ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಗುರುವಂದನೆ, ಸ್ನೇಹ ಸಮ್ಮಿಲನ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಗುರುವಂದನಾ ಕಾರ್ಯಕ್ರಮ ಎಂದರೆ ಶಿಕ್ಷಕರನ್ನು ಗೌರವಿಸಿ
, ಅವರ ತ್ಯಾಗ ಮತ್ತು ಮಾರ್ಗದರ್ಶನಕ್ಕೆ ಕೃತಜ್ಞತೆ ಸಲ್ಲಿಸಲು ಹಳೆಯ  ವಿದ್ಯಾರ್ಥಿಗಳು ಹಮ್ಮಿಕೊಳ್ಳುವ ಒಂದು ವಿಶೇಷ ಕಾರ್ಯಕ್ರಮವಾಗಿದೆ. ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ತಮ್ಮ ಮೆಚ್ಚಿನ ಶಿಕ್ಷಕರಿಗೆ ಸನ್ಮಾನ ಮಾಡಿಸ್ಮರಣಿಕೆಗಳನ್ನ  ಅರ್ಪಣೆ ಮಾಡಿ , ಹಳೆಯ ನೆನಪುಗಳ ಮೆಲುಕು ಹಾಕುತ್ತಾ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಿ ಪೂಜಿಸುವ ಒಂದು ಸುಂದರ ಕಾರ್ಯಕ್ರಮವಾಗಿದೆ.

ಇಂತಹ ಒಂದು ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿದ್ದು ದೊಡ್ಡಬಳ್ಳಾಪುರ ನಗರದ 1994 ವರ್ಷದ ಬಿ ಎಸ್ ಎ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಇಂತಹ ಸುಂದರ ಕಾರ್ಯಕ್ರಮ ದೊಡ್ಡಬಳ್ಳಾಪುರ ಯಲಹಂಕ ರಸ್ತೆಯಲ್ಲಿರುವ ಕೃಷ್ಣಧಾಮ ಹೋಟೆಲ್ ನ ಸಭಾಗಂಣದಲ್ಲಿ ನಡೆದದ್ದು ಮನಮೋಹಕ 31 ವರ್ಷಗಳ ನಂತರ ಕಾರ್ಯಕ್ರಮ ಆಯೋಜನೆ ಮಾಡಲು 1994 ನೇ ಬಿ ಎಸ್ ಎ ಪ್ರೌಢಶಾಲೆಯ ವಿದ್ಯಾರ್ಥಿ ಮಿತ್ರರು ಆಸಕ್ತಿ ತೋರಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಸಿದ್ದತೆ ನಡೆಸಿ ಒಂದು ಸುಂದರ ಕಾರ್ಯಕ್ರಮ ನಡೆಯಲು ಕಾರಣೀಭೂತರಾಗಿದ್ದಾರೆ.

- Advertisement - 

 ಈ ಸಂದರ್ಭದಲ್ಲಿ ಗುರುಗಳಿಗಿಂತ ಹಳೆಯ ವಿದ್ಯಾರ್ಥಿ ಮಿತ್ರರನ್ನ ಹುಡುಕುವುದೇ ಕಷ್ಟವಾಗಿತ್ತು. ತದನಂತರ ಎಲ್ಲಾ ಗೆಳಯರನ್ನ ಕಲೆಹಾಕಿದ ನಂತರ  ಎಲ್ಲಾ ಗೆಳೆಯರು ಸೇರಿ ಒಂದು ಉತ್ತಮ ಕಾರ್ಯಕ್ರಮ ನೆಡೆಯಲು ಕಾರಣೀಕರ್ತರಾಗಿದ್ದಾರೆ.

 ಕಾರ್ಯಕ್ರಮದ ರೂಪುರೇಷೆ  ಈ ರೀತಿಯಲ್ಲಿ ಇದ್ದು ಮೊದಲಿಗೆ ಪಾದಪೂಜೆ, ಪ್ರಾರ್ಥನೆ, ಸ್ವಾಗತ ಭಾಷಣದೀಪ ಉದ್ಘಾಟನೆಅಗಲಿದ ಮಹನೀಯರಿಗೆ ಮೌನಾಚರಣೆ, ನಂತರ ಗುರುಗಳಿಗೆ ಗುರು ಸಮರ್ಪಣಾ ಪ್ರಶಸ್ತಿ, ಸವಿನೆನಪಿನ ಕಾಣಿಕೆ ತದನಂತರ ಶಿಕ್ಷಕರ ಹಿತನುಡಿಗಳು ಹಾಗೂ ಸ್ನೇಹಿತರ ಅನಿದಿಎಗಳನ್ನ ಕೇಳುವುದಾಗಿತ್ತು. ಕಾರ್ಯಕ್ರಮದಲ್ಲಿ ಮೊದಲಿಗೆ ತಮಗೆ ಪಾಠ ಮಾಡಿದ್ದ  ಶಿಕ್ಷಕರಿಗೆ ಎಲ್ಲಾ ಹಳೆಯ ವಿದ್ಯಾರ್ಥಿಗಳು ಪಾದಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ.

