ಕಚೇರಿಗೆ ತಡವಾಗಿ ಬರುತ್ತಿದ್ದ ಅಧಿಕಾರಿ, ಸಿಬ್ಬಂದಿಗಳನ್ನು ಹೊರಗೆ ನಿಲ್ಲಿಸಿದ ಜಿಪಂ ಸಿಇಒ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಕಚೇರಿಗೆ ತಡವಾಗಿ ಬರುತ್ತಿದ್ದ ಸರ್ಕಾರಿ ಅಧಿಕಾರಿಗಳು
, ಸಿಬ್ಬಂದಿಗಳನ್ನು ಕಚೇರಿ ಗೇಟ್ ಹೊರಗಡೆ ನಿಲ್ಲಿಸಿರುವ ಘಟನೆ ದಾವಣಗೆರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಮಾಡಿದ್ದಾರೆ.

ಕಚೇರಿಗೆ ತಡವಾಗಿ ಆಗಮಿಸಿದ ಅಧಿಕಾರಿಗಳನ್ನು ಗೇಟ್ ಬಳಿ ನಿಲ್ಲಿಸಿ ಶಿಕ್ಷೆ ನೀಡುವ ಮೂಲಕ ಎಚ್ಚರಿಕೆ ನೀಡಿರುವ ಘಟನೆ ವರದಿಯಾಗಿದೆ.

- Advertisement - 

ಈ ಮೂಲಕ ದಾವಣಗೆರೆ ಜಿ.ಪಂ ಸಿಇಒ ಗಿತ್ತೆ ಮಾಧವ ವಿಠಲರಾವ್ ಅವರು ತಡವಾಗಿ ಬರುವ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ.

ಸದಾ ಕಚೇರಿಗೆ ತಡವಾಗಿ ಬಂದಿದ್ದಕ್ಕೆ ಗೇಟ್ ಮುಂದೆಯೇ ನಿಲ್ಲಿಸಿ, ಕಚೇರಿ ಒಳಗೆ ತೆರಳದಂತೆ ಶಿಕ್ಷೆ ವಿಧಿಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿ, ಕಚೇರಿ ಒಳಗೆ ಬಿಟ್ಟಿದ್ದಾರೆ. ಸಿಇಒ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಥಳೀಯರು ಈ ದೃಶ್ಯವನ್ನು ತಮ್ಮ ಮೊಬೈಲ್​ಗಳಲ್ಲಿ ವಿಡಿಯೋ ಸೆರೆಹಿಡಿದಿದ್ದು ಈಗ ಆ ವಿಡಿಯೋ ವೈರಲ್​ ಆಗಿದೆ.

- Advertisement - 

ಸಿಇಒ ಪ್ರತಿಕ್ರಿಯೆ: ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್ ಅವರು  ಪ್ರತಿಕ್ರಿಯೆ ನೀಡಿ, ಅಧಿಕಾರಿಗಳು, ಸಿಬ್ಬಂದಿಗಳು ಸರ್ಕಾರ ನಿಗದಿ ಮಾಡಿರುವ ಸಮಯಕ್ಕೆ ಬಾರದೆ ತಮಗೆ ಬೇಕಾದ ಸಮಯಕ್ಕೆ ಹಾಜರಾಗುತ್ತಿದ್ದರು. ಅಂತಹವರನ್ನು ಕಚೇರಿಯ ಹೊರಭಾಗದಲ್ಲಿ ನಿಲ್ಲಿಸಿ ಎಚ್ಚರಿಕೆ ನೀಡಿದ್ದೇನೆ.

ಕಚೇರಿಗೆ ಕೆಲಸಕ್ಕೆ ಬರುವ ಸಾರ್ವಜನಿಕರು ಇವರನ್ನು ಕಾಯುತ್ತ ಕೂರಬೇಕೇ? ಅದಕ್ಕಾಗಿ ಕೆಲ ಅಧಿಕಾರಿಗಳಿಗೆ ಜಿಪಂ ಹೊರಭಾಗದಲ್ಲಿ ನಿಲ್ಲಿಸಿ, ಶಿಸ್ತು ಕಾಪಾಡುವಂತೆ ಹಾಗೂ ಸರಿಯಾದ ಸಮಯಕ್ಕೆ ಕೆಲಸಕ್ಕೆ ಆಗಮಿಸುವಂತೆ ಎಚ್ಚರಿಕೆ ಕೊಟ್ಟಿದ್ದೇನೆ.

ಸರಿಯಾಗಿ ಕೆಲಸ ಮಾಡುವಂತೆ ತಿಳಿಸಿದ್ದೇನೆ. ಮತ್ತೆ ಇದೇ ವರ್ತನೆ ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದೇನೆ ಎಂದು ಅವರು ತಿಳಿಸಿದರು.

 

 

 

 

Share This Article
error: Content is protected !!
";