ಚಂದ್ರವಳ್ಳಿ ನ್ಯೂಸ್, ತುಮಕೂರು:
ಒಕ್ಕಲಿಗರ ಬದುಕಾದ್ದ ಕೃಷಿಯನ್ನು ನಿಷ್ಟೆಯಿಂದ ಮಾಡಿ ಗೌರವದ ಕೀರ್ತಿ ಗಳಿಸಿದ್ದವರು ಮಾನ್ಯ ಸಿದ್ದೆಗೌಡರು ಹಾಗೂ ರಂಗೇಗೌಡರು.
ದಿವಂಗತ ಶ್ರೀ ಕೆ ಎಸ್ ಸಿದ್ದೇಗೌಡರು ಹಾಗೂ ದಿವಂಗತ ಶ್ರೀ ರಂಗೇಗೌಡರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೆ ಟಿ ಹಳ್ಳಿ ಗ್ರಾಮದ ಜೋಡಿ ಜಮೀನ್ದಾರರು. ಸಾಮಾಜಿಕ ನೀತಿಯಲ್ಲಿ ಕೆ ಟಿ ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರ ವಿಶ್ವಾಸದಲ್ಲಿ ಗೌರವ ಸಂಪಾದಿಸಿದ್ದರು.
ಗೌಡರ ಮನೆತನಕ್ಕೆ ತಕ್ಕಂತೆ ಕೆ ಟಿ ಹಳ್ಳಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದರು. ಕೃಷಿ ಬದುಕಿನಲ್ಲಿ ಸಾಕಷ್ಟು ಹಿರಿಮೆ ಹೊಂದಿದ್ದ ಗೌಡರ ಬದುಕು 30 ವರ್ಷಗಳ ಹಿಂದಿನ ದಿನಗಳಲ್ಲಿ ತಾಲ್ಲೂಕಿನ ರೈತರಿಗೆ ಆದರ್ಶವಾಗಿತ್ತು.
ಸರ್ವಜನಾಂಗದ ವಿಶ್ವಾಸದ ಅಡಿಯಲ್ಲಿ ಊರಿನ ಮಹತ್ವದ ಕಾರ್ಯಗಳಿಗೆ ಮಾನ್ಯತೆ ನೀಡುತ್ತಿದ್ದರು . ಕೆ ಟಿ ಹಳ್ಳಿ ಸುತ್ತಮುತ್ತಲಿನ ಹತ್ತೂರಿನ ಜನತೆಯ ಅನೇಕ ವ್ಯಾಜ್ಯಗಳ ವಿಚಾರದಲ್ಲಿ ನ್ಯಾಯ ಸಮ್ಮತವಾಗಿ ಚರ್ಚಿಸಿ ನ್ಯಾಯದ ಪಾಲನೆಯಲ್ಲಿ ತಿರ್ಮಾನ ಮಾಡಿದ್ದಾರೆ ಇದಕ್ಕೆ ಸಾಕ್ಷಿ ಗುಡ್ಡೆಯಾಗಿ ನನ್ನ ಚಿಕ್ಕ ವಯಸ್ಸಿನಲ್ಲಿ ನಮ್ಮ ಗ್ರಾಮದ ಜನತೆಯ ಮೆಚ್ಚಿಗೆ ಮಾತುಗಳಲ್ಲಿ ಕೇಳಿದ್ದೇನೆ.
ಹಾಗೂ ಕೆಲವು ಸನ್ನಿವೇಶಗಳನ್ನು ಗಮನಿಸಿದ್ದೆನೆ. ಸಿದ್ದೇಗೌಡರ ಕಿರಿಯ ಸಹೋದರರಾದ ಕೆ ಎಸ್ ರಂಗೇಗೌಡರು ಸುಮಾರು 15 ವರ್ಷಗಳ ಕಾಲ ಮಂಗಳವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷರ ಕಾರ್ಯದಲ್ಲಿ ಜನಪರವಾಗಿ ಗೌರವಾನ್ವಿತವಾದ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಜನರೊಂದಿಗಿನ ವಿಶ್ವಾಸದ ಮೆಚ್ಚಿಗೆ ಗಳಿಸಿದ್ದರು.
ಈ ಇಬ್ಬರು ಸಹೋದರರು ರಾಮ ಲಕ್ಷ್ಮಣರಂತೆ ಬಾಳಿ ಬದುಕಿದ ನೀತಿ ನಾಗರಿಕತೆಯ ಸಮಾಜಕ್ಕೆ ಆದರ್ಶಪ್ರಾಯ. ಈ ಇಬ್ಬರ ಸಹೋದರರ ವಿಚಾರಗಳು ಈಗಲು ಜನರ ಭಾವನೆಗಳ ಮಾತುಗಳಲ್ಲಿ ಆದರ್ಶದ ಸಂಕೇತವಾಗಿದೆ. ನನಗೂ ನಮ್ಮ ಮನೆತನದ ಹಿರಿಯರು ಬಾಳಿ ಬದುಕಿದ ಹಲವಾರು ವಿಚಾರಗಳು ನನ್ನ ನೆನಪಲ್ಲಿ ಅಚ್ಚಳಿಯದೆ ಇದೆ.
ಕೆ ಟಿ ಹಳ್ಳಿಯ ಸಿದ್ದೇಗೌಡರ ಹಾಗೂ ರಂಗೇಗೌಡರ ಮನೆತನದ ಸದಸ್ಯ ನಾನು ಎಂಬುದು ನನ್ನನ್ನೂ ಸೇರಿದಂತೆ ನನ್ನ ಕುಟುಂಬದ ಹಾಗೂ ನಮ್ಮ ರಕ್ತ ಸಂಬಂಧಿಗಳ ಎಲ್ಲಾ ಸದಸ್ಯರೆಲ್ಲರಿಗೂ ಹೆಮ್ಮೆ. ನಮ್ಮ ಮನೆತನದ ಹಿರಿಯರ ಬದುಕಿನ ಇತಿಹಾಸ ಸದಾ ನನ್ನ ಮನದಲ್ಲಿ ಗೌರವದ ಸಂಕೇತವಾಗಿದೆ.
ಲೇಖನ-ರಘು ಗೌಡ