ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿ ಬೆಂಗಳೂರು ನಗರದ ಆಡಳಿತದ ಹೊಣೆ ಹೊತ್ತಿದ್ದ ಬಿಬಿಎಂಪಿ ಇಂದಿನಿಂದ ಇರುವುದಿಲ್ಲ. ಇದರ ಬದಲಿಗೆ ಮೇ-15 ರಿಂದ ಗ್ರೇಟರ್ ಬೆಂಗಳೂರು ಜಾರಿಗೆ ಬರುತ್ತಿರುವುದು ವಿಶೇಷವಾಗಿದೆ.
ಮೇ-15ರ ಗುರುವಾರದಿಂದ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಅಥಾರಿಟಿ ಆಗಲಿದೆ. ಸದ್ಯ ಮೇ-15ರಿಂದ ಗ್ರೇಟರ್ ಬೆಂಗಳೂರು ಜಾರಿಗೆ ಬರುವಂತೆ ಸರ್ಕಾರ ಬುಧವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೇಟರ್ ಬೆಂಗಳೂರು ಅಥಾರಿಟಿಗೆ ಅಧ್ಯಕ್ಷರಾಗಲಿದ್ದು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉಪಾಧ್ಯಕ್ಷರಾಗಿ ಸೇವೆ ಮಾಡಲಿದ್ದಾರೆ.
ಈಗಾಗಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದು ಈ ಬೆನ್ನಲ್ಲೇ ಅಲರ್ಟ್ ಆದ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ತಯಾರಿ ನಡೆಸಿತ್ತು. ಹಾಗಾಗಿ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ಥಿತ್ವಕ್ಕೆ ಬಂದಿದೆ. ಆ ಮೂಲಕ ರಾಜಧಾನಿ ಬೆಂಗಳೂರಿನ ಆಡಳಿತದ ಚಿತ್ರಣವೇ ಬದಲಾಗಲಿದೆ. ಬೆಂಗಳೂರಿನ ಪ್ರಾದೇಶಿಕತೆ-ಭೌಗೋಳಿಕತೆಯ ವ್ಯಾಪ್ತಿ-ವಿಸ್ತೀರ್ಣ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರನ್ನ ವಿಭಾಗ ಮಾಡಿ ಆಡಳಿತ ನಡೆಸುವ ಸರ್ಕಾರದ ಗ್ರೇಟರ್ ಬೆಂಗಳೂರು ಕನಸಿಗೆ ಇತ್ತೀಚೆಗಷ್ಟೇ ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇದೀಗ ಸರ್ಕಾರ ಈ ವಿಧೇಯಕ ಜಾರಿ ಮಾಡಿ ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿ ಮಾಡಿದೆ. ಹೊಸ ಹೆಸರು ಹೊಸ ಸ್ವರೂಪದಲ್ಲಿ ಭಾರೀ ರೂಪಾಂತರಗೊಂಡು ಬಿಬಿಎಂಪಿ ಅನ್ನೋ ಹೆಸರು ಇತಿಹಾಸದ ಪುಟ ಸೇರಲಿದೆ. ಮೇ-15 ರ ನಂತರ ಬಿಬಿಎಂಪಿ ಬದಲು ಜಿಬಿಎ ಅಸ್ಥಿತ್ವಕ್ಕೆ ಬರಲಿದ್ದು, ಬೆಂಗಳೂರು ಆಡಳಿತ ಕಾಯ್ದೆ-೨೦೨೪ ಜಾರಿಯಾಗಲಿದೆ.
ಪ್ರಸ್ತುತ ಇರುವ ಬಿಬಿಎಂಪಿ ವ್ಯವಸ್ಥೆಯನ್ನ ಮೂರು ಪಾಲಿಕೆಗಳನ್ನಾಗಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂರು ಪಾಲಿಕೆಗಳ ವ್ಯಾಪ್ತಿ ಗ್ರೇಟರ್ ಬೆಂಗಳೂರಿಗೆ ಬರುವುದರಿಂದ ಜಿಬಿಎಗೆ ಆಡಳಿತಾಧಿಕಾರಿಗಳನ್ನ ನೇಮಕ ಮಾಡಲಾಗುತ್ತದೆ. ಆಡಳಿತಾಧಿಕಾರಿ ಅಡಿಯಲ್ಲೇ ಮೂರು ಪಾಲಿಕೆಗಳ ಅಡಳಿತ ನಿರ್ವಹಣೆಯಾಗಲಿದ್ದು, ಮೂರು ಪಾಲಿಕೆಗಳಿಗೂ ಆಡಳಿತಾಧಿಕಾರಿಯೇ ಮುಖ್ಯಸ್ಥರಾಗಿರುತ್ತಾರೆ.
ಗ್ರೇಟರ್ ಬೆಂಗಳೂರು ಅಥಾರಿಟಿಗೆ ಯೋಜನೆ ಮತ್ತು ಹಣಕಾಸು ಅಧಿಕಾರ ನಿರ್ವಹಣೆ ಅಧಿಕಾರ ಇರಲಿದೆ. ಸುಮಾರು 1400 Sq ಕಿ.ಲೋ ಮೀಟರ್ ವ್ಯಾಪ್ತಿಗೆ ಬರಲಿದೆ.
೧ ರಿಂದ ೧೦ ಕಾರ್ಪೊರೇಷನ್ ಗಳು ವ್ಯಾಪ್ತಿಗೆ ಬರಲಿದೆ. ಈ ಕರಡು ಮಸೂದೆ ಸುಮಾರು ೪೦೦ ವಾರ್ಡ್ ಗಳ ರಚನೆಗೆ ಪ್ರಸ್ತಾಪಿಸಿದೆ. ೫ ರಿಂದ ೧೦ ಕಾರ್ಪೋರೇಷನ್ ಇದ್ದು, ಒಂದೊಂದು ಕಾರ್ಪೋರೇಷನ್‌ಗೆ ಒಬ್ಬ ಆಯುಕ್ತ ಇರುತ್ತಾರೆ. ಜಲಮಂಡಳಿ, ಬಿಡಿಎ, ಬೆಸ್ಕಾಂ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರಲಿದ್ದು ಬೆಂಗಳೂರಿನ ಚಿತ್ರಣ ಸಂಪೂರ್ಣ ಬದಲಾವಣೆ ಆಗುವ ನಿರೀಕ್ಷೆ ಹೊಂದಲಾಗಿದೆ.