ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಗೂಳ್ಯ ಗ್ರಾಮದ ಶಿವಣ್ಣನವರ ತಾಯಿ, ಬಡಪ್ಪನವರ ಪತ್ನಿ ಚಿಕ್ಕಮ್ಮ(90) ಮಂಗಳವಾರ ತಡ ರಾತ್ರಿ ನಿಧನರಾದರು.
ನಾಲ್ಕು ಮಂದಿ ಹೆಣ್ಣು ಮಕ್ಕಳು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆ ಬುಧವಾರ ಗೂಳ್ಯ ಗ್ರಾಮದ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

