ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ ಯಾವುದೇ ಕ್ಷಣದಲ್ಲಿ ಬರಬಹುದು-ಡಿಕೆಶಿ

News Desk

ಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿ-ಎಎಪಿ ಮುಖಂಡರು
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಮಾಜಿ ಸಚಿವ, ಮಾಜಿ ಸಂಸದ, ಬಿಜೆಪಿ ಮುಖಂಡರಾದ ಎಲ್.ಆರ್ ಶಿವರಾಮೇಗೌಡ‌ಹಾಗೂ ಅವರ ಪುತ್ರ ಚೇತನ್ ಗೌಡ, AAP ಮುಖಂಡರಾದ ಬ್ರಿಜೇಶ್ ಕಾಳಪ್ಪ ಅವರು ತಮ್ಮ ಬೆಂಬಲಿಗರೊಂದಿಗೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ. ಕೆ. ಶಿವಕುಮಾರ್, ಶಿವರಾಮೇಗೌಡ ಪಕ್ಷ ಸೇರ್ಪಡೆಗೆ ಅರ್ಜಿ‌ಸಲ್ಲಿಸಿದ್ದರು. ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ತೊರೆದು ಆಪ್ ಸೇರ್ಪಡೆಯಾಗಿದ್ದರು. ಮತ್ತೆ ಕಾಂಗ್ರೆಸ್​​ಗೆ ಬಂದಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಚುನಾವಣೆಗೆ ಸಿದ್ಧತೆ:
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಿದ್ಧತೆ ಮಾಡಿಕೊಂಡಿದೆ. ನ್ಯಾಯಾಲಯದ ಸಲಹೆ
, ಸೂಚನೆಗೆ ಕಾಯುತ್ತಿದ್ದೇವೆ. ಬೃಹತ್ ಬೆಂಗಳೂರು ಚುನಾವಣೆಗೂ ತಯಾರಿ ನಡೆಸಿದ್ದೇವೆ. ಸಾರ್ವಜನಿಕರ‌ಅಭಿಪ್ರಾಯ ಸಂಗ್ರಹ ನಡೆಯುತ್ತಿದೆ. ಯಾವಾಗ ಬೇಕಾದರೂ ಚುನಾವಣೆ ಘೋಷಣೆ ಆಗಬಹುದು ಹಾಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಡಿಸಿಎಂ ತಿಳಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಅನ್ಯ ಪಕ್ಷಗಳಿಂದ ಬರುವವರ ದೊಡ್ಡ ಪಟ್ಟಿ ಇದೆ. ಸ್ಥಳೀಯ ಮುಖಂಡರ ಅಭಿಪ್ರಾಯ ಕೇಳಬೇಕಿದೆ. 15 ದಿನ, ತಿಂಗಳಿಗೊಮ್ಮೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಹಾಲಿ ಶಾಸಕರು ಕೂಡ ಕಾಂಗ್ರೆಸ್ ಪಕ್ಷ ಸೇರ್ಪಡೆ ಮುಂದಾಗಿದ್ದಾರೆ ಆದರೆ ಈ ಸಂದರ್ಭದಲ್ಲಿ ಶಾಸಕರ ಹೆಸರು ಬಹಿರಂಗಪಡಿಸಲಾಗದು. ನಿಮ್ಮನ್ನು ಬಿಟ್ಟು ಏನೂ ಮಾಡಲ್ಲ ಎಂದು ಮಾಧ್ಯಮ ಮಿತ್ರರಿಗೆ
ಡಿಕೆಶಿ ಪ್ರತಿಕ್ರಿಯಿಸಿದರು.

ಮುಂಬರುವ ಚುನಾವಣೆಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಪಾಲಿಕೆ ಚುನಾವಣೆಗೆ ಸಮಿತಿ ರಚನೆ ಮಾಡುತ್ತಿದ್ದೇವೆ. ಮಾರ್ಚ್ ತಿಂಗಳೊಳಗೆ ಪ್ರವಾಸ ಮಾಡಿ, ಎಲ್ಲೆಲ್ಲಿ ಸಿದ್ಧತೆ, ಹೊಂದಾಣಿಕೆ ಹಾಗೂ ಮೀಸಲಾತಿ ಹಂಚಿಕೆ ಬಗ್ಗೆ ವರದಿ ಸಲ್ಲಿಸಲು ಜವಾಬ್ದಾರಿ ಹಂಚುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷರು, ಡಿಸಿಎಂ ಡಿಕೆಶಿ ತಿಳಿಸಿದರು.

ರಾಜ್ಯದ ಹಲವು ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 104 ಕಾಂಗ್ರೆಸ್ ಕಚೇರಿ ಕಟ್ಟಲು ಮುಂದೆ ಬಂದಿದ್ದಾರೆ. ಕಟ್ಟಡ ನಿರ್ಮಾಣ ಕಾಮಗಾರಿಯಲ್ಲೂ ಸಮಿತಿ ರಚನೆ‌ಮಾಡಿದ್ದೇವೆ. ಸಮಿತಿಯವರು ವರದಿ ನೀಡುತ್ತಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಗಾಂಧೀಜಿ ನೆನಪಲ್ಲಿ ನೂರು ಕಚೇರಿ:
ರಾಜ್ಯದ ಯಾವ ಯಾವ ಸ್ಥಳಗಲ್ಲಿ ಕಾಂಗ್ರೆಸ್ ಹೆಸರಿನಲ್ಲಿ ಕಚೇರಿ ರಿಜಿಸ್ಟರ್ ಆಗದಿದ್ದರೇ ಆ ಜಾಗದಲ್ಲಿ ಕಚೇರಿ ನಿರ್ಮಿಸಲಾಗುತ್ತದೆ. ಬೆಂಗಳೂರಿನ‌ಆನಂದರಾವ್ ಸರ್ಕಲ್ ಬಳಿಯ ಕಚೇರಿ ಬಗ್ಗೆ ನಕ್ಷೆ ರೆಡಿಯಾಗಿದೆ‌. ಮಾರ್ಚ್ 10ರೊಳಗೆ ಎಐಸಿಸಿ ನಾಯಕರು ದಿನಾಂಕ ನೀಡಿದರೆ ಫೌಂಡೇಶನ್ ಹಾಕುತ್ತೇವೆ.

ಗಾಂಧೀಜಿಯವರ ನೆನಪಿನಲ್ಲಿ ಪಕ್ಷದ ನೂರು ಕಚೇರಿಗಳನ್ನು ಕಟ್ಟುವ ನಿರ್ಧಾರ ಮಾಡಲಾಗಿದೆ ಎಂದು ಡಿಕೆಶಿ ಮಾಹಿತಿ ನೀಡಿದರು.


ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್
,  ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮ್ಮಯ, ಕಾಂಗ್ರೆಸ್ ಮುಖಂಡ ಆರ್.ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

 

Share This Article
error: Content is protected !!
";