ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಪಾನ್ ಪ್ರವಾಸ: ‘ಯೊಕೊಗವ ಎಲೆಕ್ಟ್ರಿಕ್ ಕಾರ್ಪೊರೇಷನ್‘ ಮುಖ್ಯಸ್ಥರೊಂದಿಗೆ ಮಹತ್ವದ ಮಾತುಕತೆ ವಿಸ್ತರಣೆ ಅವಕಾಶಗಳ ಪರಿಶೀಲಿಸುವುದಾಗಿ ಸಂಸ್ಥೆ ಪ್ರಕಟಿಸಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಹೂಡಿಕೆ ಆಕರ್ಷಣೆ, ಉದ್ಯಮ ಸ್ಥಾಪನೆ, ಉದ್ಯೋಗ ಸೃಷ್ಟಿ ತನ್ಮೂಲಕ ರಾಜ್ಯದ ಒಟ್ಟಾರೆ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಕೈಗೊಂಡಿರುವ ಜಪಾನ್ ಪ್ರವಾಸ ಆರಂಭವಾಗಿದೆ.
ಶತಮಾನಕ್ಕೂ ಮೀರಿದ ಇತಿಹಾಸವುಳ್ಳ ಜಪಾನ್ ನ ಪ್ರತಿಷ್ಠಿತ ‘ಯೊಕೊಗವ ಎಲೆಕ್ಟ್ರಿಕ್ ಕಾರ್ಪೊರೇಷನ್’ ಸಂಸ್ಥೆಯ ಉನ್ನತಮಟ್ಟದ ಪ್ರತಿನಿಧಿಗಳನ್ನು ಈ ದಿನ ಭೇಟಿ ಮಾಡಿ ಮಾತು ಕತೆ ನಡೆಸಿದೆವು.
ಸಂಸ್ಥೆ ರಾಜ್ಯದಲ್ಲಿ ದೃಢವಾದ ನೆಲೆಯನ್ನು ಹೊಂದಿದ್ದು, 2,000ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಒದಗಿಸಿದೆ. 2025-2030ರ ನೂತನ ಕೈಗಾರಿಕಾ ನೀತಿ ಅಡಿಯಲ್ಲಿ ಲಭ್ಯವಿರುವ ಶ್ರೇಷ್ಠಮಟ್ಟದ ಪ್ರೋತ್ಸಾಹಕಗಳ ಕುರಿತು ಅವರಿಗೆ ತಿಳಿಸಲಾಯಿತು. ರಾಜ್ಯದಲ್ಲಿ ವಿಸ್ತರಣೆ ಅವಕಾಶಗಳನ್ನು ಪರಿಶೀಲಿಸುವುದಾಗಿ ಅವರು ತಿಳಿಸಿದರು.
ಇಂದಿನ ಮಾತುಕತೆ ಕರ್ನಾಟಕವನ್ನು ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳ ಕೇಂದ್ರವಾಗಿ ಮತ್ತಷ್ಟು ಬಲಪಡಿಸುವುದರಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಪಾಟೀಲ್ ಹೇಳಿದರು.

