ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ನಾಗರೀಕ ದೇವೋಭವ ಎಂಬ ಅದ್ಭುತ ಘೋಷಣೆಯೊಂದಿಗೆ GST ದರವನ್ನು ಇಂದಿನಿಂದ ಕಡಿತಗೊಳಿಸುವ ಕ್ರಾಂತಿಕಾರಕ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಸಾರ್ವಜನಿಕ ಬಂಧುಗಳಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.
ಇಂದಿನಿಂದ ಆರಂಭವಾಗಿರುವ ನವರಾತ್ರಿ ಉತ್ಸವದೊಂದಿಗೆ ಪ್ರಧಾನಿಗಳು ಘೋಷಿಸಿದ GST ಉಳಿತಾಯ ಉತ್ಸವದ ಘೋಷಣೆ ದೇಶದ ಮೂಲೆ ಮೂಲೆಗಳಲ್ಲೂ ಮೊಳಗುತ್ತಿದೆ. ನಾಗರೀಕ ಬಂಧುಗಳೆಲ್ಲರೂ ಉತ್ಸವದಲ್ಲಿ ಪಾಲ್ಗೊಂಡು GST ದರ ಇಳಿಕೆಯಾಗಿರುವ ಕುರಿತು ನೆರೆಹೊರೆಯವರೊಂದಿಗೆ ಮಾಹಿತಿ ಹಂಚಿಕೊಂಡು ಸುಲಲಿತ ಜೀವನ ನಡೆಸುವ ಮೂಲಕ ಸ್ವದೇಶಿ ಉತ್ಪನ್ನಗಳನ್ನು ಬಳಸಿ, ಬೆಂಬಲಿಸುವ ಸಂಕಲ್ಪ ಮಾಡಬೇಕೆಂಬ ವಿಜಯೇಂದ್ರ ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಜಗದೀಶ್ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

