ಕಾಂಗ್ರೆಸ್ ಪಕ್ಷದಿಂದ ಬಡವರಿಗೆ ಟೋಪಿ ಗ್ಯಾರಂಟಿ!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂಗೈನಲ್ಲಿ ಆಕಾಶ ತೋರಿಸಿ ಪಂಗನಾಮ ಹಾಕಿ ಅಧಿಕಾರಕ್ಕೆ ಬಂದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ ಪ್ರತಿಯೊಂದು ಯೋಜನೆಗೂ ಕತ್ತರಿ ಹಾಕುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ವಾಗ್ದಾಳಿ ಮಾಡಿದ್ದಾರೆ.

ಗೃಹಲಕ್ಷ್ಮಿ ಹಣ ತಲುಪುತ್ತಿಲ್ಲ, ಅಕ್ಕಿ ಹಣ ಸಿಗುತ್ತಿಲ್ಲ, ಯುವನಿಧಿ ಹಣ ಬಂದೇ ಇಲ್ಲ! ಇದೀಗ ಬಡವರ ಬಿಪಿಎಲ್ ಪಡಿತರ ಚೀಟಿಗಳನ್ನು ಸಹ ಕುಂಟು ನೆಪಗಳನ್ನೊಡ್ಡಿ ರದ್ದು ಪಡಿಸುತ್ತಿದೆ.

ಗ್ಯಾರಂಟಿ ‌ಯೋಜನೆ ಜಾರಿ ಮಾಡುವಾಗ ರಾಜ್ಯದ ಆರ್ಥಿಕ ಸ್ಥಿತಿಗತಿಗಳ‌ಕುರಿತು ಅಧ್ಯಯನ ಮಾಡದೆ ಅವೈಜ್ಞಾನಿಕವಾಗಿ ಜಾರಿ ಮಾಡಿ, ಸಂಪನ್ಮೂಲಗಳ ಕ್ರೋಢೀಕರಣಕ್ಕಾಗಿ ಬೆಲೆ ಏರಿಕೆ ಮಾಡಿದ ಬಳಿಕ, ಇದೀಗ ವಿವಿಧ ನೆಪವೊಡ್ಡಿ ಅರ್ಹರನ್ನೇ ಯೋಜನೆಗಳ ಫಲಾನುಭವಿಗಳ ಪಟ್ಟಿಯಿಂದ ಹೊರಗಿಡಲಾಗುತ್ತಿದೆ.

ಚುನಾವಣೆಗೂ ಮುನ್ನ ಗ್ಯಾರಂಟಿ ಎಂದು ಬೊಬ್ಬೆ ಹೊಡೆಯುತ್ತಿದ್ದವರು ಇಂದು ಎಲ್ಲಾ ಗ್ಯಾರಂಟಿಗಳನ್ನೂ ಮರೆತಿದ್ದಾರೆ. ರಾಜ್ಯದ ಖಜಾನೆಯನ್ನು ಗುಡಿಸಿ ಗುಂಡಾಂತರ ಮಾಡಿರುವ ಸಿದ್ದರಾಮಯ್ಯ ಸರ್ಕಾರ ಈಗ ಇರುವ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸಲಾಗದ ಮಟ್ಟಕ್ಕೆ ತಲುಪಿದೆ. ಸರ್ಕಾರವೊಂದು ಈ ಪರಿ ದಿವಾಳಿಯಾಗಿರುವುದು ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲು ಎಂದು ಬಿಜೆಪಿ ತಿಳಿಸಿದೆ.

 

- Advertisement -  - Advertisement -  - Advertisement - 
Share This Article
error: Content is protected !!
";