ಗೊಲ್ಲರಹಟ್ಟಿಯಲ್ಲಿ ಅದ್ಧೂರಿ ಶ್ರೀಕೃಷ್ಣ ಜಯಂತಿ: ಬೃಹತ್ ಮೆರವಣಿಗೆ..

WhatsApp
Telegram
Facebook
Twitter
LinkedIn

ಗೊಲ್ಲರಹಟ್ಟಿಯಲ್ಲಿ ಅದ್ಧೂರಿ ಶ್ರೀಕೃಷ್ಣ ಜಯಂತಿ: ಬೃಹತ್ ಮೆರವಣಿಗೆ..

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:

ನಗರದ ಕಾಟಪ್ಪನಹಟ್ಟಿಯ ಗೊಲ್ಲರಹಟ್ಟಿಯಲ್ಲಿ ಆ.೨೬ರಂದು ಆರಂಭವಾಗಿದ್ದ ಶ್ರೀಕೃಷ್ಣ  ಜನ್ಮಾಷ್ಠಮಿ ಕಾರ್ಯಕ್ರಮ ಭಾನುವಾರ ನಗರದಾದ್ಯಂತ ನಡೆದ ಬೃಹತ್ ಮೆರವಣಿಗೆ ಮೂಲಕ ತೆರೆಬಿದ್ದಿತು.

 

ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಶ್ರೀಕೃಷ್ಣಜಯಂತಿ ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಶ್ರೀಕೃಷ್ಣ ಪರಮಾತ್ಮ ಸದಾಕಾಲ ನೊಂದವರ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರತಿವರ್ಷ ಇಲ್ಲಿನ ಸಮುದಾಯ ಭಕ್ತಿ, ಶ್ರದ್ದೆಯಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ಎಲ್ಲಾ ವರ್ಗಗಳ ಶ್ರೀಕೃಷ್ಣನ ಭಕ್ತರು ಈ ಕಾರ್ಯಕ್ರಮಲ್ಲಿ ಉಪಸ್ಥಿತರಿದ್ದು, ಮೆರವಣಿಗೆಯಲ್ಲಿ ಭಾಗವಹಿಸಿ ಶ್ರೀಕೃಷ್ಣ ಮೇಲಿನ ಅಪಾರವಾದ ಗೌರವ, ಭಕ್ತಿ ಸಮರ್ಪಿಸುತ್ತಾ ಬಂದಿದ್ದಾರೆ.

 

ಬೆಳಗ್ಗೆ ೧೧ ಗಂಟೆಗೆ ಆರಂಭವಾದ ಮೆರವಣಿಗೆ ಮಧ್ಯಾಹ್ನ ೨ಕ್ಕೆ ಮುಕ್ತಾಯವಾಯಿತು.

ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಟಿ.ರವಿಕುಮಾರ್, ಹಿರಿಯ ಮುಖಂಡ ಸಿ.ವೀರಭದ್ರಬಾಬು, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಗದ್ದಿಗೆತಿಪ್ಫೇಸ್ವಾಮಿ, ನಗರಸಭಾ ಸದಸ್ಯ ವೈ.ಪ್ರಕಾಶ್, ಸಾಕಮ್ಮ, ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‌ಗೌಡ, ಕೆ.ವೀರಭದ್ರಪ್ಪ, ಜಿ.ಟಿ.ಶಶಿಧರ, ಶ್ರೀನಂದಗೋಕುಲಸೇವಾಸಮಿತಿ ಅಧ್ಯಕ್ಷ ವೈ.ಶ್ರೀನಿವಾಸ್, ಎಚ್.ಮಹಲಿಂಗಪ್ಪ, ವೈ.ಕಾಂತರಾಜ್, ವಿ.ಅಪ್ಪುವೀರೇಶ್, ಕೆಂಪಮಂಜ, ದಾಸಪ್ಪರರಂಗಣ್ಣ, ಈ.ವೀರೇಶ್, ಇಂಡಸ್‌ಚಿಕ್ಕಣ್ಣ, ಮಂಜಣ್ಣ, ಜಗನ್ನಾಥ ಮುಂತಾದವರು ಉಪಸ್ಥಿತರಿದ್ದರು. 

 

 

 

News Desk   About Us
For Feedback - [email protected]

LATEST Post

error: Content is protected !!
WhatsApp Icon Telegram Icon