ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಬದ್ಧ : ಟಿ.ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಆರ್ಥಿಕ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕಾರ್ಮಿಕರ ಪರಿಶ್ರಮ ಬಹಳಷ್ಟಿದೆ. ಕಾರ್ಮಿಕರು ತಮಗೆ ವಹಿಸಿದ ಜವಾಬ್ದಾರಿಯನ್ನು ಪೂರ್ಣಪ್ರಮಾಣದಲ್ಲಿ ಮಾಡುವ ಮೂಲಕ ಅನೇಕ ಉತ್ಪಾದನೆಗಳು ಸಕಾಲದಲ್ಲಿ ಮಾರುಕಟ್ಟೆಗೆ ಬರಲು ನೆರವಾಗಿದ್ಧಾರೆ. ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಶಾಸಕ
, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ನಗರದ ಶಾಸಕ ಭವನದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯಕಟ್ಟಡ ನಿರ್ಮಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಸುಮಾರು ೧೫೨ ಫಲಾನುಭವಿಗಳಿಗೆ ಸುರಕ್ಷಿತ ಕಿಟ್ ವಿತರಿಸಿ ಮಾತನಾಡಿದರು. ಕಾರ್ಮಿಕ ಇಲಾಖೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು. ಕಾರ್ಮಿಕರು ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ಕಾರ್ಮಿಕನೂ ನೊಂದಾವಣೆ ಮಾಡಿಸಿಕೊಂಡು ಕಾರ್ಡ್ ಪಡೆಯಬೇಕು. ಕಾರ್ಮಿಕ ಇಲಾಖೆ ಕಾರ್ಮಿಕರಿಗಾಗಿ ನಿರೂಪಿಸಿದ ವಿವಿಧ ಸೌಲಬ್ಯಗಳನ್ನು ಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಮಿಕ ಅಧಿಕಾರಿ ಕುಸುಮ ಮಾತನಾಡಿ, ಪ್ರಸ್ತುತ ತಾಲ್ಲೂಕಿನಾದ್ಯಂತ ಈಗಾಗಲೇ ೩೫ಸಾವಿರ ಕಾರ್ಮಿಕರು ಹೆಸರು ನೊಂದಾವಣೆ ಮಾಡಿಕೊಂಡಿದ್ಧಾರೆ. ನೊಂದಾವಣೆಯಿಂದ ದೂರ ಉಳಿದ ಕಾರ್ಮಿಕರನ್ನು ಪತ್ತೆಹಚ್ಚಿ ಅವರಿಗೂ ಇಲಾಖೆ ಕಾರ್ಡ್ ನೀಡಿ ಸೌಲಭ್ಯ ವ್ಯಪ್ತಿಗೆ ಒಳಪಡುವಂತೆ ಜಾಗ್ರತೆ ವಹಿಸಲಾಗುವುದು. ಪ್ರಸ್ತುತ ತರಬೇತಿ ಪಡೆದ ೧೫೨ ಫಲಾನುಭವಿಗಳಿಗೆ ಪ್ರಭೂಧತಾ ಪ್ರವೇಟ್ ಖಾಸಗಿ ಕಂಪನಿ ಸುರಕ್ಷಣಾ ಸಲಕರಣೆ ಕಿಟ್‌ಗಳನ್ನು ನೀಡಿದೆ. ಅವುಗಳ ಸದುಪಯೋಗ ಪಡೆಯಲು ಕಾರ್ಮಿಕರಿಗೆ ಮನವಿ ಮಾಡಿದರು.

 ಪ್ರಭೂಧತಾ ಕಂಪನಿಯ ಯೋಜನಾ ಸಂಯೋಜಕ ಮಂಜುನಾಥ, ನಗರಸಭೆ ಅಧ್ಯಕ್ಷೆ ಆರ್.ಮಂಜುಳಾಪ್ರಸನ್ನಕುಮಾರ್, ಉಪಾಧ್ಯಕ್ಷ ಕವಿತಾಬೋರಯ್ಯ, ಸದಸ್ಯರಾದ ಸುಮಭರಮಣ್ಣ, ಶಿಲ್ಪಿಮುರುಳಿ, ರಮೇಶಗೌಡ, ಕೆ.ವೀರಭದ್ರಪ್ಪ, ಎಂ.ಜೆ.ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.

 

Share This Article
error: Content is protected !!
";