ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತುಮಕೂರು ಲೋಕಸಭಾ ಕ್ಷೇತ್ರದ ತಿಪಟೂರು ನಗರದ ದೊಡ್ಡಪೇಟೆ ಮಾರ್ಕೆಟ್‌ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಅವರು ʼGST ಉಳಿತಾಯ ಉತ್ಸವ ಮತ್ತು ಸ್ವದೇಶಿ ಕ್ಯಾಂಪೇನ್ʼ ನಡೆಸಿದರು.
ವಿವಿಧ ಅಂಗಡಿಗಳು, ಮಳಿಗೆಗಳಿಗೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಯವರು ಕೈಗೊಂಡ ಜಿಎಸ್‌ಟಿ ಸರಳೀಕರಣದ ಅಭೂತಪೂರ್ವ ಕಾರ್ಯದ ಬಗ್ಗೆ ತಿಳಿಸಿದರು.
ಹಾಗೆಯೇ, ಸ್ವದೇಶಿ ಉತ್ಪನ್ನಗಳ ಬಳಕೆ ಹಾಗೂ ಮಾರಾಟದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ, ಯೋಗಶ್ರೀ ಮೆಟಲ್ ಅಂಗಡಿಯ ಮಾಲೀಕ ಸಂಪತ್ ಕೃಷ್ಣ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು GST ಯಲ್ಲಿ ತೆಗೆದುಕೊಂಡ ಸುಧಾರಣಾ ಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಅಲ್ಲದೇ 100ಕ್ಕೆ ನೂರು ಪ್ರತಿಶತ GST ಬಿಲ್ ವಿತರಿಸಿ ವ್ಯಾಪಾರ ವಿನಿಮಯ ಮಾಡುವುದಾಗಿ ಘೋಷಿಸುತ್ತಾ, ಮೋದಿಜಿಯವರ ದಿಟ್ಟ ನಿರ್ಧಾರಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.

