ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಕೆಹೆಚ್ ಬಿ ಕಾಲೋನಿ ನಿವಾಸಿ ಹೆಚ್.ಎಂ.ಉಮಾದೇವಿ ತಿಪ್ಪೇಸ್ವಾಮಿ(78) ಅವರು ಶುಕ್ರವಾರ ನಿಧನರಾಗಿದ್ದಾರೆ.
ಕಳೆದ ಒಂದು ತಿಂಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರು ಪತಿ ತಿಪ್ಪೇಸ್ವಾಮಿ, ಪುತ್ರ ಸರ್ಕಾರಿ ಡಿಪ್ಲೋಮಾ ಕಾಲೇಜ್ ಉಪನ್ಯಾಸಕ ಟಿ. ಅರುಣ್ ನಾಯಕ ಸೇರಿದಂತೆ ಅಪಾರ ಬಂಧು ಮಿತ್ರರನ್ನ ಅಗಲಿದ್ದಾರೆ.
ಮೃತದೇಹ ದಾನ-
ತಾಯಿ ಉಮಾದೇವಿ, ತಂದೆ ತಿಪ್ಪೇಸ್ವಾಮಿ ಅವರ ಇಚ್ಛೆಯಂತೆ ಅಮ್ಮನವರ ಮೃತ ದೇಹವನ್ನು ಬಸವೇಶ್ವರ ಆಸ್ಪತ್ರೆಗೆ ದಾನ ನೀಡಲಾಗಿದೆ. ಮೃತದೇಹವನ್ನು ಮಣ್ಣಿನಲ್ಲಿ ಹೂತು ಹಾಕದೆ ಇದು ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಾನ ನೀಡಲಾಗಿದೆ ಎಂದು ಪುತ್ರ ಟಿ.ಅರುಣ್ ನಾಯಕ ತಿಳಿಸಿದ್ದಾರೆ.
ಕಂಬನಿ- ಉಮಾದೇವಿ ಅವರ ನಿಧನಕ್ಕೆ ಕೆಹೆಚ್ ಬಿ ಕಾಲೋನಿ ನಿವಾಸಿಗಳು ಸಂತಾಪ ಸೂಚಿಸಿ ಸಾವಿನ ನೋವು ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.