ಸರ್ಕಾರಿ ಖರಾಬ್ ಜಮೀನು ಕಬಳಿಕೆ ಹುನ್ನಾರ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಕ್ಕೆ
5 ಕೀ ಲೋ ಮೀಟರ್ ಯಾವುದೇ ಸರ್ಕಾರಿ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶ ಮಾಡಬಾರದು ಎಂಬ ಅಧಿನಿಯಮ ಇದ್ದರು ಕಂದಾಯ ಇಲಾಖೆಯ ನಿವೃತ್ತ ನೌಕರನೊಬ್ಬ ವಸತಿ ಬಡಾವಣೆ ನಿರ್ಮಿಸಲು ಸರ್ಕಾರಿ ಖರಾಬು ಜಮೀನನ್ನು ಕಬಳಿಸಲು  ಹುನ್ನಾರ ನೆಡೆಸುತ್ತಿದ್ದಾರೆ. ಆದರೂ ಕಂದಾಯ ಇಲಾಖೆಯ ಅದಿಕಾರಿಗಳು ಜಾಣ ಕುರುಡರಂತೆ ಕಂಡರು ಕಾಣದಂತೆ ಇದ್ದಾರೆ  ಎಂದು ಕರವೇ ಸಂಘಟನೆ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರದಾನ ಕಾರ್ಯದರ್ಶಿ ರಾಜು ಘಟ್ಟ ರವಿ ನೇತೃತ್ವದಲ್ಲಿ ಹೋರಾಟ ನೆಡೆಸುತ್ತಿದ್ದಾರೆ.

ನಗರದ ಹೊರಭಾಗದ ಐತಿಹಾಸಿಕ ಹಿನ್ನೆಲೆ ಇರುವ ಅರ್ಕಾವತಿ ನದಿ ದಂಡೆಯಲ್ಲಿರುವ ಶ್ರೀರಾಮ ದೇವಾಲಯಕ್ಕೆ ಹೊಂದಿ ಕೊಂಡಂತೆ ಇರುವ ಸರ್ಕಾರಿ ಬಂಡೆ ಹಾಗು ಖರಾಬು ಜಾಗದಲ್ಲಿ ಇದ್ದಂತಹ ಕಲ್ಲು ಬಂಡೆಯನ್ನು ರಾತ್ರಿ ಸಮಯದಲ್ಲಿ ಗ್ರಾಮದ ಜನರು ನಿದ್ರೆಯ ಸಮಯದಲ್ಲಿ ಸ್ಪೋಟಿಸಿ  ಕಲ್ಲುಗಳನ್ನು ಬೇರೆಕಡೆ ತೆರವು ಮಾಡಿ ಅ ಜಾಗಕ್ಕೆ ಮಣ್ಣು  ತುಂಬಿದ್ದು ಅ ಜಾಗದಲ್ಲಿ ಇದ್ದಂತಹ ಪುರಾತನ ಕಾಲದ ಮರಗಳನ್ನು ಕಡಿದು ಹೋಮ ನೆಡೆಸಲಾಗಿದ್ದು ಪರಿಸರಕ್ಕೂ ಹಾನಿ ಉಂಟುಮಾಡಿ ಹಾಗು ರಾಜ ಕಾಲುವೆಗಳನ್ನು ಮುಚ್ಚಲಾಗಿದೆ ಎಂದು ಆರೋಪಿಸಿದ್ದಾರೆ.

  ರಾಜ್ಯ ಹೆದ್ದಾರಿ ಹಾದು ಹೋಗುವ ದಾರಿಯ ಪಕ್ಕದಲ್ಲಿಯೇ ಇದ್ದರು ರಸ್ತೆಯಲ್ಲಿ ಪ್ರಯಾಣ ಮಾಡುತ್ತಿರುವಾಗ ಅಡೆ ಕಣ್ಣು ಆಡಿಸಿದರೆ ಎಲ್ಲವೂ ಕಾಣುತ್ತದೆ ಅದರೆ ಕಂದಾಯ ಅದಿಕಾರಿಗಳು ಅಡೆ ನೋಡದೆ ಜಾಣ ಕುರುಡರಂತೆ ನೆಡೆದು  ಕೊಳ್ಳುತ್ತಿದ್ದಾರೆ ಅನುಮಾನಕ್ಕೆ ಕಾರಣವಾಗಿದೆ ಕೂಡಲೆ ತಾಲ್ಲೂಕು  ಅಡಳಿತ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಜಮೀನು ಕಬಳಿಸಲು ಹೊರಟಿರುವವರ ವಿರುದ್ದ ಕ್ರಮ ಜರುಗಿಸಿ ಹಾಗು ಸರ್ಕಾರಿ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ ಜಮೀನು ಹಸನು ಗೂಳಿಸಲು ಬಳಸಲಾಗಿರುವ ಇಟಾಚಿ ಹಾಗು  ಲಾರಿಗಳನ್ನು ವಶಪಡಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದರು.

ದೊಡ್ಡಬಳ್ಳಾಪುರ ನಗರದ ವ್ಯಾಪ್ತಿಯಲ್ಲಿ ಅಕ್ರಮ ನಿಯಮ ಬಾಹಿರವಾಗಿ ಅನಧಿಕೃತವಾಗಿ ಬಡಾವಣೆ ತಲೆ ಎತ್ತುತ್ತಿವೆ ಎಂದು ಆರೋಪಿಸಿದ ರಾಜಘಟ್ಟ  ರವಿ ಬಫರ್ ಜೋನ್ ಗಳನ್ನು  ತಿಂದು ಹಾಕುತ್ತಿದ್ದಾರೆ ಹಾಗು ಲೇಔಟ್ ಮಾಫಿಯಾಗಳು ಕೆರೆ ಅಂಗಳ ಕೆರೆ ಕೆಳಗೆ   ವಸತಿಗೆ ಯೋಗ್ಯವೇ ಅಲ್ಲದ  ಜಮೀನುಗಳನ್ನು ನಿವೇಶನ ವಿಂಗಡಣೆ ಮಾಡಿ ಹೆಚ್ಚು ಹಣಕ್ಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳಿಗೆ  ಇಂತಹವರ ಬಗ್ಗೆ ಮಾಹಿತಿ ತಿಳಿದಿದ್ದರು  ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ ಈ ಬಗ್ಗೆ ಮಾಹಿತಿ ಕೇಳಿದರೆ ಯಾವುದೂ ಉಢಾಪೆ  ಉತ್ತರ ನೀಡುತ್ತಾರೆ ಸರ್ಕಾರಿ ಜಾಗಗಳನ್ನು ಕಬಳಿಸುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳದಿದ್ದರೆ  ನಾವು ಸುಮ್ಮನೆ. ಇರುವುದಿಲ್ಲ  ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರವೇ ಪ್ರವೀಣ್ ಶಟ್ಟಿ ಬಣದ ಜಿಲ್ಲಾ ಮುಖಂಡ ಶ್ರೀನಗರ ಮನು ಕುಮಾರ್ ಜೋಗಿ ಹಳ್ಳಿ   ವಾಜೀಧ್  ಫಯಾಜ್  ರಮೇಶ್ ಮೋಹನ್ ಹಮಾಮ್ ಹರೀಶ್ ಚಂದ್ರು  ಆನಿಲ್ ಮತ್ತು ಸಾರ್ವಜನಿಕರು ಹಾಜರಿದ್ದರು.

 

- Advertisement -  - Advertisement - 
Share This Article
error: Content is protected !!
";