ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಲೇಷಿಯಾದ ಶಾ ಆಲಂನ ಪ್ಯಾನಸಾನಿಕ್ ನ್ಯಾಷನಲ್ ಸ್ಪೋಟ್ರ್ಸ್ ಕಾಂಪ್ಲೆಕ್ಸ್‍ನಲ್ಲಿ 2024–25ನೇ ವರ್ಷದ ಪ್ರತಿಷ್ಠಿತ ಅಂತರಾಷ್ಟ್ರೀಯ ತೈಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿನಿ ಹಾಸಿನಿ ಪಿ ಗೌಡ ನಾಲ್ಕು ಬಂಗಾರದ ಪದಕಗಳನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾಳೆ.
ಬೆಂಗಳೂರಿನ ಎಂ.ಎಸ್. ರಾಮಯ್ಯ ಅನ್ವಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬಿಎ, ಎಲ್‍ಎಲ್‍ಬಿ (ಆನರ್ಸ್) ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿ ಅಧ್ಯಯನ ಮಾಡುತ್ತಿರುವ ಹಾಸಿನಿ, 17 ರಿಂದ 18 ವರ್ಷದೊಳಗಿನ ವಯೋಮಿತಿಯಲ್ಲಿ 55 ಕೆಜಿ ವಿಭಾಗದಲ್ಲಿ ಸ್ವರ್ಧಿಸಿದ್ದ ಹಾಸಿನಿ ಪಿ ಗೌಡ Female Warriors ಮತ್ತು Ultimate Warriors ವಿಭಾಗಗಳಲ್ಲಿ ಸ್ಪರ್ಧಿಸಿ, ಸ್ಪ್ಯಾರಿಂಗ್ ಮತ್ತು ಪ್ಯಾಟನ್ರ್ಸ್ ಎರಡರಲ್ಲಿಯೂ ಬಂಗಾರದ ಪದಕಗಳನ್ನು ಗೆದ್ದಿದ್ದಾರೆ. ಕಠಿಣ ಅಂತರಾಷ್ಟ್ರೀಯ ಸ್ಪರ್ಧೆಯ ನಡುವೆಯೂ ತೋರಿದ ಅವರ ಸಾಮಥ್ರ್ಯ ಹಾಗೂ ಶ್ರದ್ಧೆ ಸ್ಪೂರ್ತಿದಾಯಕವಾಗಿದೆ.
ಅಂತರಾಷ್ಟ್ರೀಯ ತೈಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಭಾರತ, ಇಂಡೋನೇಷ್ಯಾ, ಬಾಂಗ್ಲಾದೇಶ, ಮ್ಯಾನ್ಮಾರ್, ಸಿರಿಯಾ, ಮಲೇಷ್ಯಾ ಸೇರಿ ವಿವಿಧ ರಾಷ್ಟ್ರಗಳ 1500ಕ್ಕೂ ಹೆಚ್ಚು ಸ್ವರ್ಧಿಗಳು ಪಾಲ್ಗೊಂಡಿದ್ದರು. ಭಾರತದಿಂದ 65ಕ್ಕೊ ಹೆಚ್ಚು ಕ್ರೀಡಾಪಟುಗಳು ಭಾಗಿಯಾದರು.
2024-25ನೇ ಶೈಕ್ಷಣಿಕ ವರ್ಷದಗಾಗಿ ಕ್ರೀಡೆ ಮತ್ತು ಮೇಲು ಮಟ್ಟದ ಅಕಾಡೆಮಿಕ್ ಸಾಧನೆಗಾಗಿ ಅವರಿಗೆ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿವೇತನವೂ ಲಭಿಸಿದೆ. ಕ್ರೀಡೆಯಲ್ಲಿ ಮಾತ್ರವಲ್ಲದೆ, ಅವರು ಹಲವಾರು ಸಹಪಠ್ಯ ಮತ್ತು ಸಮಾಜಸೇವಾ ಚಟುವಟಿಕೆಗಳಲ್ಲಿ ಸಹ ಸಕ್ರಿಯರಾಗಿದ್ದಾರೆ.
ಪೋಷಕರು ಮತ್ತು ಕುಟುಂಬ ಹಿನ್ನೆಲೆ ಹಾಸಿನಿ ಪಿ ಗೌಡ ಅವರು ಪ್ರಕಾಶ್ ಬಾಬು ಪಿ ಮತ್ತು ನಂದಿನಿ ಜೆ ದಂಪತಿಗಳ ಪುತ್ರಿ. ಅವರು ಈ ಯಶಸ್ಸು ತಲುಪಲು ತಮ್ಮ ತಂದೆ ತಾಯಿ ನೀಡಿದ ಪ್ರೋತ್ಸಾಹ, ತ್ಯಾಗ ಹಾಗೂ ಬೆಂಬಲವನ್ನು ವಿಶೇಷವಾಗಿ ಸ್ಮರಿಸುತ್ತಾರೆ.
ಅವರು ಮುತ್ತಜ್ಜಿಯರಾದ ಪುಟ್ಟರಾಮೇಗೌಡ ಮತ್ತು ಸಾವಿತ್ರಮ್ಮ, ಮುತ್ತರಾಯಣಪುರ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ, ಡಿ.ಸಿ. ಜಯಶಂಕರ್–ಅಮೃತನಗರ ಸಂಸ್ಥಾಪಕರು (1997)ಮತ್ತು ಹೇಮಲತಾ ಇವರ ಮೊಮ್ಮಗಳ ಸಾಧನೆಗೆ ಅಭಿನಂದನೆ ತಿಳಿಸಿದ್ದಾರೆ.
