ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಯೋನಿವೃತ್ತಿ ಹೊಂದಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಅವರಿಗೆ ಆತ್ಮೀಯವಾಗಿ ಬಿಳ್ಕೋಡಲಾಯಿತು.
ನಗರದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಬಿಳ್ಕೋಡುಗೆ ಸಮಾರಂಭ ನಡೆಯಿತು.
ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಅವರು ಆರೋಗ್ಯ ಇಲಾಖೆಯಲ್ಲಿ 30 ವರ್ಷಗಳ ಕಾಲ ಸತತ ಯಾವುದೇ ಅಡೆತಡೆ ಇಲ್ಲದೆ ಕಾರ್ಯನಿರ್ವಹಿಸಿ, ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಯಶಸ್ವಿಯಾಗಲು,
ಸಾರ್ವಜನಿಕ ವಲಯಗಳಲ್ಲಿ ಶಾಲೆ, ಕಾಲೇಜು, ಅಂಗನವಾಡಿ, ಸಮುದಾಯದಲ್ಲಿ ಆರೋಗ್ಯ ಶಿಕ್ಷಣ ನೀಡುವುದರ ಮುಖಾಂತರ ಪ್ರಚಾರ ಕಾರ್ಯ ಕೈಗೊಂಡು ವಾರ್ತಾ ಇಲಾಖೆಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದರ ಜೊತೆಗೆ ಆರೋಗ್ಯ ಶಿಕ್ಷಣ ನೀಡಿದ್ದನ್ನು ಮರೆಯುವಂತಿಲ್ಲ. ಅವರ ಮಾರ್ಗದರ್ಶನ ಸದಾ ಆರೋಗ್ಯ ಇಲಾಖೆಯ ಮೇಲೆ ಇರಲಿ ಎಂಬುದು ನಮ್ಮಗಳ ಆಶಯ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಅಭಿಪ್ರಾಯವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆಯ ವೈದ್ಯರಾದ ಡಾ.ನಾಗರಾಜ್, ತಾಲ್ಲೂಕು ಆರೋಗ್ಯ ಕಚೇರಿ ಸಿಬ್ಬಂದಿಗಳಾದ ಮಹಮ್ಮದ್ ಅಲಿ, ಅಬೀಬ್ ಉಲ್ಲಾ, ನಾಗರಾಜ, ನಾಗವೇಣಿ, ಪ್ರತಿಭಾ, ಜಿಲ್ಲಾ ಐಇಸಿ ವಿಭಾಗದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಕೃಷ್ಣನಾಯ್ಕ್, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ, ಸುನಂದಾದೇವಿ. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಎಚ್.ಬಿ.ಪೂಜಾರ್, ಚಂದ್ರಶೇಖರ್ ನಾಯಕ,
ಎಮ್.ಎಚ್. ವೀರೇಂದ್ರ ಪಾಟೀಲ್, ಲಲಿತಮ್ಮ., ಬಿ ಜಾನಕಿ, ಆರ್‍ಬಿಎಸ್‍ಕೆ ವೈದ್ಯಾಧಿಕಾರಿಗಳಾದ ಮಂಜುಳಾ, ಮಹೇಂದ್ರ ಕುಮಾರ, ವಾಣಿ, ಸುಪ್ರೀತಾ, ಮತ್ತು ತಂಡದವರು, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಾರುತಿ ಪ್ರಸಾದ, ಶ್ರೀನಿವಾಸ, ಪ್ರಸನ್ನಕುಮಾರ, ಗಂಗಾಧರ ರೆಡ್ಡಿ, ಬಾಗೇಶ್ ಉಗ್ರಾಣ, ಪ್ರಶಾಂತ, ತಿಪ್ಪೇಸ್ವಾಮಿ, ಪ್ರವೀಣ್ ಕುಮಾರ್, ನಾಗರಾಜ, ಕ್ಷಯ ರೋಗ ಮೇಲ್ವಿಚಾರಣಾ ಅಧಿಕಾರಿಗಳಾದ ಮಾರುತಿ ಮಹೇಂದ್ರ, ಡಿಎಚ್‍ಓ ಕಚೇರಿಯ ವೀರೇಶ, ಜಬ್ಬರ್ ಸೇರಿದಂತೆ ಮತ್ತಿತರರು ಇದ್ದರು.