ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಅಧ್ವಾನವನ್ನೇ ಸೃಷ್ಟಿಸಿವೆ. ಒಂದೊಂದೇ ಗ್ಯಾರಂಟಿಗಳು ಸ್ತಬ್ದವಾಗುತ್ತಿದ್ದು ಇದೀಗ ಗೃಹಜ್ಯೋತಿ ಉಚಿತ ವಿದ್ಯುತ್‌ವಿತರಣೆ ಗ್ಯಾರಂಟಿಯೂ ಬಂದ್‌ಆಗುವ ಲಕ್ಷಣಗಳು ಎದ್ದು ಕಾಣುತ್ತಿವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭವಿಷ್ಯ ನುಡಿದರು.
ಬೇಸಿಗೆ ಆರಂಭವಾಗುತ್ತಿದ್ದಂತೆ ವಿದ್ಯುತ್‌ಅಭಾವವನ್ನು ಕರ್ನಾಟಕ ವಿದ್ಯುತ್‌ಪ್ರಸರಣ ನಿಗಮ ಒಪ್ಪಿಕೊಂಡಿದ್ದು, ಬೇಡಿಕೆ ಹೆಚ್ಚಾಗಿದ್ದರೂ ವಿದ್ಯುತ್‌ಪೂರೈಸುವುದು ಸವಾಲಾಗಿ ಪರಿಣಮಿಸಿದೆ ಎಂದು ಅವರು ತಿಳಿಸಿದ್ದಾರೆ.
ಮುಂದೆ ಅನಿಯಮಿತ ಲೋಡ್‌ಶೆಡ್ಡಿಂಗ್‌ರಾಜ್ಯವನ್ನು ಕಾಡಲಿದ್ದು, ನಂತರದಲ್ಲಿ ಗೃಹಜ್ಯೋತಿ ಯೋಜನೆಯೇ ಬಂದ್‌ಆಗಲಿದೆ. ಒಟ್ಟಾರೆಯಾಗಿ ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದಾಗಿ ಕರ್ನಾಟಕ ದಿವಾಳಿಯಾಗುತ್ತಿದೆ ಎಂದು ತಿಳಿಸಿದರು.