ಹೆಗ್ಗಡಿಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಗ್ರಾಮ ಸಭೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ನಗರ
,ವ್ಯಾಪ್ತಿಯಲ್ಲಿ ಅಪರಾಧ ಪ್ರಕರಗಳು ಹೆಚ್ಚಾಗಿ ನಡೆಯುತ್ತಿವೆ, ಜತೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ  ಬರುವುದರಿಂದ  ಅಪರಾಧ ಪ್ರಕಣಗಳು ಅಧಿಕವಾಗಿದೆ ಇದನ್ನು ಕಡಿವಾಣ ಹಾಕುವಂತೆ ಪೋಲಿಸ್ ಅಧಿಕಾರಿಗಳಿಗೆ  ಗ್ರಾ.ಪಂ ಸದಸ್ಯರು ಮನವಿ ಮಾಡಿದರು.

ತಾಲೂಕಿನ ಹೆಗ್ಗಡಿಹಳ್ಳಿ ಪಂಚಾಯಿತಿಯ  ಗ್ರಾಮ ಸಭೆಯ ಕಾರ್ಯಕ್ರಮವನ್ನು ಶುಕ್ರವಾರ ನಡೆಸಲಾಯಿತು. ವಾರದ ಅಂತ್ಯದಲ್ಲಿ  ನಂದಿ  ಬೆಟ್ಟಕ್ಕೆ ಬರುವ ಪ್ರವಾಸಿಗರಲ್ಲಿ ಕೆಲವು ಪುಂಡರು ರಸ್ತೆ ಉದ್ದಕ್ಕೂ  ವಿಲೀಂಗ್  ಮಾಡಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಜತೆಗೆ  ಗಾಂಜಾ ಪ್ರಕರಣಗಳು ಸಹ ಹೆಚ್ಚಾಗಿವೆ  ಆದ್ದರಿಂದ  ಬೀಟ್ ವ್ಯವಸ್ಥೆ  ಹೆಚ್ಚಿಸುವಂತೆ ತಿಳಿಸಿದರು.

ಗ್ರಾಮಾಂತರ ಪೋಲಿಸ್ ಅಧಿಕಾರಿ  ಲೋಕೇಶ್  ಮಾತನಾಡಿ, ಹಳ್ಳಿಗಳಲ್ಲಿ ಕುರಿ ಹಸು ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ ಸಾರ್ವಜನಿಕರು ಎಚ್ಚರಿಕೆ ವಹಿಸಿ. 112 ಸಹಾಯವಾಣಿಯನ್ನು  ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ಮುಂದಿನ ದಿನಗಳಲ್ಲಿ  ನಂದಿ ಬೆಟ್ಟದ ರಸ್ತೆಯಲ್ಲಿ ಬೆಳಗ್ಗೆ ಸಂಖ್ಯೆ ಪೋಲಿಸರನ್ನು ನಿಯೋಜಿಸಿ  ವೀಲಿಂಗ್  ಸೇರಿದಂತೆ ಪುಂಡರ ಹಾವಳಿಯನ್ನು ನಿಯಂತ್ರಿಸಲು ಕ್ರಮವಹಿಸಲಾಗುವುದು ಎಂದರು.

 ಗ್ರಾಮ ಸಭೆಯ ನೋಡೆಲ್ ಅಧಿಕಾರಿ ರಾಮಾಂಜಿನೇಯ ಮಾತನಾಡಿಗ್ರಾಮ  ಪಂಚಾಯಿತಿಗಳು ಮೊದಲು ತೆರಿಗೆ ವಸೂಲಿಗೆ  ಕಟ್ಟುನಿಟ್ಟಿನ ಕ್ರಮವಹಿಸಬೇಕು. ಸಿಬ್ಬಂದಿಗಳು  ಸಾರ್ವಜನಿಕರೊಡನೆ ಅವಿನಾಭಾವ ಸಂಬಂಧ ಹೊಂದಿರಬೇಕು  ಇದರಿಂದ ಗ್ರಾಮ ಪಂಚಾಯಿತಿಯ ಅಭಿವೃದ್ದಿಯಲ್ಲಿ ಸಾರ್ವಜನಿಕರು ಕೈಜೋಡಿಸಲು ಸಹಕಾರಿಯಾಗಲಿದೆ. ಮೂಲಭೂತ ಸೌಕರ್ಯಗಳ ಜತೆಗೆ ಸ್ಥಳೀಯ ಸಮಸ್ಯೆಗಳನ್ನು  ಪರಿಣಾಮಕಾರಿಯಾಗಿ ಬಗೆಹರಿಸವ ಮೂಲಕ ಪಂಚಾಯಿತಿಯೂ ಜನರ ಸೇವೆಗೆ ಮುಂದಾಗಬೇಕೆಂದು ತಿಳಿಸಿದರು.

 ಗ್ರಾ.ಪಂ ಅಧ್ಯಕ್ಷೆ ಮಂಜುಳ ಮಾತನಾಡಿ, ನನ್ನ ಅವಧಿಯ ಮೊದಲ ಗ್ರಾಮ ಸಭೆಯಾಗಿದೆ ಎಲ್ಲ ಪ್ರಮುಖ ಇಲಾಖೆಯ ಅಧಿಕಾರಿಗಳು  ಗ್ರಾಮ ಸಭೆಗೆ ಬಂದಿದ್ದು ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರತಿ ಗ್ರಾಮದಲ್ಲೂ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶಿಕ್ಷಣ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಮೂಲಕ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಪಂಚಾಯಿತಿ  ಅಭಿವೃದ್ಧಿ ಅಧಿಕಾರಿ ಸೌಮ್ಯ, ಉಪಾಧ್ಯಕ್ಷ ಎಸ್.ಎನ್.ಕುಮಾರ್, ಸದಸ್ಯರುಗಳಾದ ಎಸ್.ಡಿ.ಮುನಿರಾಜು, ಕೆ. ಪ್ರೇಮ್ ಕುಮಾರಿ, ಜಿ. ಮುರಳಿ, ಮಂಜುನಾಥ, ಪಲ್ಲವಿ, ಕವಿತಾ, ಎನ್.ಮುನಿರತ್ನ, ಆಂಜಿನಮ್ಮ, ಮುನಿರಾಜಪ್ಪ, ಎನ್.ಜಗನ್ನಾಥ್, ಮಂಜುಳಮ್ಮ, ಕೆ.ಮುರಳಿ, ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ. ಸೌಮ್ಯ ಹಾಗೂ ಆಶಾ ಕಾರ್ಯಕರ್ತರು ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು. 

 

- Advertisement -  - Advertisement -  - Advertisement - 
Share This Article
error: Content is protected !!
";