ಸ್ವಚ್ಚತಾ ಕಾರ್ಯಕ್ಕೆ ಮುಂದಾದ ಗ್ರಾಮ ಪಂಚಾಯಿತಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ
ತಾಲ್ಲೂಕಿನ ಮಜರಾಹೊಸಹಳ್ಳಿ
  ಗ್ರಾಮಪಂಚಾಯಿತಿಯು ಪ್ರತಿ ತಿಂಗಳ ಮೂರನೆಯ ಶನಿವಾರದಂದು ಸ್ಚಚ್ಚತಾ ಶನಿವಾರ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಅದರ ಸ್ವಚ್ಚತೆಯ ಮುಂದುವರೆದ ಭಾಗವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಕ್ಕತುಮಕೂರಿನ ಶಾಲೆಯ ಅಂಗಳದಲ್ಲಿ  ಸ್ವಚ್ಚತಾ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು.

ವಿಶಾಲವಾಗಿದ್ದ ಶಾಲೆಯ ಅಂಗಳದಲ್ಲಿ ದಟ್ಟವಾಗಿ ಬೆಳೆದಿದ್ದ ಗಿಡಗಂಟೆಗಳು ಮುಳ್ಳಿನ ಗಿಡಗಳ ರಾಶಿಯ ನಡುವೆ ಶಾಲಾ ಮಕ್ಕಳು ಆಟವಾಡುವುದೇ ಕಷ್ಟಕರವಾಗಿತ್ತು. ಇದನ್ನರಿತ ಗ್ರಾಮಪಂಚಾಯಿತಿ ಆಡಳಿತ ವರ್ಗ ಮತ್ತು  ಸದಸ್ಯರೆಲ್ಲರೂ ಸೇರಿ ಸ್ವಚ್ಚತಾ ಕಾರ್ಯಗಳನ್ನು ಮಾಡಿ ಶಾಲಾ ಅಂಗಳವನ್ನ ಶುಚಿಗೊಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರು  ಉಪಾಧ್ಯಕ್ಷರು ಸೇರಿದಂತೆ ಗ್ರಾಮ ಪಂಚಾಯತಿಯ ಸದಸ್ಯರು, ಪೌರಕಾರ್ಮಿಕರು ಭಾಗವಹಿಸಿದ್ದರು.

- Advertisement - 

 

- Advertisement - 
Share This Article
error: Content is protected !!
";