ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಐಕಾನಿಕ್ ಬೊಕಾರೊ ಸ್ಟೀಲ್ ಪ್ಲಾಂಟ್‌ಗೆ ಕೇಂದ್ರ ಸರ್ಕಾರದ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ ಮತ್ತು ಪರಿಶೀಲಿಸಲು ಜಾರ್ಖಂಡ್‌ಗೆ ಆಗಮಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ಜಾರ್ಖಂಡ್ ರಾಜ್ಯದಿಂದ ಗಾರ್ಡ್ ಆಫ್ ಆನರ್ ಸ್ವೀಕರಿಸಿ ಗೌರವಿಸಲ್ಪಟ್ಟರು. ರಾಜ್ಯ ಸರ್ಕಾರ ಕುಮಾರ ಸ್ವಾಮಿ ಅವರಿಗೆ ಆತ್ಮೀಯ ಸ್ವಾಗತ ನೀಡಿ ಅದ್ಧೂರಿಯಾಗಿ ಆತಿಥ್ಯ ನೀಡಿದ್ದಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ, 2030 ರ ವೇಳೆಗೆ 300 MT ಉಕ್ಕಿನ ಉತ್ಪಾದನೆಯ ಗುರಿ ಸಾಧಿಸಲು ಮತ್ತು AtmanirbharBharat ಅಡಿಯಲ್ಲಿ ಭಾರತದ ಸ್ವಾವಲಂಬನೆಯನ್ನು ಬಲಪಡಿಸಲು ಬದ್ಧರಾಗಿದ್ದೇವೆ. ಈ ಮಿಷನ್ ಯೋಜನೆಯನ್ನು ಅನುಷ್ಠಾನ ಮಾಡಲು ಪರಿಣಾಮಕಾರಿ ಚರ್ಚೆಗಳಿಗಾಗಿ ಉತ್ಸುಕನಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಕುಮಾರಸ್ವಾಮಿ ಭೇಟಿ ನೀಡಿದ ಸಂದರ್ಭದಲ್ಲಿ ಬೊಕಾರೊ ಸ್ಟೀಲ್ ಪ್ಲಾಂಟ್‌ನ ಆಡಳಿತ ಮಂಡಳಿಯ ಅಧಿಕಾರಿಗಳು ಸಂಪೂರ್ಣ ಸ್ಥಾವರದ ವಿವರವಾದ 3D ನಕ್ಷೆಯನ್ನು ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಸ್ಥಳದಲ್ಲಿ ದೃಢವಾದ ಸುರಕ್ಷತಾ ಕಾರ್ಯವಿಧಾನಗಳ ಬಗ್ಗೆ ಸಮಗ್ರವಾಗಿ ಕೈಗೊಳ್ಳುವಂತೆ ವಿವರಿಸಿದರು.
ಬೊಕಾರೊ ಸ್ಟೀಲ್ ಉನ್ನತ-ಗುಣಮಟ್ಟದ DMR ಪ್ಲೇಟ್‌ಗಳನ್ನು ತಯಾರಿಸುತ್ತಿದೆ ಎಂದು ತಿಳಿಸಿದ ಕುಮಾರಸ್ವಾಮಿ ರಕ್ಷಣಾ ವಲಯವನ್ನು ವಿಶೇಷವಾಗಿ ಭಾರತೀಯ ರಕ್ಷಣಾ ವಲಯವನ್ನು ಬೆಂಬಲಿಸುತ್ತದೆ. ಇದು SteelMinIndia ಮತ್ತು AtmanirbharBharat ಅಡಿಯಲ್ಲಿ ಭಾರತದ ಸ್ವಾವಲಂಬನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಟೀಲ್ ಮತ್ತು ಹೆವಿ ಇಂಡಸ್ಟ್ರೀಸ್ ವರ್ಮಾ ಮತ್ತು SAIL CMD ಅಮರೇಂದು ಪ್ರಕಾಶ್ ಸೇರಿದಂತೆ ಮತ್ತಿತರರು ಜೊತೆಗಿದ್ದರು.

