ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಲುಗಾಡುತ್ತಿರುವ ಕುರ್ಚಿ ಉಳಿಸಿಕೊಳ್ಳಲು ಜಾತಿ ಜಾತಿಗಳ ಮಧ್ಯೆ ಕಿಚ್ಚು ಹಚ್ಚಿ ಗಣತಿ ಹೆಸರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದ “ಜಾತಿವ್ಯಾಧಿ ಸಿದ್ದರಾಮಯ್ಯ“ಗೆ ಭಾರೀ ಮುಖಭಂಗವಾಗಿದೆ ಎಂದು ಜೆಡಿಎಸ್ ಹರಿಹಾಯ್ದಿದೆ.
ಸಿದ್ದರಾಮಯ್ಯ ಪಟಾಲಂ “ಸಿದ್ಧಪಡಿಸಿದ್ದ ರೆಡಿಮೇಡ್ ಜಾತಿಗಣತಿ” ವರದಿಯನ್ನು ಭಾರತೀಯ ಕಾಂಗ್ರೆಸ್ ಹೈಕಮಾಂಡ್ ಕಸದ ಬುಟ್ಟಿಗೆ ಎಸೆದಿದೆ.
ಈ ಮೂಲಕ 10 ವರ್ಷಗಳ ಹಿಂದಿನ ಹಳಸಲು ದೋಷಪೂರಿತ ಸಮೀಕ್ಷೆ ಅವೈಜ್ಞಾನಿಕ, ವರದಿಯ ಅಂಕಿ- ಅಂಶಗಳು ಸತ್ಯಕ್ಕೆ ದೂರವಾಗಿವೆ ಎಂಬುದನ್ನು ಹೈಕಮಾಂಡ್ ಒಪ್ಪಿಕೊಂಡಿದೆ.
ಕೇಂದ್ರ ಸರ್ಕಾರ ಈಗಾಗಲೇ ದೇಶದ ಜನಗಣತಿ ಜೊತೆಗೆ ಜಾತಿಗಣತಿಯನ್ನು ಮಾಡಲು ತೀರ್ಮಾನಿಸಿದೆ. 150 ಕೋಟಿ ರೂ ಖರ್ಚು ಮಾಡಿ ತಯಾರಿಸಿದ್ದ ವರದಿಗೆ ಎಳ್ಳು ನೀರು ಬಿಡಲಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತೆ ಮರು ಸಮೀಕ್ಷೆ ಮಾಡಲು ಜನರ ನೂರಾರು ಕೋಟಿ ತೆರಿಗೆ ಹಣವನ್ನು ವ್ಯರ್ಥ ಮಾಡುವುದು ಬೇಡ ಎಂದು ಜೆಡಿಎಸ್ ವಿನಂತಿಸಿದೆ.