ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಹೊಳಲ್ಕೆರೆ ತಾಲ್ಲೂಕಿನ ಗಣಿಬಾಧಿತ ಪ್ರದೇಶದ 05 ಕಿ.ಮೀ ವ್ಯಾಪ್ತಿಗೆ ಬರುವ ಆಡನೂರು, ಬಿ.ದುರ್ಗ, ಚಿಕ್ಕಜೂಜಾರು, ಚಿತ್ರಹಳ್ಳಿ, ಗುಂಜಿಗನೂರು, ಹೆಚ್.ಡಿ.ಪುರ, ಮುತ್ತುಗದೂರು, ಶಿವಗಂಗ, ಟಿ.ನುಲೇನೂರು, ತಾಳ್ಯ, ತೇಕಲವಟ್ಟಿ ಮತ್ತು
ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಅರ್ಹ ವಸತಿ, ನಿವೇಶನ ರಹಿತರನ್ನು ಆಯ್ಕೆ ಮಾಡಿ ಪಟ್ಟಿಯನ್ನು ಸಲ್ಲಿಸಲು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆಗಳನ್ನು ಡಿಸೆಂಬರ್ 03 ರಿಂದ 12 ರವರೆಗೆ ಆಯೋಜಿಸಲಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ವ್ಯಾಪ್ತಿಗೆ ಬರುವ ಗಣಿ ಬಾಧಿತ ಪ್ರದೇಶದ ಹಳ್ಳಿಗಳಲ್ಲಿ ಅರ್ಹ ವಸತಿ, ನಿವೇಶನ ರಹಿತರನ್ನು ತುರ್ತಾಗಿ ಆಯ್ಕೆ ಮಾಡಿ ಪಟ್ಟಿಯನ್ನು ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚಿಸಿದ್ದು,
ಈ ಗ್ರಾಮ ಪಂಚಾಯಿತಿಗಳ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಅರ್ಹ ಫಲಾನುಭವಿಗಳು ನಿಗಧಿಪಡಿಸಿದ ಗ್ರಾಮ ಸಭೆಗಳ ದಿನಾಂಕದಂದು ಭಾಗವಹಿಸಿ ಇದರ ಸದುಪಯೋಗ ಪಡೆಯಬೇಕು. ಹೆಚ್ಚಿನ ವಿವರವನ್ನು ಗ್ರಾ.ಪಂ. ಪಿಡಿಒ ಗಳಿಂದ ಪಡೆಯಬಹುದು ಎಂದು ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

