ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಅಂದರೆ ಸುಳ್ಳು! ಸುಳ್ಳು ಅಂದರೆ ಕಾಂಗ್ರೆಸ್! ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆಕ್ರೋಶ ಹೊರ ಹಾಕಿದೆ.
ಗ್ಯಾರಂಟಿ ಹೆಸರಲ್ಲಿ ರಾಜ್ಯವನ್ನು ದಿವಾಳಿ ಮಾಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ!. ಮೂರು ತಿಂಗಳಿಂದ ಗೃಹಲಕ್ಷ್ಮಿ ಹಣವನ್ನು ರಾಜ್ಯದ ಮಹಿಳೆಯರಿಗೆ ಕೊಟ್ಟೇ ಇಲ್ಲ ಆರೋಪಿಸಿದೆ.
ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಫುಲ್‌ಸ್ಟಾಪ್‌ಇಟ್ಟಿದ್ದು, ಆಡಳಿತ ನಡೆಸಲು ಹಣವಿಲ್ಲದೆ ಬೆಲೆ ಹೆಚ್ಚಳ ಮಾಡಿ ಜನರನ್ನು ಸುಲಿಗೆ ಮಾಡುತ್ತಿದೆ. ಸಿದ್ದರಾಮಯ್ಯ ಗ್ಯಾರಂಟಿ ನಂಬಿ ಮತಹಾಕಿದ ಪದವೀಧರರಿಗೆ ಮೋಸ ಮಾಡಿದ ಕರ್ನಾಟಕ ಕಾಂಗ್ರೆಸ್ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ರಾಜ್ಯದಲ್ಲಿ ಸಾವಿರಾರು ಪದವೀಧರ ನಿರುದ್ಯೋಗಿಗಳಿಗೆ (3,000 ರೂ.) ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ (1,500 ರೂ.) ನಿರುದ್ಯೋಗ ಭತ್ಯೆ ವರ್ಷವಾದರೂ ಸಿಕ್ಕಿಲ್ಲ.
ಸಿದ್ದರಾಮಯ್ಯ ಸರ್ಕಾರದ ಯುವನಿಧಿ ಕಣ್ಮರೆಯಾಗಿದ್ದು, ನಿರುದ್ಯೋಗ ಭತ್ಯೆಗಾಗಿ ಯುವಕರು ಅರ್ಜಿ ಹಾಕಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.