“ಗ್ರೇಟರ್‌ ಬೆಂಗಳೂರು” ಬಿಲ್‌ ಕನ್ನಡಿಗರ ಪಾಲಿನ ಮರಣ ಶಾಸನ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 “ಕರ್ನಾಟಕ ಕಾಂಗ್ರೆಸ್ ಸರ್ಕಾರ ತಂದಿರುವ “ಗ್ರೇಟರ್‌ಬೆಂಗಳೂರು” ಬಿಲ್‌ಕನ್ನಡಿಗರ ಪಾಲಿನ ಮರಣ ಶಾಸನ ಆಗಲಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.  

ಬಿಬಿಎಂಪಿಯನ್ನು ಏಳು ವಿಭಾಗಗಳಾಗಿ ವಿಭಜಿಸುವುದು, ಬೆಂಗಳೂರನ್ನು ಪರಭಾಷಿಕರ ತೆಕ್ಕೆಗೆ ನೀಡುವುದಕ್ಕೆ ಸಿದ್ದರಾಮಯ್ಯ ಸರ್ಕಾರ ಅಂಕಿತ ಹಾಕಿದೆ.  

- Advertisement - 

ಈಗಾಗಲೇ ಬೆಂಗಳೂರಿನಲ್ಲಿ ಕನ್ನಡಿಗರ ಸ್ಥಿತಿ ಅಕ್ಷರಶಃ ಚಿಂತಾಜನಕವಾಗಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಬಿಬಿಎಂಪಿಯನ್ನು ಹೋಳು ಮಾಡುವ “ಗ್ರೇಟರ್ ಬೆಂಗಳೂರು” ಕನ್ನಡಿಗರ ಅಸ್ತಿತ್ವಕ್ಕೆ ಕೊಡಲಿಪೆಟ್ಟು ನೀಡಲಿದೆ.

ಸಾಸಿವೆ ಕಾಳಷ್ಟು ಬೆಂಗಳೂರು ಅಭಿವೃದ್ಧಿ ಮಾಡದ ಬಾಯಿ ಮಾತಿನ ಶೂರ ಡಿಸಿಎಂ ಡಿ.ಕೆ ಶಿವಕುಮಾರ್ಗಾರ್ಡನ್‌ಸಿಟಿಯನ್ನು “ಗಾರ್ಬೇಜ್‌ಸಿಟಿ” ಮಾಡಿದ್ದೀರಿ, ರಸ್ತೆಗಳ ಗುಂಡಿ ಮುಚ್ಚದೆ “ಗುಂಡಿಯೂರು” ಮಾಡಿ ಹತ್ತಾರು ಜನರ ಪ್ರಾಣಕ್ಕೆ ಕುತ್ತು ತಂದಿದ್ದೀರಿ.    
ನಿಮ್ಮ ಆಡಳಿತದಲ್ಲಿ ಉದ್ಯಾನ ನಗರಿಗೆ ಕನಿಷ್ಠ ಮೂಲ ಸೌಕರ್ಯವನ್ನೂ ಒದಗಿಸಲು “ಕೈಲಾಗದೇ, ನಿಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಈಗ ಬಿಬಿಎಂಪಿಯನ್ನು ಛಿದ್ರಮಾಡಲು “ಕೈ” ಹಾಕಿದ್ದೀರಿ ಜೆಡಿಎಸ್ ಗಂಭೀರ ಆರೋಪ ಮಾಡಿದೆ.

- Advertisement - 

ಬೆಂಗಳೂರು ಮೊದಲಿನಿಂದಲೂ ಗ್ರೇಟ್ ಇದೆ. ಗ್ರೇಟರ್ ಬೆಂಗಳೂರು ಅವಶ್ಯಕತೆಯೇ ಇಲ್ಲ ! ಅಭಿವೃದ್ಧಿ ನೆಪದಲ್ಲಿ ಕನ್ನಡಿಗರ ಒಕ್ಕಲೆಬ್ಬಿಸುವ ಕುತಂತ್ರವಷ್ಟೇ. ಬೆಂಗಳೂರಿನ ಅಭಿವೃದ್ಧಿಯ ಹಿತಾಸಕ್ತಿಗಿಂತ ಡಿಕೆಶಿಯವರ ರಿಯಲ್‌ಎಸ್ಟೇಟ್‌ಹಿತಾಸಕ್ತಿಯೇ ಅಡಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಗ್ರೇಟರ್‌ಬೆಂಗಳೂರು ಎನ್ನುವುದು ಅಧಿಕಾರದ ವಿಕೇಂದ್ರೀಕರಣವಲ್ಲ. ಕಾಂಗ್ರೆಸ್‌ಸರ್ಕಾರದ ಹೊಡೆದು ಆಳುವ ವಿಲಕ್ಷಣ ರಾಜಕಾರಣ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

 

Share This Article
error: Content is protected !!
";