ಸಾವಯವ ಪದ್ಧತಿ ಅನುಸರಿಸಿ ತೋಟಗಾರಿಕೆ ಬೆಳೆ ಬೆಳೆಯಿರಿ- ಡಾ.ಬಿ. ಜಿ. ಹನುಮಂತರಾಯಪ್ಪ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೊಬಳಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ
,ದಿಂದ ಹಿಪ್ಪು ನೇರಳೆಯಲ್ಲಿ ಕೀಟಗಳ ನಿರ್ವಹಣೆಗೆ ಪರಿಸರ ಸ್ನೇಹಿ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮವನ್ನು , ರೇಷ್ಮೆ ಸಹಾಯಕ ನಿರ್ದೇಶಕರು, ಹೊಸಕೋಟೆ ಹಾಗೂ ರೇಷ್ಮೆ ಉಪ ನಿರ್ದೇಶಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ  ದೊಡ್ಡ ಅರಳಗೆರೆ ಗ್ರಾಮ, ಹೊಸಕೋಟೆ ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲಾಗಿತ್ತು. 

 ಹಿರಿಯ ವಿಜ್ಞಾನಿ ಹಾಗೂ ತರಬೇತಿ ಕಾರ್ಯಕ್ರಮದ  ಮುಖ್ಯಸ್ಥ  ಡಾ.ಬಿ ಜಿ  ಹನುಮಂತರಾಯಪ್ಪ ಮಾತನಾಡಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿ ಕೊಳ್ಳುವಲಾಗಿರುವ ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳ ವಿವರಗಳನ್ನು ತಿಳಿಸಿ, ಹಿಪ್ಪುನೇರಳೆ ಬೇಸಾಯ ಮಾಡುವ ಸುತ್ತಮುತ್ತಲಿನ ಪ್ರದೇಶ ಗಲ್ಲಿ ಬೆಳೆಯುವ ತೋಟಗಾರಿಕೆ ಬೆಳೆಗಳಿಗೆ ಸಾವಯವ ಪದ್ದತಿಯನ್ನು ಅನುಸರಿಸಿ, ಆದಷ್ಟು ಕಡಿಮೆ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸಬೇಕೆಂದು ತಿಳಿಸಿದರು. 

- Advertisement - 

 ಸತೀಶ್, ಸಿ.ಎಲ್., ರೇಷ್ಮೆ ಸಹಾಯಕ ನಿರ್ದೇಶಕರು, ಹೊಸಕೋಟೆ ಇವರು ರೇಷ್ಮೆ ಇಲಾಖೆಯಲ್ಲಿನ ವಿವಿಧ ಯೋಜನೆಗಳಡಿಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ವಿವರ ನೀಡುತ್ತಾ, ದೊಡ್ಡ ಅರಳಗೆರೆ ಗ್ರಾಮದ ರೈತ ಅಭಿಷೇಕ್ ರವರಿಗೆ ನೀಡಲಾಗಿರುವ ರೇಷ್ಮೆ ಕಡ್ಡಿ ಪುಡಿ ಮಾಡುವ ಯಂತ್ರವನ್ನು ಎಲ್ಲಾ ರೇಷ್ಮೆ ಬೆಳೆಗಾರರು ಸಮರ್ಪಕವಾಗಿ ಬಳಸಿಕೊಂಡು ಗೊಬ್ಬರವನ್ನು ಉತ್ಪಾದಿಸುವಂತೆ ಕರೆ ನೀಡಿದರು. 

ಜಗದೀಶ್, ಹಿರಿಯ ತಾಂತ್ರಿಕ ಅಧಿಕಾರಿ ಮಾತನಾಡುತ್ತಾ ಸಾಲಿನಿಂದ ಸಾಲಿಗೆ 8 ಅಡಿ ಮತ್ತು ಗಿಡದಿಂದ ಗಿಡಕ್ಕೆ 2 ಅಡಿ ಜೋಡಿ ಸಾಲು ಪದ್ಧತಿಯಲ್ಲಿ ನಾಟಿ ಮಾಡುವುದರಿಂದ ಗುಣಮಟ್ಟದ ಸೊಪ್ಪನ್ನು ಉತ್ಪಾದಿಸುವುದರ ಜೊತೆಗೆ ಗುಣ ಮಟ್ಟದ ರೇಷ್ಮೆ ಗೂಡಿನ ಇಳುವರಿಯನ್ನು ಪಡೆಯಬಹುದು ಎಂದು ತಿಳಿಸಿದರು. ಡಾ. ವೀರ ನಾಗಪ್ಪ, ಪಿ., ಮಣ್ಣು ವಿಜ್ಞಾನಿ ಮಾತನಾಡುತ್ತಾ ರೈತರು ಮಣ್ಣು ಪರೀಕ್ಷೆ ಮಾಡಿಸಿ, ಹಿಪ್ಪುನೇರಳೆ ಬೆಳೆಯ ಶಿಫಾರಿತ 350-140-140  ಸಾ:ರಂ:ಪೊ ಕಿ.ಗ್ರಾಂ/ಹೆ. 5 ಸಮ ಕಂತುಗಳಲ್ಲಿ ನೀಡಬೇಕು ಎಂದು ಮಾಹಿತಿ ನೀಡಿದರು.

