ಉತ್ತಮ ಸಮಾಜ ಸೇವೆ ಮಾಡುವ ಕುರಿಗಳಿದ್ರೆ ಖಂಡಿತ ಖರೀದಿಸುತ್ತೇವೆ- ಗೋವಿಂದ ಕಾರಜೋಳ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಾಸಕರಾದ ನಾವುಗಳು ಮಾರಾಟಕ್ಕೆ ಸಿದ್ದರಿದ್ದೇವೆ, ಖರೀದಿ ಮಾಡುವವರು ಬಂದು ಖರೀದಿಸಿ ಎಂದು 55 ಶಾಸಕರುಗಳು ಕೇಳುತ್ತಿದ್ದಾರೆ ಎನ್ನುವ ಮಾಹಿತಿ ನನಗಿಲ್ಲ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ಶಾಸಕ ಕಾಶಪ್ಪನವರ್ ಹೇಳಿಕೆ ವಿಚಾರಕ್ಕೆ ಸಂಸದ ಕಾರಜೋಳ
ಪ್ರತಿಕ್ರಿಯೆ ಮಾತನಾಡಿ ಯಾರ್ಯಾರು ಅಂತ ನನಗೆ ಗೊತ್ತಿಲ್ಲ, ಕಾಶಪ್ಪನವರ್ ಅವರನ್ನೇ ಕೇಳಿ. ಅವರು ಮೊದಲು 55 ಮಂದಿ ಶಾಸಕರ ಪಟ್ಟಿ ರಿಲೀಸ್ ಮಾಡಲಿ ಎಂದು ಸಂಸದರು ಆಗ್ರಹ ಮಾಡಿದರು.

ಚಿತ್ರದುರ್ಗದಲ್ಲಿ ಕುರಿ ಸಂತೆ ನಡೆಯುತ್ತದೆ. ಯೋಗ್ಯ ಕುರಿ ನೋಡಿ ಖರೀದಿಸುತ್ತಾರೆ. ಸಾರ್ವಜನಿಕ ಜೀವನದಲ್ಲಿ ಯೋಗ್ಯ, ಉತ್ತಮ ಸಮಾಜ ಸೇವೆ ಮಾಡುವ ಕುರಿಗಳಿದ್ರೆ ಖಂಡಿತ ಖರೀದಿಸುತ್ತೇವೆ ಎಂದು ಗೋವಿಂದ ಕಾರಜೋಳ ತಿರುಗೇಟು ನೀಡಿದರು.

- Advertisement - 

ಸಿಗಂದೂರು ಸೇತುವೆ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಂಸದರು, ಇಡೀ ರಾಜ್ಯದಲ್ಲಿ 224 ಕ್ಷೇತ್ರದಲ್ಲಿ 140 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಯಾರೂ ಶಿಷ್ಟಾಚಾರ ಪಾಲಿಸಿಲ್ಲ. ನನ್ನ ಕ್ಷೇತ್ರದಲ್ಲೂ ಕೂಡಾ 198 ಕಾರ್ಯಕ್ರಮ ಮಾಡಿದ್ದಾರೆ, ನನಗೆ ಆಹ್ವಾನ ಇಲ್ಲ. ರಾಜ್ಯ ಮುಖ್ಯ ಕಾರ್ಯದರ್ಶಿ ಅವರಿಗೂ ನಾನು ಪತ್ರ ಬರೆದಿದ್ದೇನೆ. ಪ್ರೋಟೋಕಾಲ್ ಪಾಲನೆ ಪ್ರತಿಯೊಬ್ಬರ ಕರ್ತವ್ಯ ಎಂದು ಸಂಸದರು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನಿಸಿಲ್ಲ ಎಂದು ಹೇಳುವುದು ಸರಿಯಲ್ಲ. ಶಿವಮೊಗ್ಗ ಜಿಲ್ಲೆಯ ಶಾಸಕರು, ಜಿಲ್ಲಾ ಮಂತ್ರಿಗಳು, ಸಂಸದರು, ಶಾಸಕರುಗಳಿಗೆ ಆಹ್ವಾನಿಸಿದ್ದಾರೆ. ಶಿಷ್ಟಾಚಾರ ಇರುವುದು ಕೂಡಾ ಅಷ್ಟೇ. ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದಾಗ ಸಿಎಂ ಅಧ್ಯಕ್ಷತೆ ಇರುತ್ತದೆ.

- Advertisement - 

ಆಯಾ ಜಿಲ್ಲೆಯಲ್ಲಿ ಪ್ರೋಟೋ ಕಾಲ್ ಪಾಲಿಸಬೇಕು. ಸಿಎಂ ಸಿದ್ದರಾಮಯ್ಯ ಅಭಿವೃದ್ಧಿಗಿಂತ ರಾಜಕಾರಣ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ರ ಬರೆದು ರಾಜಕಾರಣ ಮಾಡುವುದು ಗೌರವ ತರಲ್ಲ ಎಂದು ಸಂಸದ ಗೋವಿಂದ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು.

 

 

Share This Article
error: Content is protected !!
";