ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯದ ರಾಜ್ಯಪಾಲರುಗಳ ಮುಖ್ಯವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹರಿಯಬ್ಬೆ ಗ್ರಾಮದ ವಿಶ್ರಾಂತ ರಾಜ್ಯಪಾಲರ ಮುಖ್ಯ ವೈದ್ಯಾಧಿಕಾರಿ ಡಾ.ಡಿ.ಜಿ ಬೊಮ್ಮಯ್ಯ(97) ಅವರು ಮಾರ್ಚ್-14 ರಂದು ಬೆಂಗಳೂರಿನ ಕಾಕ್ಸ್ ಟೌನ್ ನಲ್ಲಿರುವ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ ವಿಮಲಾ ಬೊಮ್ಮಯ್ಯ ಸೇರಿದಂತೆ ಐದು ಮಂದಿ ಪುತ್ರಿಯರು, ಓರ್ವ ಪುತ್ರ, ಮೊಮ್ಮಕ್ಕಳು, ಅಳಿಯಂದಿರು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದಲ್ಲಿ ಮಾರ್ಚ್-17 ರಂದು ಸೋಮವಾರ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ರಾಜ್ಯಪಾಲರ ಮುಖ್ಯವೈದ್ಯಾಧಿಕಾರಿ-
ಹರಿಯಬ್ಬೆ ಗ್ರಾಮದ ಡಾ.ಡಿ.ಜಿ ಬೊಮ್ಮಯ್ಯ ಅವರು ಕರ್ನಾಟಕ ರಾಜ ಭವನದಲ್ಲಿ ರಾಜ್ಯಪಾಲರುಗಳಾದ ಗೋವಿಂದ ನಾರಾಯಣ, ಎ.ಎನ್.ಬ್ಯಾನರ್ಜಿ ಮತ್ತು ಪಿ.ವೆಂಕಟ ಸುಬ್ಬಯ್ಯನವರಿಗೆ ಮುಖ್ಯ ವೈದ್ಯಾಧಿಕಾರಿಗಳಾಗಿ ರಾಜ ಭವನದಲ್ಲಿ ಸೇವೆ ಸಲ್ಲಿಸಿದ್ದಾರೆ.
ಶ್ರದ್ಧಾಂಜಲಿ- ರಾಜ್ಯಪಾಲರ ವಿಶ್ರಾಂತ ಮುಖ್ಯ ವೈದ್ಯಾಧಿಕಾರಿ ಹರಿಯಬ್ಬೆ ಡಾ.ಡಿ.ಜಿ ಬೊಮ್ಮಯ್ಯ ಇವರ ವಯೋ ಸಹಜ ಸಾವಿಗೆ ಡಾ.ಎಂ.ಜಿ.ಗೋವಿಂದಯ್ಯ, ಹರಿಯಬ್ಬೆ ಗ್ರಾಮಸ್ಥರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಶಾಂತಿ ಹಾಗೂ ಸದ್ಗತಿ ದೊರೆಯಲಿದೆ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಹಾಗೂ ಕುಟುಂಬ ವರ್ಗದವರಿಗೆ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಆ ದೇವರು ದಯಪಾಲಿಸಲಿ ಎಂದು ಕೋರಿದ್ದಾರೆ.
Haribbe Dr. D.G. Bommaiah, the Governor's Chief Medical Officer, is no more.
It is with great pain and heavy heart to reveal the sad demise of Dr D G Bommaiah, on 14.3.2025 at 1.45 pm Friday in his residence, Cox Town Bengaluru -5 after attaining the age of 97 years. He served as the Chief Medical Officer to Hon’ble Governors of Karanataka State Sri. Govinda Narayan, Sri. A. N Benarjee, Sri. Venkatasubbaiah . He left to Abode by leaving his beloved wife Smt Vimala, five daughters Dr Shailaja, Dr Suvarni, Smt Asha, Smt Usha, Smt Varalakshmi and son Dr B Keshava, apart from grand children, other family members, friends and relatives. His last rites will take place on 17.3.2025 at 4.00pm at his native place Hariyabbe, Hiriyur Tq, Chitradurga Dt. May his soul rest at peace and God provide him heavenly Abode. Let us pray Almighty to provide peace and tranquility to his family members to sustain the unbearable loss.
Dr M G Govindaiah.