ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಸರಿಯಾದ ಸ್ಥಳಕ್ಕೆ ಕೊರಿಯರ್ಪಾರ್ಸಲ್ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯು ಕೊರಿಯರ್ಬಾಯ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಅಶೋಕನಗರದ ಬಳಿಯ ಆನೆಪಾಳ್ಯದಲ್ಲಿ ನಡೆದಿದ್ದು, ಗಾಯಾಳು ಸ್ಥಿತಿ ಗಂಭೀರವಾಗಿದೆ.ಚಾಕು ಇರಿತಕ್ಕೆ ಒಳಗಾಗಿರುವ ಕೊರಿಯರ್ಬಾಯ್ಮೊಹಮ್ಮದ್ರಫಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆತನಿಗೆ ಚಾಕು ಇರಿದಿದ್ದ ಆರೋಪಿ ಅರ್ಬಾಜ್ಎಂಬಾತನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುಖ್ಯರಸ್ತೆ- ಒಳರಸ್ತೆ ಮನಸ್ತಾಪಆಡುಗೋಡಿ ನಿವಾಸಿಯಾದ ಮೊಹಮ್ಮದ್ರಫಿ, ಕೊರಿಯರ್ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಆನೆಪಾಳ್ಯದ ಅರ್ಬಾಜ್, ಆನ್ಲೈನ್ನಲ್ಲಿ ವಸ್ತುವೊಂದನ್ನು ಬುಕ್ಮಾಡಿದ್ದ.
ಮೊಹಮ್ಮದ್ರಫಿ ಆ ಕೊರಿಯರ್ಪಾರ್ಸಲ್ಕೊಡಲು ಆಗಸ್ಟ್ 30ರಂದು ಆನೆಪಾಳ್ಯ ಮುಖ್ಯರಸ್ತೆಗೆ ಹೋಗಿ ಆರೋಪಿ ಅರ್ಬಾಜ್ಗೆ ಕರೆ ಮಾಡಿ, ಮುಖ್ಯ ರಸ್ತೆಗೆ ಬಂದು ಕೊರಿಯರ್ತೆಗೆದುಕೊಂಡು ಹೋಗುವಂತೆ ತಿಳಿಸಿದ್ದ. ಆದರೆ, ಅರ್ಬಾಜ್ಮುಖ್ಯ ರಸ್ತೆಯಿಂದ ಒಳ ರಸ್ತೆಗೆ ಬಂದು ಕೊರಿಯರ್ಕೊಡುವಂತೆ ತಿಳಿಸಿದ್ದ.
ಇದಕ್ಕೆ ಒಪ್ಪದ ಮೊಹಮ್ಮದ್ರಫಿ, ಒಳ ರಸ್ತೆಗೆ ಬರುವುದಿಲ್ಲ. ಬೇಕಾದರೆ ಮುಖ್ಯ ರಸ್ತೆಗೆ ಬಂದು ಪಾರ್ಸಲ್ತೆಗೆದುಕೊಳ್ಳುವಂತೆ ತಾಕೀತು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೊರಿಯರ್ ಬಾಯ್ ಗಂಭೀರಬಳಿಕ ಅರ್ಬಾಜ್ತನ್ನ ತಾಯಿಯನ್ನು ಮುಖ್ಯ ರಸ್ತೆಗೆ ಕಳುಹಿಸಿದ್ದ.
ಆಗ ರಫಿ, ಒಟಿಪಿ ಬೇಕೆಂದು ಹೇಳಿ ಕೊರಿಯರ್ಪಾರ್ಸಲ್ಕೊಡದೆ ಅರ್ಬಾಜ್ನ ತಾಯಿಯನ್ನು ವಾಪಸ್ಕಳುಹಿಸಿದ್ದ. ಇದರಿಂದ ಕೆರಳಿದ ಅರ್ಬಾಜ್ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಹೋಗಿ ರಫಿಯ ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ಇರಿದು ಪರಾರಿಯಾಗಿದ್ದ. ತೀವ್ರ ರಕ್ತಸ್ರಾವವಾಗಿ ಒದ್ದಾಡುತ್ತಿದ್ದ ರಫಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.