- Advertisement - 

 ಡಾ. ಈಶ್ವರಪ್ಪ ಜಿ., ವಿಜ್ಞಾನಿ (ಜೇನು ಕೃಷಿ) ಇವರು ಮಾತನಾಡಿ, ಟ್ರೆಂ ಕೋಡರ್ಮಾದಿಂದ ಪುಷ್ಠಿಕರಿಸಿದ ಕೊಟ್ಟಿಗೆ ಮತ್ತು ಬೇವಿನ ಹಿಂಡಿ ಬಳಕೆಯ ಮಹತ್ವವನ್ನು ವಿವರಿಸಿದರು. ಮುಂದುವರೆದು, ಸವರಿಕೆಯಾದ 25 ದಿನಗಳ ನಂತರ ಪೋಷಣ್ (7 ಮಿ.ಲೀ./ಲೀ.) ಸಿಂಪರಣೆ ಮಾಡುವುದರಿಂದ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪನ್ನು ಪಡೆಯಬಹುದು. ರಸ ಹೀರುವ

 ಕೀಟಗಳ ಹತೋಟಿಗೆ ಒಂದು ಲೀಟ‌ರ್ ನೀರಿಗೆ ೩ ಗ್ರಾಂ. ಸಲ್ಪರ್ ಬೆರೆಸಿ ಸವರಿಕೆಯಾದ 15-20 ದಿನಗಳ ನಂತರ ಸಿಂಪರಣೆ ಮಾಡಬೇಕು ಎಂದು ತಿಳಿಸಿದರು.

ಸಿ. ಎಮ್. ಲಕ್ಷಂಣ್ಣ, ರೇಷ್ಮೆ ಉಪ ನಿರ್ದೇಶಕರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಇಟ್ಟಸಂದ್ರ, ದೊಡ್ಡ ಅರಳಗೆರೆ, ಬಾಗಲೂರು, ದಳಸಗೆರೆ ಗ್ರಾಮಗಳ ಹಿಪ್ಪುನೇರಳೆ ತಾಕುಗಳಿಗೆ ಭೇಟಿ ನೀಡಿ, ರಸ ಹೀರುವ ಕೀಟಗಳ ಬಾಧೆ ಮತ್ತು ಹತೋಟಿ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿಯನ್ನು ಹಂಚಿಕೊಂಡರು. 

ಲಕ್ಷ್ಮಣ್ಣರವರು ವಿವಿಧ ಗ್ರಾಮಗಳ ರೇಷ್ಮೆ ಬೆಳೆಗಾರರನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿ ದಾಳಿಂಬೆ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಈ ಬೆಳೆಗೆ ಸಿಂಪರಿಸುವ ರಾಸಾಯನಿಕ ಔಷಧಿಗಳು ಹಿಪ್ಪುನೇರಳೆ ಬೆಳೆಗೆ ತಾಕಿ, ಈ ಸೊಪ್ಪನ್ನು ತಿಂದ ರೇಷ್ಮೆ ಹುಳುಗಳು ಚಾಕಿ ಮತ್ತು ಬೆಳೆವಣಿಗೆ ಹಂತದಲ್ಲಿ ಸಾವನ್ನಪ್ಪುತ್ತಿರುವುದರಿಂದ ಬೆಳೆಗಾರರಿಗೆ ಆಗುವ ನಷ್ಟದ ಬಗ್ಗೆ ವಿವರಿಸಿ,

ದಾಳಿಂಬೆ ಬೆಳೆಗಾರರು ರಾಸಾಯನಿಕಗಳ ಸಿಂಪರಣೆ ವೇಳೆಯಲ್ಲಿ ರೇಷ್ಮೆ ಬೆಳೆಗಾರರಿಗೆ ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡು ಎರಡೂ ಬೆಳೆಗಳನ್ನು ನಷ್ಟವಾಗದ ರೀತಿಯಲ್ಲಿ ಬೆಳೆಯಬೇಕೆಂದು ರೈತರಿಗೆ ಕರೆ ನೀಡಿದರು. ಚಾಕಿ ಕೇಂದ್ರಗಳಿಗೆ ಭೇಟಿ ನೀಡಿ,

ಮೂರನೇ ಹಂತದ ಹುಳುಗಳನ್ನು ರೈತರಿಗೆ ಸರಬರಾಜು ಮಾಡುವಂತೆ ನಿರ್ದೇಶನ ನೀಡಲಾಗಿದ್ದು, ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಗುಣಮಟ್ಟದ ರೇಷ್ಮೆ ಗೂಡನ್ನು ಉತ್ಪಾದಿಸಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ 6೦ ಜನ ರೈತರು ಭಾಗವಹಿಸಿ, ಮಾಹಿತಿ ಪಡೆದುಕೊಂಡರು.

 

Share This Article
error: Content is protected !!
";