ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮತ್ತು ಆರ್.ಡಿ. ಚೈತ್ರ ಅವರ ಪುತ್ರಿ ಸರಸ್ವತಿ ಕೆ.ಸಿ. ವೀರೇಂದ್ರ ಪಪ್ಪಿ ಅವರು ತಮ್ಮ ಶ್ರಮ, ಶಿಸ್ತು, ದೈಹಿಕ ಸಾಮರ್ಥ್ಯ ಹಾಗೂ ದೃಢ ನಂಬಿಕೆಯಿಂದ ವಿಶ್ವದ ಗಮನ ಸೆಳೆದಿದ್ದಾರೆ.
ಸರಸ್ವತಿ ಅವರು ಇತ್ತೀಚೆಗೆ Reverse Abdominal Plank Position ವಿಭಾಗದಲ್ಲಿ 100 ಪೌಂಡ್ (ಸುಮಾರು 45 ಕಿಲೊಗ್ರಾಂ) ತೂಕದ ಬ್ಯಾಗ್ ಹೊತ್ತು 2 ನಿಮಿಷ 12 ಸೆಕೆಂಡುಗಳ ಕಾಲ ಸ್ಥಿರವಾಗಿ ಉಳಿದು, “The Longest Time in a Reverse Abdominal Plank Position Carrying a 100 lb Pack” ವಿಭಾಗದಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದಾರೆ.
ಈ ಅಪೂರ್ವ ಸಾಧನೆ ಜೂನ್ 21, 2025 ರಂದು ಚಿತ್ರದುರ್ಗದಲ್ಲೇ ದಾಖಲಾಗಿದ್ದು, Guinness World Records ಸಂಸ್ಥೆಯು ಅಧಿಕೃತ ಪ್ರಮಾಣಪತ್ರ ನೀಡಿ ಸರಸ್ವತಿಯನ್ನು ವಿಶ್ವದಾಖಲೆಯ ಧ್ವಜದಾರೆಯನ್ನಾಗಿ ಘೋಷಿಸಿದೆ.
ಹಿಂದಿನ ಸಾಧನೆ: ಈ ಹಿಂದೆ ಸರಸ್ವತಿ ಅವರು “Longest Sit in the Wall Position on Toe” ವಿಭಾಗದಲ್ಲಿ 2 ಗಂಟೆ 36 ಸೆಕೆಂಡುಗಳ ಕಾಲ ಸ್ಥಿರವಾಗಿ ಉಳಿದು, ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ತಮ್ಮ ಹೆಸರು ದಾಖಲಿಸಿದ್ದರು. ಆ ಸಂದರ್ಭದಲ್ಲೇ ಸರಸ್ವತಿ ಆತ್ಮವಿಶ್ವಾಸದಿಂದ ಹೇಳಿದ್ದಾರೆ. “ಮುಂದಿನ ಬಾರಿ ನನ್ನ ಹೆಸರು ‘Guinness World Record’ ಪುಸ್ತಕದಲ್ಲೂ ಕಾಣಿಸುವೆ. ಇಂದು ಆ ಮಾತು ನಿಜವಾಗಿದ್ದು, ಅವರು ಭಾರತ ಮತ್ತು ಕರ್ನಾಟಕದ ಹೆಮ್ಮೆಯ ಪುತ್ರಿಯಾಗಿದ್ದಾರೆ.
ಅಭ್ಯಾಸ ಮತ್ತು ತರಬೇತಿ: ಸರಸ್ವತಿ ಪ್ರಸ್ತುತ ಬೆಂಗಳೂರು ನಗರದ ಜೈನ್ ಇಂಟರ್ ನ್ಯಾಷನಲ್ ರೆಸೆಡೆನ್ಸಿಯಲ್ ಸ್ಕೂಲ್‍ನಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ತರಬೇತಿದಾರರು ತುಷಾರ್ ಸೋನಾಲಿಕರ್ ಅವರ ಮಾರ್ಗದರ್ಶನದಲ್ಲಿ ಸರಸ್ವತಿ ತಮ್ಮ ದೈಹಿಕ ಸಾಮರ್ಥ್ಯವನ್ನು ವಿಶ್ವ ಮಟ್ಟಕ್ಕೆ ಬೆಳೆಸಿಕೊಂಡಿದ್ದಾರೆ.
ಪ್ರೇರಣೆಯ ಬೆಳಕು: ಸರಸ್ವತಿ ವೀರೇಂದ್ರ ಪಪ್ಪಿಯವರ ಈ ಸಾಧನೆ ಕೇವಲ ದಾಖಲೆ ಮಾತ್ರವಲ್ಲ, ಅದು ಭಾರತದ ಯುವ ಶಕ್ತಿಯ ಪ್ರತೀಕ. ಕಠಿಣ ಪರಿಶ್ರಮ, ಅಚಲ ನಂಬಿಕೆ ಮತ್ತು ನಿರಂತರ ಅಭ್ಯಾಸದ ಮೂಲಕ “ನಾನು ಮಾಡಬಲ್ಲೆ!” ಎಂಬ ಮನೋಭಾವದಿಂದ ಅವರು ಸಾಧಿಸಿರುವುದು ಸಾವಿರಾರು ಯುವ ಜನತೆಗೆ ಪ್ರೇರಣೆಯಾಗುತ್ತದೆ.
ಸರಸ್ವತಿ ಅವರಂತಹ ಪ್ರತಿಭಾವಂತ ಯುವತಿಯರು ನಮ್ಮ ದೇಶದ ಹೆಜ್ಜೆ ಗುರುತು ವಿಶ್ವ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಅವರ ಸಾಧನೆ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದೆ, ಚಿತ್ರದುರ್ಗದ ಮಣ್ಣಿಗೆ ಹೊಸ ಮೆರುಗು ನೀಡಿದೆ.
“ಸರಸ್ವತಿ ವೀರೇಂದ್ರ ಪಪ್ಪಿ ಚಿತ್ರದುರ್ಗದ ಕೀರ್ತಿ, ಕರ್ನಾಟಕದ ಗೌರವ, ಭಾರತದ ಪ್ರೇರಣೆ. ಈ ಸಾಧನೆಗೆ ತಂದೆ ವೀರೇಂದ್ರ ಪಪ್ಪಿ ತಾಯಿ ಚೈತ್ರ ಆರ್.ಡಿ., ತರಬೇತಿದಾರರು ತುಷಾರ್ ಸೋನಾಲಿಕರ್, ಗುರುಗಳು ಹಾಗೂ ಚಿತ್ರದುರ್ಗದ ಜನತೆಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

