಗೆ ನಿಯೋಜಿಸುವ ಪೊಲೀಸ್‌ಅಧಿಕಾರಿ ಮತ್ತು ಸಿಬ್ಬಂದಿಗಳ ಆಹಾರ ಭತ್ಯೆ 200 ರಿಂದ 300 ಗಳಿಗೆ ಹೆಚ್ಚಳ.
ಗೃಹ ರಕ್ಷಕ ಮತ್ತು ಪೌರ ರಕ್ಷಣಾ ಸೇವಕರ ಮರಣ ಪರಿಹಾರ ಧನ 5 ಲಕ್ಷ ಗಳಿಂದ 10 ಲಕ್ಷ ಗಳಿಗೆ ಏರಿಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.