ಗಿಡ ಮರ ಬೆಳೆಸುವುದರಿಂದ ಉತ್ತಮ ಪರಿಸರ ಸಾಧ್ಯ-ಶೈಲಜಾ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮದಲ್ಲಿ ಶೇಷಾದ್ರಿಪುರಂ ಪ್ರೌಢಶಾಲೆ ಹಾಗು ಎನ್ ಸಿ ಸಿ ಹಾಗು ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಸಹ ಯೋಗದೂಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಅಚರಣೆ ಮಾಡಲಾಯಿತು.

- Advertisement - 

 ನಂತರ ಶೇಷಾದ್ರಿಪುರಂ ಪ್ರೌಢಶಾಲೆ ಪ್ರಾಂಶುಪಾಲ ರಾದ ಶೈಲಜಾ ರವರು ಮಾತನಾಡಿ ನಮ್ಮ ಸುತ್ತಮುತ್ತಲಿನ ವಾತಾವರಣ ಗಿಡ ಮರ ಗಾಳಿ ನೀರು ಮಣ್ಣು ಇವುಗಳನ್ನು ಪರಿಸರ ಎನ್ನುತ್ತೆ ವೆ ಅದರೆ ಇಂತಹ ಪರಿಸರ ನಗರ ಮತ್ತು ಪಟ್ಟಣಗಳಲ್ಲಿ ಸಿಗುವುದಿಲ್ಲ  ಅದರಿಂದ ನಗರಗಳಲ್ಲಿ ವಾಸ ಮಾಡು  ಜನ ಹಳ್ಳಿಗಳ ಜಮೀನು ಖರೀದಿಸಿ ಉತ್ತಮವಾದ ಗಾಳಿ ಬೆಳಕು ಹಾಗು ವಾತವರಣ ದಲ್ಲಿ ವಾಸ ಮಾಡಲು ಇಚ್ಚಿಸುತ್ತಾರೆ.

- Advertisement - 

 ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿ ಯಾಗಿಟ್ಟು ಕೊಂಡು ಪರಿಸರ ಗಿಡ- ಮರಗಳನ್ನು ಬೆಳೆಸಿ ಉತ್ತಮ ರೀತಿಯ ವಾತವರಣ ದಿಂದ  ಕಾಲಕ್ಕೆ ತಕ್ಕಂತೆ ಮಳೆ ಬಂದು ಭೂಮಿ ತಂಪಾಗಿರುತ್ತದೆ ಎಂದರು. 

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ. ನಾಗರಾಜ ಮಾತನಾಡಿ ವಿಶ್ವ ಪರಿಸರದ ದಿನವಾದರೂ ನಿಮ್ಮ ವಾಹನವನ್ನು ಪಕ್ಕಕ್ಕೆ ಇಟ್ಟು ಎಲ್ಲಿಗಾದರು ಹೋಗಬೇಕಾದರೆ ನಡೆದುಕೊಂಡು ಹೋಗಿ ಪರಿಸರ ಮಾಲಿನ್ಯ   ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡಬಹುದು ಅದಕ್ಕಾಗಿಯೇ ಊರಿಗೊಂದು ವನ (ಗುಂಡುತೋಪು) ದಲ್ಲಿ ಗಿಡಗಳನ್ನು ನೆಟ್ಟು ವಾತವರಣ ವನ್ನು ಹತೋಟಿ ಯಲ್ಲಿ ಇಟ್ಟು ಕೊಳ್ಳುತ್ತಿದ್ದರು.

- Advertisement - 

ಎನ್ಎಸ್ಎಸ್ ಶಿಬಿರಗಳನ್ನು ಆಯೋಜನೆ ಮಾಡಿ  ವಿದ್ಯಾರ್ಥಿಗಳಿಂದ ಊರಿನ ಸ್ವಚ್ಚತೆ ಮಾಡುವುದರ ಮುಖಾಂತರ  ನಮ್ಮೂರಿನ ಜನತೆಗೆ ಅರಿವು ಮೂಡಿಸಿದ್ದಾರೆ ಹಾಗು ಶಾಲೆ ಮತ್ತು ಕಾಲೇಜುಗಳಿಂದ ಸ್ಕೌಟ್ ಗೈಡ್ ಹಾಗೂ ಎನ್ ಸಿಸಿ ಗಳಿಂದ ದೇಶದ ಅಭಿಮಾನ  ರಕ್ಷಣೆಯ ಬಗ್ಗೆ ಅರಿವು ಮೂಡಿಸುವುದು. ಎನ್ ಸಿ ಸಿ  ತರಬೇತಿಗಳಿಂದ ವಿದ್ಯಾರ್ಥಿಗಳು ಮಿಲಿಟರಿಗೆ ಸೇರಲು ಅವಕಾಶ ಸಿಗುತ್ತದೆ ಎಂದರು.

ಹಾಡೋನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾರಾಯಣಪ್ಪ ಮಾತನಾಡಿ ಪರಿಸರ ರಕ್ಷಣೆಗಾಗಿ 1972ರಲ್ಲಿ ವಿಶ್ವ ಪರಿಸರ ದಿನವನ್ನಾಗಿ  ಅಮೆರಿಕದ ಜನರಲ್ ಅಸೆಂಬ್ಲಿಯಲ್ಲಿ ಆಚರಣೆ ಮಾಡಲಾಯಿತು ಎಂದರು.

ಈ ಸಂದರ್ಭದಲ್ಲಿ ಶೇಷಾದ್ರಿಪುರಂ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಪರಿಸರದ ಅರಿವಿನ ಬಗ್ಗೆ, ಕಾಡು ಉಳಿದರೆ ನಾಡು ಉಳಿದಿತ್ತು ಎಂಬ ಬೀದಿ ನಾಟಕದ ಮುಖಾಂತರ ಅರಿವು ಮೂಡಿಸಿದರು. 

 ಎಂಪಿಸಿಎಸ್ ನಿರ್ದೇಶಕ ಎಸ್ ಪಿಳ್ಳಪ್ಪ, ಎಂ ಮುನಿರಾಜ, ಊರಿನ ಮುಖಂಡ  ರಾಜಣ್ಣ, ಚಂದ್ರಹಾಸ, ಪ್ರಗತಿಪರ ರೈತ ಮುಕುಂದ, ರೈಲ್ವೆ ಸುಬ್ರಮಣ್ಯ, ಶೇಷಾದ್ರಿಪುರಂ ಶಿಕ್ಷಕರಾದ ಲಕ್ಷ್ಮಣ ರೆಡ್ಡಿ, ಮಂಜುನಾಥ, ದೈಹಿಕ ಶಿಕ್ಷರು ಶಾಲಾ ಸಿಬ್ಬಂದಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಪರಿಸರವು ಅನೇಕ ವಸ್ತುಗಳ ಸಂಯೋಜನೆಯಾಗಿದೆ. ಪರಿಸರವನ್ನು ಸೃಷ್ಟಿಸುವುದು ಕೇವಲ ಸಸ್ಯಗಳಲ್ಲ. ನೀರು, ಮಣ್ಣು, ಗಾಳಿ, ಹೂವುಗಳು, ಹಣ್ಣುಗಳು, ಪಕ್ಷಿಗಳು ಎಲ್ಲವೂ ನಮ್ಮ ಪ್ರಕೃತಿಯ ಭಾಗವಾಗಿದೆ. ಈ ಪ್ರತಿಯೊಂದು ವಸ್ತುವು ಪರಿಸರವನ್ನು ಸೃಷ್ಟಿಸುತ್ತದೆ. ಮನುಷ್ಯರು ಸೇರಿದಂತೆ ಪ್ರತಿಯೊಂದು ಪ್ರಾಣಿ ಕೂಡ ಪರಿಸರದ ಭಾಗವಾಗಿದೆ. ಪ್ರಕೃತಿ ಇಲ್ಲದಿದ್ದರೆ ಪ್ರಾಣಿ ಸಂಕುಲ ನಾಶವಾಗುತ್ತದೆ. ಮುಖ್ಯ ಕಾರಣವೆಂದರೆ ಪ್ರತಿಯೊಂದು ಪ್ರಾಣಿಯು ತನ್ನ ಆವಾಸಸ್ಥಾನವನ್ನು ಕಳೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ಬದುಕಲು ಬೇಕಾದ ಆಹಾರವೂ ಸಿಗುವುದಿಲ್ಲ.
ಮುನೇಗೌಡ ಮಾಜಿ ಅಧ್ಯಕ್ಷ, ವ್ಯವಸಾಯ ಸೇವಾ ಸಹಕಾರ ಸಂಘ.

 

Share This Article
error: Content is protected !!
";