ಗ್ರೇಟರ್ ಶಿರಾ ನನ್ನ ಕನಸು-ಶಾಸಕ ಟಿ.ಬಿ ಜಯಚಂದ್ರ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಶಿರಾ:
ರಸ್ತೆಗಳು ಜನರು ಮತ್ತು ಸರಕುಗಳನ್ನು ಸಾಗಿಸಲು, ದೂರದ ಪ್ರದೇಶಗಳನ್ನು ಸಂಪರ್ಕಿಸಲು, ಮನೆ-ಮನೆಗೆ ಸೇವೆಯನ್ನು ಒದಗಿಸಲು, ವಿವಿಧ ಸಾರಿಗೆ ವಿಧಾನಗಳನ್ನು ಸಂಪರ್ಕಿಸಲು ಮತ್ತು ಒಟ್ಟಾರೆ ಆರ್ಥಿಕ ಅಭಿವೃದ್ಧಿ, ರಾಷ್ಟ್ರದ ಆರ್ಥಿಕತೆ ಮತ್ತು ದೈನಂದಿನ ಜೀವನಕ್ಕೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲು ಅತ್ಯಗತ್ಯವಾಗಿರುವುದರಿಂದ ರಸ್ತೆಗಳನ್ನು ದೇಶದ ಜೀವನಾಡಿಗಳು ಎಂದು ಕರೆದರೆ ತಪ್ಪಾಗಲಾರದು ಎಂದು ಶಿರಾ ಶಾಸಕ ಟಿ.ಬಿ ಜಯಚಂದ್ರ ಹೇಳಿದರು.

ಈ ನಿಟ್ಟಿನಲ್ಲಿ ವಿಧಾನಸೌಧದಲ್ಲಿ ನಡೆದ ಶಿರಾ ವಿಧಾನಸಭಾ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು.

- Advertisement - 

ನನ್ನ ಕಲ್ಪನೆಯ ಶಿರಾ ನಗರಕ್ಕೆ ಪೂರಕವಾಗಿತ್ತು. ಭವಿಷ್ಯದಲ್ಲಿ ಗ್ರೇಟರ್ ಶಿರಾ ನಗರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಿರಾ ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ವಿಚಾರವಾಗಿ ರಾಷ್ಟ್ರೀಯ ಹೆದ್ದಾರಿಗಳ ಪ್ರಗತಿ ಪರಿಶೀಲನ ಸಭೆ ನಡೆಯಿತು.

ಶಿರಾ ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-48ನ್ನು ಎಮ್ಮೇರಹಳ್ಳಿಯಿಂದ, ದರ್ಗಾ ವೃತ್ತ, ಐಬಿ ವೃತ್ತ, ಕೆಎಸ್ ಆರ್ ಟಿಸಿ ಡಿಪೋವರೆಗೆ ಸರ್ವಿಸ್ ರಸ್ತೆ ಸೇರಿದಂತೆ 4 ಪಥಗಳ ರಸ್ತೆಯನ್ನು 96.37 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದರು.

- Advertisement - 

NH -48 ಶಿರಾ ಬೈಪಾಸ್ ಸರ್ವೀಸ್ ರಸ್ತೆ 3.23 ಕಿಲೋಮೀಟರ್ ರಸ್ತೆಯನ್ನು ನಿರ್ಮಾಣ ಮಾಡುವ ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದರು .

ಹುಳಿಯಾರ್ ಶಿರಾ NH – 234 ರಸ್ತೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಹಾಗೂ ಶಿರಾ-ಬಡವನಹಳ್ಳಿ ನಾಲ್ಕು ಪಥ ರಸ್ತೆ ಅಭಿವೃದ್ಧಿಪಡಿಸಲು ಅಗತ್ಯ ಅನುಮತಿಗಳನ್ನು ಪಡೆಯಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಿಸುವುದಾಗಿ ಇದೆ ವೇಳೆ ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು.

ಶಿರಾ – ಬಡವನಹಳ್ಳಿ ನಾಲ್ಕು ಪಥದ ಮಹತ್ವಾಕಾಂಕ್ಷಿ ರಸ್ತೆ ಯೋಜನೆಯನ್ನು ಸಹ ಬೇಗ ಆರಂಭಿಸಿ ನಿಗದಿಪಡಿಸಿದ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಒದಗಿಸುವಂತೆ ಇದೆ ವೇಳೆ ಜಯಚಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದೆ.

ಈ ಸಭೆಯಲ್ಲಿ ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್ ಎಂ ಆರ್ ರಾಜೇಶ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಜಯಶ್ರೀ ಸಾಹೂ, ವಿಶೇಷ ಭೂಸ್ವಾದೀನ ಅಧಿಕಾರಿ ಧರಣ್ ಪಾಲ್. ಎಸ್, ತುಮಕೂರು ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ನರೇಂದ್ರ. ಎಚ್ ಸಿ., ತಾಂತ್ರಿಕ ಅಧಿಕಾರಿ ರವಿತೇಜ್ ಲಕಿನಾನ್, ಚಿತ್ರದುರ್ಗ ವಿಭಾಗದ ಇಂಜಿನಿಯರ್ ಶಿರೀಶ್ ಗಂಗಾಧರ್, ರಾಷ್ಟ್ರೀಯ ಹೆದ್ದಾರಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಲಕ್ಷ್ಮಿಕಾಂತ್. ಹೆಚ್, ದೆಹಲಿ ವಿಶೇಷ ಪ್ರತಿನಿಧಿಗಳ ಆಪ್ತ ಕಾರ್ಯದರ್ಶಿ ಹೆಚ್.ವಿ ಮಾರುತಿ ಪ್ರಸನ್ನ ಹಾಗೂ ನೀರಾವರಿ ಸಲಹೆಗಾರರಾದ ಈಶ್ವರಯ್ಯ ಅವರು ಸಭೆಯಲ್ಲಿ ಭಾಗವಹಿಸಿದ್ದರು.

Share This Article
error: Content is protected !!
";