- Advertisement - 

ತದನಂತರ ತಮ್ಮ ನೆಚ್ಚಿನ ಗುರುಗಳ  ಜೊತೆಯಲ್ಲಿ ಮೂವತ್ತು ವರ್ಷಗಳ ಹಿಂದಿನ ಕ್ಷಣಗಳ ಮೆಲುಕು ಹಾಕುತ್ತಾ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಜೊತೆಯಲ್ಲಿದ್ದ ಕೆಲವು ವಿದ್ಯಾರ್ಥಿ ಮಿತ್ತರು ಹಾಗೂ ಕೆಲವು ಗುರುಗಳು ದೈವಾಧೀನರಾಗಿದ್ದ ಹಿನ್ನಲೆ ಅವರನ್ನ ನೆನೆಯುತ್ತಾ ಮೌನಾಚರಣೆ ಮಾಡಿ ಅವರಿಗೆ ತಮ್ಮ ನೆನಪಿನ ಭಾವನೆಗಳನ್ನ ಅರ್ಪಿಸಿ ತದನಂತರ ತಮ್ಮ ಗುರುಗಳಿಗೆ ಸನ್ಮಾನ ಮಾಡುತ್ತಾ ನೆನಪಿನ ಕಾಣಿಕೆಗಳನ್ನ ಅರ್ಪಿಸಿ ಕೃತಜ್ಞತೆ ಮೆರೆದು ಗುರುವಂದನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

ಕಾರ್ಯಕ್ರಮದಲ್ಲಿ  ಬಿ ಎಸ್ ಎ ಪ್ರೌಡಶಾಲೆಯ ನೆಚ್ಚಿನ ಗುರುಗಳಾದ ಸುದಿಂದ್ರ, ತಮ್ಮಯ್ಯ, ದೇವರಾಮ್, ವೆಂಕಟಲಕ್ಷ್ಮಮ್ಮ, ರವೀಂದ್ರ, ನರಸಿಂಹಮೂರ್ತಿವೆಂಕಟೇಶ್, ರಾಜಣ್ಣ, ರಾಮಣ್ಣ, ರಾಜಣ್ಣನವರಿಗೆ ಸನ್ಮಾನಿಸಿದರು.
ದಿವಗಂತ ನಾಗಭೂಷಣ್ ಹಾಗೂ ದಿವಗಂತ ವೆಂಕಟಾಚಲಪತಿಯವರು ನಿಧನರಾಗಿದ್ದರೂ ಅವರ ಕುಟುಂಬದವರನ್ನ ಕರೆಸಿ ಅಗಲಿದ ಶಿಕ್ಷಕರ ನೆನೆಯುತ್ತಾ ಅವರ ಕುಟುಂಬದ ಸದಸ್ಯರಿಗೆ ಕಾಣಿಕೆ ಅರ್ಪಿಸಿದ್ದಾರೆ.

ಕಾರ್ಯಕ್ರಮದಲ್ಲಿ  ಹಳೆಯ ವಿದ್ಯಾರ್ಥಿಗಳಾದ ಕೆಂಪೇಗೌಡರು ಸೇರಿದಂತೇ ಶಿವಣ್ಣ, ರಾಮಯ್ಯ, ಹಮಾಮ್ ಕೆಂಪೇಗೌಡ, ರವಿ.ಸಿ. ನಾಗರಾಜ್ ಟಿ.ಆರ್, ಮಂಜುನಾಥ ಆರ್ ಎನ್ ಮೋಹನ್, ನರಸಿಂಹಮೂರ್ತಿಹೇಮಂತ್, ಪ್ರಸಾದ್, ಜಗದೀಶ್ ಮಂಜುನಾಥ ಆರ್ಮುನಿರಾಜು ಜೆ, ಮುನಿರಾಜು ಎಸ್, ರಮೇಶ್ ಎಚ್, ಯೂಸೆಫ್, ಮಹಮದ್ ರಫಿ, ಮೈಲಾರಲಿಂಗಸ್ವಾಮಿ, ಮುನಿಕೃಷ್ಣ, ವೆಂಕಟೇಶನಾಯಕ್ ಎಸ್ ಆರ್, ವೆಂಕಟೇಶ ನಾಯಕ ಆರ್, ವೆಂಕಟೇಶ ನಾಯಕ ಬಿ, ರಮೇಶ್ ನಾಯಕ ಟಿ, ರವಿಕುಮಾರ್ ನಾಯಕ್, ಅಂಜನಮೂರ್ತಿ, ನಾಗರಾಜ್ ಯಲ್ಲಪ್ಪ, ರಾಯಣಸ್ವಾಮಿ, ಹೇಮ ಉದಯ್ ಲಲಿತ, ನಾಗರತ್ನ ಎಸ್ ನಾಗರತ್ನ, ಮೀನ ಭಾಗ್ಯ, ಜಲಜಾಕ್ಷಿ ,ಪಂಕಜಾಕ್ಷಿ  ಪಂಪಾವತಿ, ಅಮಿತಾ, ಮಂಜುಳ ಬಿಎಸ್, ಬಾಬು ಮೋಹನ್, ನರಸಮ್ಮ ಯಶೋದ ಸೇರಿದಂತೇ ಇನ್ನೂ ಹಲವು ಹಖೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಗುರುವಂದನಾ ಕಾರ್ಯಕ್ರಮವು ಶಿಕ್ಷಕರನ್ನು ಗೌರವಿಸುವ, ಜ್ಞಾನದ ಬೆಳಕನ್ನು ಪಸರಿಸುವ ಮತ್ತು ಸಂಸ್ಕಾರವನ್ನು ಪೋಷಿಸುವ ಒಂದು ಶ್ಲಾಘನೀಯ ಪ್ರಯತ್ನವಾಗಿದೆ. ಕೊನೆಯಲ್ಲಿ ಈ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದ ಎಲ್ಲಾ ಕಿರಿಯ  ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಬಿಎಸ್ ಎ ಶಾಲೆಯ 1994ನೇ ಬ್ಯಾಚಿನ ವಿಧ್ಯಾರ್ಥಿಗಳು ಧನ್ಯವಾದಗಳನ್ನ ಅರ್ಪಿಸಿದ್ದಾರೆ.

 

Share This Article
error: Content is protected !!
";