ಹರಿಯಬ್ಬೆ ರವಿ ಪಟೇಲ್ ಇನ್ನಿಲ್ಲ, ಇಂದು ಮಧ್ಯಾಹ್ನ 1.30ಕ್ಕೆ ಅಂತ್ಯ ಕ್ರಿಯೆ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹರಿಯಬ್ಬೆ ಗ್ರಾಮ ಆರ್.ಕೆ.ಪಟೇಲ್ ಪುತ್ರ ರವಿ ಆರ್.ಎನ್. ಪಟೇಲ್(84) ಮಂಗಳವಾರ ಬೆಳಗಿನ ಜಾವದಲ್ಲಿ ಸ್ವಗ್ರಾಮದ ಮನೆಯಲ್ಲಿ ನಿಧನರಾದರು.
ಮೃತರು ಪತ್ನಿ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಅರುಣಾ ಪಟೇಲ್ ಸೇರಿದಂತೆ ಓರ್ವ ಪುತ್ರ, ಪುತ್ರಿ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
ಇಂದು ಮಂಗಳವಾರ ಮಧ್ಯಾಹ್ನ 1.30ಕ್ಕೆ ಹರಿಯಬ್ಬೆ ಗ್ರಾಮದ ತೋಟದಲ್ಲಿ ಅಂತ್ಯ ಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.