ನೂತನ ಜಿಲ್ಲಾಧಿಕಾರಿಗಳ ಕಟ್ಟಡ ಮೆಡಿಕಲ್ ಕಾಲೇಜ್ ಗೆ ಹಸ್ತಾಂತರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಧಿಕಾರ ಹಂಚಿಕೆ ಕುರಿತು ಡಿಕೆಶಿ ಹೇಳಿಕೆ ಕುರಿತು ಡಿ.ಸುಧಾಕರ್ ಪ್ರತಿಕ್ರಿಯೆ ನೀಡಿ, ಮೇಲ್ಮಟ್ಟದಲ್ಲಿ ನಡೆದ ವಿಚಾರಗಳು ನನಗೆ ಗೊತ್ತಿಲ್ಲ. ಡಿಸಿಎಂ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ಚಿತ್ರದುರ್ಗದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಸಾರಿಗೆ ನೌಕರರ ಮುಷ್ಕರ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಜೊತೆಗೆ ಸಂಧಾನ ಇದೆ, ಮುಷ್ಕರ ನಡೆಯುವುದಿಲ್ಲ. ಸಭೆ ಆಶಾದಾಯಕವಾಗಿದೆ ಎಂದು ಸಚಿವರು ತಿಳಿಸಿದರು.

- Advertisement - 

 KRS ಡ್ಯಾಂಗೆ ಅಡಿಗಲ್ಲು ಹಾಕಿದ್ದು ಟಿಪ್ಪು- ಸಚಿವ ಎಚ್.ಸಿ. ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಧಾಕರ್ ವಿವಾದಾತ್ಮಕ ಹೇಳಿಕೆಗೆ ನಾನು ಉತ್ತರ ಕೊಡ್ಲಾ. ಇತಿಹಾಸ ತಜ್ಞರಿದ್ದಾರೆ, ಇತಿಹಾಸ ತಿಳಿದವರಿದ್ದಾರೆ. ಮೈಸೂರು ದೊರೆಗಳು ತಮ್ಮ ಮನೆತನದ ಬಂಗಾರ ಅಡವಿಟ್ಟು ಅಭಿವೃದ್ಧಿ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ ಕಾರ್ಯ ಇತಿಹಾಸದ ಪುಟಗಳಲ್ಲಿದೆ ಎಂದು ಅವರು ತಿಳಿಸಿದರು.

ಚಿತ್ರದುರ್ಗ ಹೊಸ ಡಿಸಿ ಕಚೇರಿ ಮೆಡಿಕಲ್ ಕಾಲೇಜಿಗೆ ಹಸ್ತಾಂತರ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ನೂತನ ಜಿಲ್ಲಾಧಿಕಾರಿಗಳ ಕಟ್ಟಡ ಅವೈಜ್ಞಾನಿಕವಾಗಿದೆ ಅಂತಾ ಜನಾಭಿಪ್ರಾಯ ಇದೆ. ನಾವು ಎಲ್ಲಾ ಶಾಸಕರು ಸೇರಿ ನೂತನ ಜಿಲ್ಲಾಧಿಕಾರಿಗಳ ಕಟ್ಟಡವನ್ನು ಮೆಡಿಕಲ್ ಕಾಲೇಜ್ ಗೆ ಬಿಟ್ಟುಕೊಡಲು ತೀರ್ಮಾನ ಮಾಡಿ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ವಿಚಾರವನ್ನು ಸಿಎಂ ಗಮನಕ್ಕೂ ತಂದಿದ್ದೇವೆ ಎಂದು ಸುಧಾಕರ್ ತಿಳಿಸಿದರು.

- Advertisement - 

ಡಿಸಿ ಕಚೇರಿಗೆ ನೂತನ ಸ್ಥಳ ನಿಗದಿ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಜಿಲ್ಲಾಧಿಕಾರಿಗಳ ವಸತಿ ಗೃಹ 16 ಎಕರೆಯಲ್ಲಿದೆ, ಅದಕ್ಕೆ ಹೊಂದಿಕೊಂಡಂತೆ 9 ಎಕರೆ ಜಾಗ ಇದೆ. ಅಲ್ಲಿ ಸೂಕ್ತ ಪ್ಲ್ಯಾನ್ ಮಾಡಿಸಿ ಸೂಕ್ತ ನಿರ್ಧರ ತೆಗೆದುಕೊಳ್ಳುತ್ತೇವೆ. ಈಗ ಕಟ್ಟಿರುವ ಕಟ್ಟಿರುವ ಕಟ್ಟಡ ಮೆಡಿಕಲ್ ಕಾಲೇಜ್, ಕ್ಯಾಂಪಸ್ ಮಾಡ್ತೀವಿ ಎಂದು ತಿಳಿಸಿದರು.

ಕೇಂದ್ರ ಯೂರಿಯಾ ರಸಗೊಬ್ಬರವನ್ನು ಸಮರ್ಪಕ ಪೂರೈಕೆ ಮಾಡಿಲ್ಲ ಅಂತ ನೋಡ್ತಿದ್ದೇವೆ. ಸಿಎಂ ಕೇಂದ್ರದ ಭೇಟಿ ವೇಳೆ ಮನವಿ ಮಾಡಿದ್ದಾರೆ. ಬೇಡಿಕೆ 21 ಸಾವಿರ ಮೆಟ್ರಿಕ್ ಟನ್, ಪೂರೈಕೆ ಆಗಿದ್ದು 24 ಸಾವಿರ ಮೆಟ್ರಿಕ್ ಟನ್. ರೈತರು ಪದೇ ಪದೆ ಯೂರಿಯಾ ಬಳಕೆ ಮಾಡ್ತಿದ್ದಾರೆ.

ಮುಂಗಾರು ಹಂಗಾಮು ಬೇಗ ಆರಂಭ ಆಗಿದ್ದರಿಂದ ಬೇಡಿಕೆ ಹೆಚ್ಚಾಗಿದೆ. ಕೇಂದ್ರ ಯೂರಿಯಾ ಪೂರೈಕೆ ಮಾಡುವ ಮೊದಲೇ ರೈತರ ಬೇಡಿಕೆ ಹೆಚ್ಚಿದೆ. ಈಗ ಮುಂಚೆ ಇದ್ದಷ್ಟು ಸಮಸ್ಯೆ ಇಲ್ಲ. ಮಳೆ ಇಲ್ಲ, ಮಹದೇವನಿಗೆ ಪೂಜೆ ಮಾಡಬೇಕು ಎಂದ ಡಿ. ಸುಧಾಕರ್ ಹೇಳಿದರು.

 

Share This Article
error: Content is protected !!
";