ಕೇವಲ ಕ್ರೀಡೆ ಅಲ್ಲದೆ, ಅವರ ಕುಟುಂಬವೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಹಾಸಿನಿಯ ಜೀವನ ಮೌಲ್ಯಗಳಿಗೆ ಆಧಾರವಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ 4 ಬಂಗಾರದ ಪದಕಗಳು –ಸ್ಪ್ಯಾರಿಂಗ್ ಮತ್ತು ಪ್ಯಾಟನ್ರ್ಸ್ (Female Warriors ಮತ್ತು Ultimate Warriors ವಿಭಾಗಗಳು), ಮಲೇಷಿಯಾ, 2025, 1 ಬಂಗಾರದ ಪದಕ (ಸ್ಪ್ಯಾರಿಂಗ್) ಮತ್ತು 1 ಕಂಚಿನ ಪದಕ (ಪ್ಯಾಟನ್ರ್ಸ್) – 7ನೇ ದಕ್ಷಿಣ ಏμÁ್ಯ ತೈಕ್ವಾಂಡೋ ಚಾಂಪಿಯನ್‍ಶಿಪ್ (2023), ಯುವ ಫೆÇೀರಮ್ ಸ್ವಿಟ್ಜಲ್ಯಾರ್ಂಡ್ – ಉತ್ತಮ ಪ್ರಶ್ನೆ ವಿಚಾರಕ ಹಾಗೂ ಗ್ಲೋಬಲ್ ಚೇಂಜ್ ಮೇಕರ್ ಪ್ರಶಸ್ತಿ (2023)ಗಳಿಗೆ ಭಾಜನರಾಗಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ 39ನೇ ರಾಷ್ಟ್ರೀಯ ತೈಕ್ವಾಂಡೋ ಚಾಂಪಿಯನ್‍ಶಿಪ್ (2024) – 3 ಬಂಗಾರ, 1 ಕಂಚು, ಹಾಗೂ ಅತ್ಯುತ್ತಮ ಫೈಟರ್ (ಜೂನಿಯರ್ ಮಹಿಳಾ) ಪ್ರಶಸ್ತಿ, 1ನೇ ನ್ಯಾಷನಲ್ ಪೆÇ್ರೀ ಲೀಗ್ ಚಾಂಪಿಯನ್‍ಶಿಪ್ (2022) – ಬಂಗಾರದ ಪದಕ, ಹಳೆಯ ರಾಷ್ಟ್ರೀಯ ಚಾಂಪಿಯನ್ ಶಿಪ್‍ಗಳಲ್ಲಿ ಹಲವಾರು ಕಂಚಿನ ಪದಕಗಳು, ಅವಸರ ಶಾಲಾ–ಯುಎನ್ಎಸ್ಡಿಜಿ ಚಾಂಪಿಯನ್ ಪ್ರಬಂಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಝೋನಲ್ ಹಾಗೂ ರಾಜ್ಯ ಮಟ್ಟದಲ್ಲಿ ದಕ್ಷಿಣ-ಪಶ್ಚಿಮ ಭಾರತ ಮತ್ತು ಕರ್ನಾಟಕ ರಾಜ್ಯ ಚಾಂಪಿಯನ್ ಶಿಪ್‍ಗಳಲ್ಲಿ ಹಲವಾರು ಪದಕಗಳು ಪಡೆದಿದ್ದು, ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆ– 88%
ಮ್ಯಾಟ್ರಿಕ್ಸ್ ಅಬಾಕಸ್ (2015) – 2ನೇ ರ್ಯಾಂಕ್ ಪಡೆದಿದ್ದಾರೆ. ಜಿಲ್ಲಾಮಟ್ಟದ ವಾಕೋ ಕಿಕ್ ಬಾಕ್ಸಿಂಗ್ ಸ್ಪರ್ಧೆ 2024ರಲ್ಲಿ ಸುವರ್ಣ ಪದಕ ಗೆದ್ದಿದ್ದಾರೆ.
ಹಾಸಿನಿ ಅವರ ಸಮಾಜಮುಖಿ ಮನೋಭಾವವನ್ನೂ ಸ್ಮರಿಸಬಹುದಾಗಿದೆ. ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (WADA) – 2023, ಓಲ್ಡ್ ಏಜ್ ಇಂಡಿಯಾ– 2013, ಸ್ಮೈಲ್ ಫೌಂಡೇಶನ್– 2013 ಮತ್ತು 2015ರಲ್ಲಿ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ.
ಮಾರ್ಗದರ್ಶಕರು ಮತ್ತು ತರಬೇತಿ:
ಹಾಸಿನಿ ಅವರ ಸಾಧನೆಯ ಹಿಂದೆ ನೋಟೋರಿಯಸ್ ಫೈಟ್‍ಕ್ಲಬ್ (NFC) ನ ಮಾಲೀಕರಾದ ಮಾಸ್ಟರ್ ಪವನ. ಕೆ ಅವರ ಪ್ರಭಾವಶಾಲಿ ಮಾರ್ಗದರ್ಶನವಿದೆ.
ಹಾಸಿನಿ ಪಿ ಗೌಡ ಅವರ ಯಶಸ್ಸು ಭಾರತದ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿ ನಿಲ್ಲುತ್ತಿದೆ ಮತ್ತು ಜಾಗತಿಕ ಕ್ರೀಡಾಂಗಣದಲ್ಲಿ ಭಾರತ ಇಡುತ್ತಿರುವ ಬಲವಾದ ಹೆಜ್ಜೆಗಳನ್ನೂ ಪ್ರತಿಬಿಂಬಿಸುತ್ತದೆ.