ಮುಖ್ಯೋಪಾಧ್ಯಾಯ ಜಿತೇಂದ್ರಕುಮಾರ್ ಆತ್ಮೀಯ ಬೀಳ್ಕೊಡುಗೆ ನೀಡಿದ ಮಕ್ಕಳು, ಶಿಕ್ಷಕರು

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮುಖ್ಯೋಪಾಧ್ಯಾಯ ಜಿತೇಂದ್ರ ಕುಮಾರ್ ಸಮಸ್ಯೆಗಳಿಗೆ ಎದೆಗುಂದದೆ ಆತ್ಮಬಲದಿಂದ ಜಯಿಸಿ ಬದುಕಿನ ಸವಾಲುಗಳಿಗೆ ಎದೆಕೊಟ್ಟು ವೃತ್ತಿಯಲ್ಲಿ ವಿಜೇತರಾಗಿ ನಿವೃತ್ತಿ ಹೊಂದಿದ್ದು ಅವರ ನಿವೃತ್ತಿ ಜೀವನ ಸದಾ ಬೆಳಗಲಿ ಎಂದು ನಿವೃತ್ತ ಪ್ರಾಂಶುಪಾಲ ಎಸ್.ಹೆಚ್.ರಂಗನಾಥ್ ಹಾರೈಸಿದರು.

- Advertisement - 

ರಾಮನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರಾಗಿ ದುಡಿದು ಪ್ರಸ್ತುತ ಡಾ.ಬಿ ಆರ್ ಅಂಬೇಡ್ಕರ್ ಪ್ರೌಢಶಾಲೆ ಹೊಸ ಕಬ್ಬಾಳುವಿನಲ್ಲಿ ತಮ್ಮ ವೃತ್ತಿ ಬದುಕಿನ ಹೊಸ ಹೆಬ್ಬಾಳಾಗಿ ಪರಿವರ್ತನೆ ಹೊಂದಿ ನಿವೃತ್ತ ಜೀವನದ ಹೊಸ್ತಿಲಿನಲ್ಲಿದ್ದಾರೆ. ಆ ಭಗವಂತನ ಆಶೀರ್ವಾದ ಇವರ ಮೇಲೆ ಸದಾ ಇರಲಿ ಇವರ ವಿಶ್ರಾಂತಿ ಜೀವನ ಸದಾ ಸುಖದಾಯಕವಾಗಿರಲಿ. ದೇವರು ಇವರಿಗೆ ಆಯುರ್ ಆರೋಗ್ಯ ಐಶ್ವರ್ಯ ಧನ ಕನಕಾದಿಸಿರಿ ಸಂಪತ್ತು ಸಕಲ ಇಷ್ಟಾರ್ಥ ಕೀರ್ತಿ ಪ್ರೀತಿಗಳನ್ನು ಕೊಡಲಿ ಎಂದು ಹಾರೈಸಿದರು.

- Advertisement - 

ನಂದಾದೀಪದಂತೆ ತಾನು ಉರಿದು ಜಗಕ್ಕೆ ಬೆಳಗುವವರಂತೆ ಗುರು. ಗಂಧದಂತೆ ತಾನು ಸವೆದು ಜಗಕೆಲ್ಲ ಪರಿಮಳಪಸರಿಸುವವರಂತೆ ಗುರು. ಕಬ್ಬಿನಂತೆ ತಾನು ಹಿಂಡಿಹಿಪ್ಪೆಯಾಗಿ ನೊಂದು ಬೆಂದು ಜಗಕ್ಕೆ ಬೆಲ್ಲದ ಸವಿ ಕೊಡುವವರಂತೆ ಗುರು ಎಂಬ ಮಾತಿದೆ. ಆದರೆ ಎಲ್ಲ ಗುರುಗಳಿಗೂ ಇದು ಅನ್ವಯಿಸುತ್ತದೆ ಎನ್ನಲಾಗುವುದಿಲ್ಲ. ಕೆಲವೇ ಕೆಲವು ಗುರುಗಳಿಗೆ ಒಪ್ಪುತ್ತದೆ ಅಂತಹ ಅಪರೂಪದ ಗುರುಗಳಲ್ಲಿ‌ ಜಿತೇಂದ್ರ ಕುಮಾರ್ ಕೂಡಾ ಒಬ್ಬರು ಎಂದು ಅವರು ತಿಳಿಸಿದರು.

ಶಿಕ್ಷಕ ವೃತ್ತಿಯಲ್ಲಿ ಹಲವಾರು ಕಷ್ಟ ನಷ್ಟ ಮಾನಸಿಕ ಹಿಂಸೆ, ಕಿರುಕುಳಗಳನ್ನು ಅನುಭವಿಸಿಯೂ ಮಕ್ಕಳಿಗೆ ವಿದ್ಯಾದಾನ ಮಾಡಿದರು. ಚಿನ್ನ ಬೆಂಕಿಯಲ್ಲಿ ಕಾಯಿಸಿದಷ್ಟು ಅದರ ಹೊಳಪು ಹೆಚ್ಚುವಂತೆ ಜಿತೇಂದ್ರ ಕುಮಾರವರು ವೈಯಕ್ತಿಕ ಬದುಕಿನ ಕಷ್ಟಕಾರ್ಪಣ್ಯಗಳಿಂದ ಬೆಂದು ಬಸವಳಿದಷ್ಟು ಮಾಗಿದ ಗುರುವಾದವರು ಎಂದು ಅವರು ಸ್ಮರಿಸಿದರು.
ಅಭಿಮಾನದ ಬೀಳ್ಕೊಡುಗೆ ಸ್ವೀಕರಿಸಿದ ಮುಖ್ಯೋಪಾಧ್ಯಾಯ ಜಿತೇಂದ್ರ ಕುಮಾರ್ ಮಾತನಾಡಿ ಭಾವುಕರಾದರು.

- Advertisement - 

ಇದೇ ಸಂದರ್ಭದಲ್ಲಿ ಜಿತೇಂದ್ರ ಅವರು ಹುಟ್ಟೂರು ಸಮುದ್ರದಹಳ್ಳಿಯ ತಂದೆ ಎಸ್.ಹೆಚ್.ಹೊರಕೇರಪ್ಪ, ತಾಯಿ ಲಕ್ಕಮ್ಮ, ಸಹೋದರ ನಿವೃತ್ತ ಪ್ರಾಂಶುಪಾಲ ಎಸ್. ಹೆಚ್.ರಂಗನಾಥ್ ಅವರನ್ನು ನೆನೆದು ಈ ಮಟ್ಟಕ್ಕೆ ನಾನು ಬರಲು ಇವರೆಲ್ಲ ಮೆಟ್ಟಿಲುಗಳಾಗಿದ್ದಾರೆಂದು ಭಾವುಕರಾದರು.
ಬೀಳ್ಕೊಡುಗೆ ಸಮಾರಂಭದಲ್ಲಿ ಗಣ್ಯರು ಇದ್ದರು.

Share This Article
error: Content is protected !!
";