ನಕಲಿ ದಾಖಲೆ ಸೃಷ್ಟಿಸಿ ಮನೆ ನಿರ್ಮಿಸಿದ ಗ್ರಾಪಂ ಬಿಲ್ ಕಲೆಕ್ಟರ್!!

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಪ್ರಭಾವತಿ ಎನ್ನುವವರು ಸರಸ್ವತಮ್ಮ ಎನ್ನುವವರಿಗೆ ಸರ್ಕಾರ ನಿರಾಶ್ರಿತಯೋಜನೆಯಡಿ ಹಂಚಿಕೆ ಮಾಡಿದ್ದ ನಿವೇಶನವನ್ನು ಕಬಳಿಸುವ ಹುನ್ನಾರ ನಡೆಸಿ ಬಿಲ್ ಕಲೆಕ್ಟರ್ ಪ್ರಭಾವತಿ ಹಾಗೂ ಆಕೆಯ ಪತಿ ನಂಜಪ್ಪ ಎನ್ನುವವರು ಸರಸ್ವತಮ್ಮ ಎನ್ನುವವರಿಗೆ ಸೇರಿದ ನಿವೇಶನದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ನೊಂದ ಸರಸ್ವತಮ್ಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ದೊಡ್ಡಬೆಳವಂಗಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಬಿಲ್ ಕಲೆಕ್ಟರ್ ಪ್ರಭಾವತಿ ವಿರುದ್ಧ ದೂರು ನೀಡಿದ್ದಾರೆ. 

ಸರ್ಕಾರ ಹಂಚಿಕೆ ಮಾಡಿದ್ದ ನಿವೇಶನಕ್ಕೆ ಸಂಬಂದಿಸಿದಂತೆ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿಯಲ್ಲಿ ಸರಸ್ವತಮ್ಮ ಹೆಸರಲ್ಲಿ ಖಾತೆಯೂ ಇದ್ದು 2021 ರವರೆಗೆ ಕಂದಾಯವನ್ನು ಬಿಲ್ ಕಲೆಕ್ಟರ್ ಪ್ರಭಾವತಿ ಕಟ್ಟಿಸಿಕೊಂಡಿದ್ರು ಆದ್ರೆ ತಮ್ಮ ವೈಯಕ್ತಿಕ ಪ್ರಭಾವದಿಂದ ಅದೇ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ ನಕಲಿ ದಾಖಲೆ ಸೃಷ್ಟಿಸಿ ಸರಸ್ವತಮ್ಮರವರ ಜಾಗದಲ್ಲಿ ಮನೆ ನಿರ್ಮಾಣ ಮಾಡಿರುವ ಬಗ್ಗೆ ಸರಸ್ವತಮ್ಮ ನ್ಯಾಯ ಕೊಡಿಸುವಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಬಿಲ್ ಕಲೆಕ್ಟರ್ ಪ್ರಭಾವತಿ ವಿರುದ್ಧ ದೂರು ನೀಡಿದ್ದಾರೆ.

ಇನ್ನೂ ಈ ಬಗ್ಗೆ ಪರ ವಿರೋಧದ ಚರ್ಚೆಗಳು ಜೋರಾಗಿದ್ದು ಗ್ರಾಮ ಪಂಚಾಯತ್ ಸರ್ಕಾರಿ ನೌಕರರೇ ಹೀಗಾದ್ರೆ ಬಡವರ ನಿವೇಶನ ಉಳಿಯುತ್ತಾ ಎನ್ನುವ ಮಾತುಗಳು ಕೇಳಿ ಬಂದಿದ್ದು.ಗ್ರಾಮ ಪಂಚಾಯತ್ ನಲ್ಲಿ ಖಾತೆ ಇರುವ ನಿವೇಶನದಲ್ಲಿ ಅಲ್ಲಿನ ಬಿಲ್ ಕಲೆಕ್ಟರ್ ಅಕ್ರಮವಾಗಿ ಮನೆ ನಿರ್ಮಾಣ ಮಾಡುತಿದ್ದರು ಕೂಡ ದೊಡ್ಡಬೆಳವಂಗಲ ಗ್ರಾಮ ಪಂಚಾಯತ್ ಅಧಿಕಾರಿಗಳು ಸುಮ್ಮನೆ ಕುಳಿತಿರುವುದೇಕೆ ಎನ್ನುವ ಪ್ರಶ್ನೆಯೂ ಸಹ ಇಲ್ಲಿ ಉದ್ಭವವಾಗುತ್ತದೆ .ಬಿಲ್ ಕಲೆಕ್ಟರ್ ಪ್ರಭಾವತಿ ಸಾಕ್ಷಿ ನಾಶ ಮಾಡುವ ಸಂಭವವಿರುವುದರಿಂದ ಕೂಡಲೇ ಬಿಲ್ ಕಲೆಕ್ಟರ್ ಪ್ರಭಾವತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಅಮಾನತ್ತು ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

 

Share This Article
error: Content is protected !!
";