ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಟೈಮ್ ವೇಸ್ಟ್ ಮಾಡಬೇಡಿ ಕರ್ನಾಟಕ ಕಾಂಗ್ರೆಸ್ ಶಾಸಕರೇ ಮತ್ತು ಕಾರ್ಯಕರ್ತರೇ, ಸ್ವಪಕ್ಷದ ಶಾಸಕರುಗಳಿಗೇ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಇಲ್ಲವಾಗಿದೆ. ಮೂಡಿಗೆರೆ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರ ಮಾತುಗಳೇ ಸಾಕ್ಷಿ ಎಂದು ಜೆಡಿಎಸ್ ತಿಳಿಸಿದೆ.
ಕಮಿಷನ್ ಮುಕ್ತ ಕರ್ನಾಟಕ, ಭಯ ಮುಕ್ತ ಕರ್ನಾಟಕ, ಸಶಕ್ತ-ಸಮೃದ್ಧ ಕರ್ನಾಟಕ ನಿರ್ಮಿಸಲು ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.
ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ 2028ರ ಚುನಾವಣೆ ಮುನ್ನುಡಿ ಬರೆಯುವುದು ಗ್ಯಾರಂಟಿ. ಸಮಯ ವ್ಯರ್ಥಮಾಡಬೇಡಿ ಕಾಂಗ್ರೆಸ್ ಶಾಸಕರು ಹಾಗೂ ಕಾರ್ಯಕರ್ತರೇ ಈಗಲೇ ಎಚ್ಚೆತ್ತು NDA ಮೈತ್ರಿಕೂಟದ ಜೊತೆ ಕೈ ಜೋಡಿಸಿ ಎಂದು ಜೆಡಿಎಸ್ ಕರೆ ನೀಡಿದೆ.

