ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಹುಳಿಯಾರು ರಸ್ತೆಯ ಸಾಯಿ ಅನ್ನಪೂರ್ಣ ಸಭಾಂಗಣದಲ್ಲಿ 1998-99ರಲ್ಲಿ ಶ್ರೀ ವಾಗ್ದೇವಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಳೇಯ ವಿಧ್ಯಾರ್ಥಿಗಳು ಶಿಕ್ಷಕರಿಗೆ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ನಿವೃತ್ತ ಶಿಕ್ಷಕರು, ಹಾಲಿ ಶಿಕ್ಷಕರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಿಕ್ಷಕಿ ವೈ.ಯಶೋಧಮ್ಮ ಮಾತನಾಡಿ ಗುರುಗಳನ್ನು ಗೌರವಿಸುವುದು ಸೇವೆ ಮಾಡುವುದು ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನಿಂದಲು ನಡೆದು ಬಂದ ಪದ್ದತಿಯಾಗಿದೆ. ಇಂತಹ ಉತ್ತಮವಾದ ಕಾರ್ಯ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದು ಅವರು ತಿಳಿಸಿದರು.
ಶಿಕ್ಷಕ ಶಿವಶಂಕರ್ ಮಠದ್ ಮಾತನಾಡಿ ಎಲ್ಲೂ ಹುಟ್ಟಿ ಎಲ್ಲೂ ಕಲಿತು ವಿದ್ಯೆ ಕಲಿಸಿದ ಗುರುಗಳನ್ನು 27 ವರ್ಷಗಳ ನಂತರ ಹುಡುಕಿ ಕೊಂಡು ಬಂದು ಗೌರವಿಸುತ್ತಿರುವ ನೀವುಗಳು ಪುಣ್ಯವಂತರಾಗಿದ್ದಿರಿ. ನಿಮ್ಮ ಸತ್ಕಾರ ಗೌರವ ನಮ್ಮನ್ನು ಸಂತೋಷ ಗೊಳಿಸಿದೆ. ನಿಮ್ಮಂತೆ ಮಕ್ಕಳನ್ನು ವಿದ್ಯಾವಂತರನ್ನಾಗಿಸಿನಿಮ್ಮ ಪ್ರೀತಿ ಅಭಿಮಾನಕ್ಕೆ ಧನ್ಯವಾದಗಳು ಎಂದು ತಿಳಿಸಿದರು.
ನಿವೃತ್ತ ಶಿಕ್ಷಕರಾದ ಗೀತಾಲಕ್ಷ್ಮೀ, ಜಯಲಕ್ಷ್ಮಿ, ಕಸ್ತೂರಿ, ಶಿವಮ್ಮ, ಶೋಭಾ, ಗಿರಿಜಮ್ಮ, ಕೋಮಲಮ್ಮ, ವರಮಹಾಲಕ್ಷ್ಮೀ, ರುಕ್ಮಿಣಿ, ವಿಶಾಲಾಕ್ಷಿ ಭರತ್, ಹಾಗೂ ಹಳೇಯವಿದ್ಯಾರ್ಥಿಗಳಾದ ಯಶೋಧರ, ಅರುಣ್ ಕುಮಾರ್, ಟಿ.ಕೆ ರಂಗನಾಥ್, ಭೈರೇಶ್, ರಾಜೇಂದ್ರ, ರಾಘವೇಂದ್ರ, ಗುರುಕಾಂಗೋಕರ್, ಹೆಚ್.ಕೆ ರಾಘು, ರಾಘು, ಟಿ ಕೊಂಡಾಚಾರಿ, ವಿನುತ, ನಾಗರತ್ನ, ಭವ್ಯ, ಕುಸುಮ, ಕೋಮಲ, ಫರ್ಜಾನ ಸಂದರ್ಭದಲ್ಲಿ ಉಪಸ್ಥಿತರಿದ್ದರು.

