ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಇಡೀ ವಿಶ್ವವೇ ಒಂದು ಕುಟುಂಬ ಎಂದು ಸಾರಿದ ಶ್ರೇಷ್ಠ ರಾಷ್ಟ್ರ ಭಾರತ ಎಂದು ಬೆಂಗಳೂರಿನ ಶ್ರೀಭವತಾರಿಣಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ವಿವೇಕಮಯೀ ತಿಳಿಸಿದರು.
ನಗರದ ಬಾಪೂಜಿ ಆಯುರ್ವೇದ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಾವೆಲ್ಲ ಭಾರತೀಯರೆಂಬ ಭಾವಮೂಡಬೇಕು.ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಪ್ರತಿಯೊಬ್ಬರೂ ಆತ್ಮಸ್ವರೂಪ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಮ್ಮದಾದ ಗುರುತನ್ನು ಈ ಜಗತ್ತಿನ ಮೇಲೆ ಮೂಡಿಸಿ ಹೋಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಾತಾಜೀ ತ್ಯಾಗಮಯೀ, ಮಾತಾಜೀ ವಂದನಾಮಯೀ, ಮಾತಾಜೀ ಜ್ಯೋತ್ಸ್ನಾಮಯೀ, ಮಾತಾಜೀ ಅಮೋಘಮಯೀ, ಮಾತಾಜೀ ಮೋಕ್ಷಪ್ರಾಣಾ ವಹಿಸಿದ್ದರು.
ಪ್ರಾರ್ಥನೆಯನ್ನು ಕುಮಾರಿ ಸಂಜನಾ ಮಾಡಿದರೆ ವಂದನಾರ್ಪಣೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಟಿ.ಬಸವರಾಜಪ್ಪ ನಡೆಸಿಕೊಟ್ಟರು.
ಉಪನ್ಯಾಸ ಕಾರ್ಯಕ್ರಮದಲ್ಲಿ ಸುನೀಲ್,ಯತೀಶ್ ಎಂ ಸಿದ್ದಾಪುರ, ಹೃತಿಕ್, ಮೌರ್ಯ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

