ಯುವತಿಯಿಂದ 2 ಲಕ್ಷ ಲೂಟಿ ಮಾಡಿದ ಗುರೂಜಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮದುವೆಯಾಗಲು ಪೂಜೆ ಮಾಡಬೇಕು ಎಂಬ ನೆಪವೊಡ್ಡಿ 2 ಲಕ್ಷ ರೂ.ಗಳನ್ನು ಯುವತಿಯಿಂದ ಸುಲಿಗೆ ಮಾಡಿದ ಆರೋಪದ ಮೇಲೆ ಗುರೂಜಿ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದ್ರಶೇಖರ್ ಸುಗತ್ ಗುರೂಜಿ ವಿರುದ್ಧ
21 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಡುಗೋಡಿಯ ಪಿಜಿಯೊಂದರಲ್ಲಿ‌ನೆಲೆಸಿದ್ದ ಯುವತಿ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳು ಇನ್​ಸ್ಟಾಗ್ರಾಮ್ ನೋಡುವಾಗ ಚಂದ್ರಶೇಖರ್ ಸುಗತ್ ಗುರೂಜಿಯಿಂದ ಎಲ್ಲಾ ಕಷ್ಟಗಳನ್ನ ಪರಿಹರಿಸಲಾಗುವುದು ಎಂಬ ಜಾಹೀರಾತು ನೋಡಿ ಪ್ರೇರಿತಗೊಂಡಿದ್ದರು. ಮೊಬೈಲ್ ನಂಬರ್ ಪಡೆದು ಗುರೂಜಿಗೆ ಕರೆ ಮಾಡಿ ತನಗೆ ಮದುವೆಯಾಗಲಿದೆಯಾ ಎಂದು ಪ್ರಶ್ನಿಸಿದ್ದಳು.

- Advertisement - 

ಇದಕ್ಕೆ ಉತ್ತರಿಸಿದ ಗುರೂಜಿ, ಮದುವೆಯಾಗಲಿದೆ. ಆದರೆ, ಹಣ ಖರ್ಚಾಗಲಿದೆ ಅಂತ ಹೇಳಿದ್ದರು. ಅದರಂತೆ ಆತನ ಮಾತನ್ನ ನಂಬಿ ಹಂತ-ಹಂತವಾಗಿ 2 ಲಕ್ಷ ರೂ.ವರೆಗೆ ಹಣ ನೀಡಿದ್ದೆ. ಹೇಳಿದಂತೆ ಪೂಜೆ ಮಾಡಿದ್ದಾರೆ. ಆದರೆ, ಮದುವೆಯಾಗದಿದ್ದರೆ ಹಣ ವಾಪಸ್ ನೀಡುವಂತೆ ಕೇಳಿದ್ದೆ.

ಆದರೆ, ಆ ಗುರೂಜಿ ಹಣ ಮರಳಿ ವಾಪಸ್ ನೀಡುವುದಿಲ್ಲ, ಏನಾದರೂ ಮಾಡಿಕೊ ಎಂದು ಧಮಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ‌.

- Advertisement - 

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಗುರೂಜಿ ತಮ್ಮ ಮೊಬೈಲ್ ಸ್ವಿಚ್ಡ್​ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಆತನ ಪತ್ತೆಗಾಗಿ ಶೋಧಕಾರ್ಯ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

 

 

Share This Article
error: Content is protected !!
";