ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಕಂಟನಕುಂಟೆ ಬಿಂದು ಪ್ರೌಢ ಶಾಲೆಯಲ್ಲಿ 1999-2000 ನೇ ಸಾಲಿನ ಎಸ್ ಎಸ್ ಎಲ್ ಸಿ ವ್ಯಾಸಾಂಗ ಮಾಡುತ್ತಿದ್ದ ಗೆಳೆಯರ ಬಳಗ ತಮ್ಮ 25 ನೇ ವರ್ಷದ ಸಂದರ್ಭದಲ್ಲಿ ಬಿಂದು ಶಾಲೆಯ ಗೆಳೆಯರು 1999-2000 ಎಸ್.ಎಸ್.ಎಲ್.ಸಿ ಬ್ಯಾಚ್ ಅನ್ನುವ ಗ್ರೂಪ್ ರಚಿಸಿ ಇದೇ ಆ. 25 ರಂದು ಶನಿವಾರ ಗುರುವಂದನಾ ಕಾರ್ಯಕ್ರಮ ಆಯೋಜಿಸಿ ಲಾಗಿತ್ತು.
ಈ ಗುರುವಂದನಾ ಕಾರ್ಯಕ್ರಮದಲ್ಲಿ ಪ್ರೀತಿಯ ಗುರುಗಳಾದ ಸಿ. ಎನ್ ಅನಂತರಾಜಯ್ಯ , ಹೆಚ್ .ವಿ. ರಾಜಣ್ಣ ಕೆ. ಆರ್. ಶರ್ವಾಣಿ ಮೇಡಂ, ಕೆ.ಜಿ.ಹೊನ್ನಸಿದ್ದಪ್ಪ. ಎಂ. ಎಸ್. ಸಿದ್ದಯ್ಯ ಸರ್, ಎನ್. ನಜೀರ್ ಅಹಮದ್ ಸರ್, ಕೆ. ನಾರಾಯಣ , ಎಂ. ನರಸಿಂಹಮೂರ್ತಿ ಹಾಗೂ ಹೆಚ್ ಎಂ. ಶಿವಪ್ಪ. ಈಗಿನ ಬಿಂದು ಶಾಲೆಯ ಎಲ್ಲಾ ಗುರುಗಳು ಭಾಗವಹಿಸಿ ತಮ್ಮ ಶಿಷ್ಯರ ಉದ್ದೇಶಿಸಿ ಮಾತನಾಡಿ
ಹಾಗೆಯೇ ಗುರುವಂದನಾ ಕಾರ್ಯಕ್ರಮದ ಆಯೋಜಕರು ಸರ್ಕಾರಿ ಶಾಲೆಗಳಲ್ಲೇ ಮುಂದಿನ ದಿನಗಳಲ್ಲಿ ಗುರುವಂದನಾ ಕಾರ್ಯಕ್ರಮ ಮಾಡುವುದರ ಮೂಲಕ ಸರ್ಕಾರಿ ಶಾಲೆಗಳ ಏಳಿಗೆಗೆ ಮತ್ತು ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ದಾಖಲಾತಿ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗಾಗಿ ಸರ್ಕಾರಿ ಶಾಲೆಗಳ ಜೊತೆಗೆ ನಿಲ್ಲಬೇಕೆಂದು ಮನವಿ ಮಾಡಿಕೊಂಡರು.
ಹಾಗು ಶಿಷ್ಯರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕಂಟನಕುಂಟೆ ಬಿಂದು ಪ್ರೌಢ ಶಾಲೆಯಲ್ಲಿ 1999-2000 ನೇ ಸಾಲಿನ ಎಸ್ ಎಸ್ ಎಲ್ ಸಿ ವ್ಯಾಸಾಂಗ ಮಾಡುತ್ತಿದ್ದ ಗೆಳೆಯರ ಬಳಗ ಹಾಗು ಬಿಂದು ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗ ಹಾಜರಿದ್ದರು.

